Banner Top
Banner Content

‘ಸ್ವಯಂಭು’ ಬಿಡುಗಡೆ ದಿನಾಂಕ ಘೋಷಣೆ

ಮಹಾಶಿವರಾತ್ರಿಗೆ ನಿಖಿಲ್ ಸಿದ್ದಾರ್ಥ್ ನಟನೆಯ ‘ಸ್ವಯಂಭು’ ರಿಲೀಸ್

ಮಹಾಶಿವರಾತ್ರಿಗೆ ನಿಖಿಲ್ ಸಿದ್ಧಾರ್ಥ್ ಚಿತ್ರ ರಿಲೀಸ್

ತೆಲುಗು ಚಿತ್ರರಂಗದ ಉದಯೋನ್ಮುಖ ನಟ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನೆಮಾ ‘ಸ್ವಯಂಭು’. ಈಗಾಗಲೇ ತನ್ನ ಟೈಟಲ್ ಹಾಗೂ ಮೇಕಿಂಗ್ ಮೂಲಕ ತೆಲುಗು ಚಿತ್ರರಂಗದಲ್ಲಿ ಒಂದಷ್ಟು ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಮುಂಬರುವ ಮಹಾಶಿವರಾತ್ರಿ ಅಂದರೆ, 2026 ಫೆಬ್ರವರಿ 13ಕ್ಕೆ ವಿಶ್ವಾದ್ಯಂತ ‘ಸ್ವಯಂಭು’ ಚಿತ್ರಮಂದಿರಗಳಿಗೆ ಎಂಟ್ರಿ‌ ಕೊಡಲಿದೆ.

ಪೋಸ್ಟ್‌ ಪ್ರೊಡಕ್ಷನ್ಸ್‌ನಲ್ಲಿ ‘ಸ್ವಯಂಭು’ ಬಿಝಿ…

ಸದ್ಯ ‘ಸ್ವಯಂಭು’ ಚಿತ್ರತಂಡ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳಲ್ಲಿ ನಿರತವಾಗಿದೆ. ಇತ್ತೀಚೆಗಷ್ಟೇ,  ಸ್ಪೆಷಲ್ ವಿಡಿಯೋ ಮೂಲಕ ಚಿತ್ರತಂಡ ಶೂಟಿಂಗ್ ಮುಗಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಅಂದಹಾಗೆ, ‘ಸ್ವಯಂಭು’ ನಟ ನಿಖಿಲ್‌ ಸಿದ್ಧಾರ್ಥ್‌ ಅವರ 20ನೇ ಸಿನೆಮಾವಾಗಿದೆ. ಈ ಚಿತ್ರಕ್ಕಾಗಿ ಬರೋಬ್ಬರಿ ಎರಡು ವರ್ಷ ತೆಗೆದಿರಿಸಿದ್ದಾರೆ. ಈಗಾಗಲೇ ಸುಮಾರು 170 ದಿನಗಳ ಕಾಲ ‘ಸ್ವಯಂಭು’ ಚಿತ್ರದ ಶೂಟಿಂಗ್ ನಡೆಸಲಾಗಿದೆ. ‘ಪಿಕ್ಸೆಲ್ ಸ್ಟುಡಿಯೋ’ ಮೂಲಕ ಭುವನ್ ಹಾಗೂ ಶ್ರೀಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಟ್ಯಾಗೋರೆ ಮಧು ಪ್ರಸ್ತುತಪಡಿಸುತ್ತಿದ್ದಾರೆ. ‘ಸ್ವಯಂಭು’ ಎಂದರೆ ಸ್ವಯಂ ಹುಟ್ಟು ಎಂದರ್ಥ. ಸಹಸ್ರಮಾನಗಳ ಹಿಂದಿನ ಕಥೆ ಒಳಗೊಂಡಿರುವ ‘ಸ್ವಯಂಭು’ ಸಿನೆಮಾ ನಿಖಿಲ್ ಸಿದ್ದಾರ್ಥ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರವಾಗಿದೆ. ಹಾಗಾಗಿಯೇ ತೆಲುಗು ಚಿತ್ರರಂಗದಲ್ಲಿ ಕೂಡ ಈ ಚಿತ್ರದ ಬಗ್ಗೆ ಸಹಜವಾಗಿಯೇ ಒಂದಷ್ಟು ನಿರೀಕ್ಷೆ ಮನೆ ಮಾಡಿದೆ.

‘ಸ್ವಯಂಭು’ ಚಿತ್ರಕ್ಕೆ ಕೆ. ಕೆ. ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ವಿಜಯ್ ಕಾಮಿಸೆಟ್ಟಿ ಚಿತ್ರಕ್ಕೆ ಸಂಭಾಷಣೆಯನ್ನು ನೀಡಿದ್ದಾರೆ. ತಮ್ಮಿರಾಜು‌ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಭರತ್ ಕೃಷ್ಣಮಾಚಾರಿ ಆಕ್ಷನ್-ಕಟ್ ಹೇಳಿರುವ ‘ಸ್ವಯಂಭು’ ಸಿನೆಮಾದಲ್ಲಿ ಸಂಯುಕ್ತ ನಾಯಕಿಯಾಗಿ ನಟಿಸುತ್ತಿದ್ದು, ನಭಾ ನಟೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Banner Content
Tags: , , , , , , ,
Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Article

Sponsored Ads1

error: Content is protected !!