Banner Top
Banner Content

ಶಿವಣ್ಣ ಬರ್ತಡೇಗೆ ‘ಪೆದ್ದಿ’ ಫಸ್ಟ್‌ ಲುಕ್‌ನ್ನು ಬಿಡುಗಡೆ 

ರಾಮ್‌ ಚರಣ್‌ ‘ಪೆದ್ದಿ’ ಸಿನಿಮಾದಲ್ಲಿ ‘ಗೌರ್ ನಾಯ್ಡು’ ಅವತಾರವೆತ್ತ ಶಿವರಾಜಕುಮಾರ್‌…

ರಾಮ್‌ ಚರಣ್‌ ಚಿತ್ರದಲ್ಲಿ ಹ್ಯಾಟ್ರಿಕ್‌ ಹೀರೋ ‘ಗೌರ್ ನಾಯ್ಡು’

ಗ್ಲೋಬಲ್‌ ಸ್ಟಾರ್‌ ರಾಮ್‌ ಚರಣ್‌ ನಾಯಕನಾಗಿ ನಟಿಸುತ್ತಿರುವ ‘ಪೆದ್ದಿ’ ಸಿನಿಮಾತಂಡ ಶಿವಣ್ಣ ಬರ್ತಡೇಗೆ ಶುಭ ಕೋರಿದೆ. ಶಿವಣ್ಣ ಅವರ ಫಸ್ಟ್‌ ಲುಕ್‌ನ್ನು ಬಿಡುಗಡೆ ಮಾಡಲಾಗಿದೆ. ‘ಗೌರ್‌ ನಾಯ್ಡು’ ಪಾತ್ರದಲ್ಲಿ ಹ್ಯಾಟ್ರಿಕ್‌ ಹೀರೋ ನಟಿಸುತ್ತಿದ್ದು, ಉಗ್ರ ನೋಟ, ದಪ್ಪ ಮೀಸೆ ಮತ್ತು ರಗಡ್‌ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ‘ಪೆದ್ದಿ’ ಸಿನಿಮಾದಲ್ಲಿ ಶಿವರಾಜಕುಮಾರ್‌ ಪವರ್‌ ಫುಲ್‌ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಸ್ಫೋರ್ಟ್‌ ಆಕ್ಷನ್‌-ಡ್ರಾಮಾ…

‘ಉಪ್ಪೇನ’ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನ ‘ಪೆದ್ದಿ’ ಸ್ಫೋರ್ಟ್‌ ಆಕ್ಷನ್‌-ಡ್ರಾಮಾ ಕಥಾಹಂದರವೊಂದಿದೆ. ರಾಮ್‌ ಚರಣ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು ಮತ್ತು ದಿವೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

2026 ರಲ್ಲಿ ‘ಪೆದ್ದಿ’ ಸಿನಿಮಾ ಬಿಡುಗಡೆ

‘ಪೆದ್ದಿ’ ಚಿತ್ರಕ್ಕೆ ಎ. ಆರ್. ರೆಹಮಾನ್ ಸಂಗೀತ ನೀಡುತ್ತಿದ್ದು, ವೆಂಕಟ ಸತೀಶ್ ಕಿಲಾರು ಹಣ ಹಾಕುತ್ತಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಮತ್ತು ‘ಸುಕುಮಾರ್ ರೈಟಿಂಗ್ಸ್’ ನಿರ್ಮಾಣದಲ್ಲಿ ಸಾಥ್ ನೀಡಿದೆ. ಆರ್. ರತ್ನವೇಲು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ‘ಪೆದ್ದಿ’ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷ ರಾಮ್‌ ಚರಣ್‌ ಹುಟ್ಟುಹಬ್ಬ ಅಂಗವಾಗಿ ಅಂದರೆ ಮಾರ್ಚ್ 27, 2026 ರಂದು ಬಹುಭಾಷಯಲ್ಲಿ ‘ಪೆದ್ದಿ’ ಬಿಡುಗಡೆಯಾಗಲಿದೆ.

Banner Content
Tags: , , , , ,

Related Article

Sponsored Ads1

error: Content is protected !!