Banner Top
Banner Content

‘ಪೆದ್ದಿ’ಯಲ್ಲಿ ‘ಅಚ್ಚಿಯಮ್ಮ’ನಾಗಿ ಕಾಣಿಸಿಕೊಂಡ ಜಾನ್ವಿ ಕಪೂರ್

ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್‌ ಬೆಡಗಿ ಜಾನ್ವಿ ಕಪೂರ್‌

ಜಾನ್ವಿ ಕಪೂರ್‌ ಹೊಸ ಲುಕ್‌ ಪ್ರೇಕ್ಷಕರಿಗೆ ಪರಿಚಯಿಸಿದ ಚಿತ್ರತಂಡ

‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ತೇಜ್‌ ಅಭಿನಯದ ತೆಲುಗಿನ ಬಹು ನಿರೀಕ್ಷಿತ ‘ಪೆದ್ದಿ’ ಸಿನೆಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಹಿಂದೆ ತೆಲುಗಿನ ಸೂಪರ್‌ ಹಿಟ್‌ ‘ಉಪ್ಪೆನ’ ಸಿನೆಮಾವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಈ ‘ಪೆದ್ದಿ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಇದೀಗ ‘ಪೆದ್ದಿ’ ಚಿತ್ರತಂಡ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ರಾಮ್ ಚರಣ್‌ ತೇಜ್‌ ಅಭಿನಯಿಸುತ್ತಿರುವ ‘ಪೆದ್ದಿ’ ಸಿನೆಮಾದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೌದು, ಈ ಸುದ್ದಿಯನ್ನು ಇದೀಗ ‘ಪೆದ್ದಿ’ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

‘ಪೆದ್ದಿ’ಯಲ್ಲಿ ‘ಅಚ್ಚಿಯಮ್ಮ’ನ ಫಸ್ಟ್‌ಲುಕ್‌ ಔಟ್‌

ಇದೀಗ ‘ಪೆದ್ದಿ’ ಚಿತ್ರತಂಡ ಜಾನ್ವಿ ಕಪೂರ್ ಅವರ ಪಾತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದೆ. ‘ಪೆದ್ದಿ’ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್‌ ‘ಅಚ್ಚಿಯಮ್ಮ’ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ‘ಪೆದ್ದಿ’ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಜಾನ್ವಿ ಕಪೂರ್‌ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜೀಪಿನ ಮೇಲೆ ನಿಂತು ತಲೆಯ ಮೇಲೆ ಕೈಗಳನ್ನು ಎತ್ತಿ‌ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಬಹುತಾರಾಗಣದ ಸ್ಪೋರ್ಟ್ಸ್‌ ಡ್ರಾಮಾ…

ಅಂದಹಾಗೆ, ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನೆಮಾದಲ್ಲಿ ಬಹು ಕಲಾವಿದರ ತಾರಾಗಣವಿದೆ. ‘ಪೆದ್ದಿ’ ಚಿತ್ರದಲ್ಲಿ ಕನ್ನಡದ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಒಂದು ಸ್ಪೆಷಲ್‌ ರೋಲ್  ಮಾಡುತ್ತಿದ್ದಾರೆ. ಇನ್ನುಳಿದಂತೆ, ಜಗಪತಿ ಬಾಬು, ದಿವೇಂದು ಶರ್ಮಾ ಮುಂತಾದವರು ‘ಪೆದ್ದಿ’ ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೆದ್ದಿ’ ಸ್ಫೋರ್ಟ್ ಆಕ್ಷನ್ ಡ್ರಾಮಾ ಸಿನೆಮಾವಾಗಿದ್ದು, ಈ ಚಿತ್ರಕ್ಕೆ ಎ. ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ವೃದ್ಧಿ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಈ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಮತ್ತು ‘ಸುಕುಮಾರ್ ರೈಟಿಂಗ್ಸ್’ ಬ್ಯಾನರ್‌ಗಳು ‘ಪೆದ್ದಿ’ ಚಿತ್ರಕ್ಕೆ ಬೆಂಬಲವಾಗಿ ನಿಂತಿವೆ. ಚಿತ್ರಕ್ಕೆ ಆರ್. ರತ್ನವೇಲು ಛಾಯಾಗ್ರಹಣ ಮಾಡುತ್ತಿದ್ದು, ಮುಂಬರುವ 2026ರ ಮಾರ್ಚ್ 27ಕ್ಕೆ ‘ಪೆದ್ದಿ’ ಸಿನೆಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ.

Banner Content
Tags: , , , , , ,

Related Article

Sponsored Ads1

error: Content is protected !!