Banner Top
Banner Content

ರಿಯಲ್‌ ಸ್ಟಾರ್‌ ಉಪೇಂದ್ರ ಹೊಸ ಸಿನೆಮಾ ಅನೌನ್ಸ್…

ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ!

ಕನ್ನಡ ಚಿತ್ರರಂಗದ ಡೈರೆಕ್ಟರ್ಸ್‌ಗಳ ಡೈರೆಕ್ಟರ್ಸ್‌ ಎನಿಸಿಕೊಂಡಿರುವ ರಿಯಲ್‌ ಸ್ಟಾರ್‌ ಉಪೇಂದ್ರ ಈಗ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ ಬೆನ್ನತ್ತಿದ್ದಾರೆ. ಉಪೇಂದ್ರ ಅವರ ಹೊಸ ಸಿನೆಮಾ ಘೋಷಣೆಯಾಗಿದೆ. ಈ ಚಿತ್ರಕ್ಕೆ ‘ನೆಕ್ಸ್ಟ್‌ ಲೆವೆಲ್‌’ ಎಂಬ ಟೈಟಲ್‌ ಇಡಲಾಗಿದೆ. ಇದು ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಅರವಿಂದ್‌ ಕೌಶಿಕ್‌ ನಿರ್ದೇಶನದಲ್ಲಿ ತರುಣ್‌ ಶಿವಪ್ಪ ನಿರ್ಮಾಣದಲ್ಲಿ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ ಮೂಡಿ ಬರುತ್ತಿದೆ.

 ‘ನೆಕ್ಸ್ಟ್‌ ಲೆವೆಲ್‌’ನಲ್ಲಿ ತರುಣ್ ಶಿವಪ್ಪ-ಅರವಿಂದ್‌ ಪ್ಲ್ಯಾನ್…

ಉಪೇಂದ್ರ ಅವರ ಸಿನೆಮಾಗಳು ಅಂದ್ರೆ ‘ನೆಕ್ಸ್ಟ್‌ ಲೆವೆಲ್‌’ ಇರುತ್ತದೆ. ಈಗ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾವನ್ನು ಮತ್ತೊಂದು ‘ಲೆವೆಲ್‌’ಗೆ ತಯಾರಿಸಲು ಚಿತ್ರತಂಡ ಸಜ್ಜಾಗಿದೆ. ನಿರ್ಮಾಪಕ ತರುಣ್‌ ಶಿವಪ್ಪ ಅವರ ‘ತರುಣ್‌ ಸ್ಟುಡಿಯೋಸ್‌’ ಬ್ಯಾನರ್‌ ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಸಂಸ್ಥೆಯಡಿ ತಯಾರಾಗುತ್ತಿರುವ ಚೊಚ್ಚಲ ಪ್ಯಾನ್‌ ಇಂಡಿಯಾ ಚಿತ್ರ ಇದಾಗಿದ್ದು, ಪ್ಯಾನ್‌ ಪ್ರೇಕ್ಷಕರನ್ನು ಗುರಿಯಾಗಿ ಇಟ್ಟುಕೊಂಡೆ ಸಿನೆಮಾ ಮಾಡಲಾಗುತ್ತದೆ.

‘ಉಪೇಂದ್ರ’ ಸ್ಟೈಲ್‌ನಲ್ಲಿ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ…

‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ ಬಗ್ಗೆ ಮಾತನಾಡಿರುವ ನಿರ್ಮಾಪಕ ತರುಣ್‌ ಶಿವಪ್ಪ, ”ತರುಣ್‌ ಸ್ಟುಡಿಯೋಸ್‌’ ಬ್ಯಾನರ್‌ ನಡಿ ನಿರ್ಮಾಣವಾಗುತ್ತಿರುವ ಆರನೇ ಚಿತ್ರವಿದು. ಬಾಲಿವುಡ್‌, ತೆಲುಗು, ತಮಿಳು ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಉಪೇಂದ್ರ ಅವರ ‘ಎ’, ‘ಉಪೇಂದ್ರ’ ಸ್ಟೈಲ್‌ನಲ್ಲಿ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ ಇರಲಿದೆ. ಸದ್ಯ ಪ್ರೀ-ಪ್ರೊಡಕ್ಷನ್‌ ವರ್ಕ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಯಲಿದೆ’ ಎಂದು ತಿಳಿಸಿದ್ದಾರೆ.

ನಿರೀಕ್ಷೆ ಹೆಚ್ಚಿಸಿದ ‘ನೆಕ್ಸ್ಟ್‌ ಲೆವೆಲ್‌’ ಟೈಟಲ್‌

‘ರೋಸ್’, ‘ಮಾಸ್ ಲೀಡರ್’, ‘ವಿಕ್ಟರಿ-2’, ‘ಖಾಕಿ’, ‘ಛೂ ಮಂತರ್‌’ ಸಿನೆಮಾಗಳನ್ನು ತರುಣ್‌ ಶಿವಪ್ಪ ನಿರ್ಮಾಣ ಮಾಡಿದ್ದಾರೆ. ‘ನಮ್ ಏರಿಯಾಲ್ ಒಂದಿನ’, ‘ತುಗ್ಲಕ್’, ‘ಹುಲಿರಾಯ’ ಹಾಗೂ ‘ಶಾರ್ದೂಲʼ ಚಿತ್ರಗಳನ್ನು ಅರವಿಂದ್‌ ಕೌಶಿಕ್‌ ನಿರ್ದೇಶಿಸಿದ್ದರು. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಸಿನೆಮಾಗಳನ್ನು ಕೊಟ್ಟಿರುವ ಬುದ್ಧಿವಂತ ನಿರ್ದೇಶಕ ಉಪೇಂದ್ರ ಜೊತೆ ಅರವಿಂದ್‌ ಕೌಶಿಕ್‌ ಹಾಗೂ ತರುಣ್‌ ಶಿವಪ್ಪ ಕೈ ಜೋಡಿಸಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.

Banner Content
Tags: , , , , , ,

Related Article

Sponsored Ads1

error: Content is protected !!