Banner Top
Banner Content

‘ಸರೆಗಮ’ ಮ್ಯೂಸಿಕ್‌ ಪಾಲಾದ ‘ಮ್ಯಾಂಗೋ ಪಚ್ಚ’ ಆಡಿಯೋ

ಹೊಸ ಹೀರೋ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಆಡಿಯೋ ಹಕ್ಕು ಮಾರಾಟ

ಇದೇ 24ಕ್ಕೆ ‘ಮ್ಯಾಂಗೋ ಪಚ್ಚ’ ಚಿತ್ರದ ಮೊದಲ ಹಾಡು ರಿಲೀಸ್‌

ನಟ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಸಿನೆಮಾದ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ. ವಿವೇಕ ಚೊಚ್ಚಲ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರ್ತಿದೆ. ಈಗಾಗಲೇ ಟೀಸರ್ ಮೂಲಕ ಈಗಾಗಲೇ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚು ಮಾಡಿರುವ ‘ಮ್ಯಾಂಗೋ ಪಚ್ಚ’ ಸಿನೆಮಾದ ಆಡಿಯೋ ಹಕ್ಕುಗಳು ‘ಸರೆಗಮ’ ಮ್ಯೂಸಿಕ್‌ ಸಂಸ್ಥೆಯ ಪಾಲಾಗಿದೆ. ‘ಮ್ಯಾಂಗೋ ಪಚ್ಚ’ ಚಿತ್ರದ ಆಡಿಯೋ‌ ರೈಟ್ಸ್ ನ್ನು ‘ಸರೆಗಮ’ ಒಂದೊಳ್ಳೆ ಮೊತ್ತಕ್ಕೆ ಕೊಂಡುಕೊಂಡಿದೆ. ಇದು ಇಡೀ ಚಿತ್ರ ತಂಡದ ಖುಷಿಗೆ ಕಾರಣವಾಗಿದೆ.

‘ಮ್ಯಾಂಗೋ ಪಚ್ಚ’ನ ಕ್ರೈಂ-ಥ್ರಿಲ್ಲರ್‌ ಕಹಾನಿ…

2001ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ‘ಮ್ಯಾಗೋ ಪಚ್ಚ’ ಸಿನೆಮಾದಲ್ಲಿವೆ. ಕ್ರೈಂ-ಥ್ರಿಲ್ಲರ್ ಕಹಾನಿಯನ್ನು ಈ ಚಿತ್ರ ಹೊಂದಿದೆ. ಈ ಚಿತ್ರಕ್ಕೆ ‘ಕೆಆರ್‌ಜಿ’ ಮತ್ತು ಕಿಚ್ಚ ಸುದೀಪ್ ಅವರ ‘ಸುಪ್ರಿಯಾನ್ವಿ ಪ್ರೊಡಕ್ಷನ್ಸ್’ ಜಂಟಿಯಾಗಿ ಬಂಡವಾಳ ಹೂಡಿವೆ. ಪ್ರಿಯಾ ಸುದೀಪ್, ಕಾರ್ತಿಕ್, ಯೋಗಿ ಜಿ. ರಾಜ್ ಅವರು ನಿರ್ಮಾಪಕರಾಗಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ‘ಮ್ಯಾಂಗೋ ಪಚ್ಚ’ ಚಿತ್ರಕ್ಕಿದೆ.

ಫುಲ್‌ ಖುಷಿಯಾಗಿದ್ದಾರೆ ‘ಮ್ಯಾಂಗೋ ಪಚ್ಚ’ನ ನಿರ್ಮಾಪಕರು

‘ಮ್ಯಾಂಗೋ ಪಚ್ಚ’ ಚಿತ್ರದ ಆಡಿಯೋ ರೈಟ್ಸ್‌ ಒಳ್ಳೆ ಮೊತ್ತಕ್ಕೆ ಸೇಲ್ ಆಗಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ನಿರ್ಮಾಪಕಿ ಪ್ರಿಯಾ ಸುದೀಪ್, ‘ನಮ್ಮ ಸಿನೆಮಾದ ಆಡಿಯೋವನ್ನು ‘ಸರೆಗಮ’ ಮ್ಯೂಸಿಕ್‌ ಖರೀದಿಸಿರುವುದು ತುಂಬ ಖುಷಿತಂದಿದೆ. ಚರಣ್ ರಾಜ್ ಸಂಯೋಜಿಸಿದ ಸಂಗೀತವು ಪ್ರೇಕ್ಷಕರನ್ನು ಪ್ರತಿಧ್ವನಿಸುತ್ತದೆ ಮತ್ತು ಚಿತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದು ಖಚಿತ. ಚರಣ್ ಅವರ ಸಾಮರ್ಥ್ಯದ ಮೇಲೆ‌‌ ನಂಬಿಕೆ ಇದೆ. ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳನ್ನು ಕೇಳಲು ನಾನು ಕೂಡ ಉತ್ಸುಕಳಾಗಿದ್ದೇನೆ’ ಎಂದಿದ್ದಾರೆ. ಅಂದಹಾಗೆ, ‘ಮ್ಯಾಂಗೋ‌ ಪಚ್ಚ’ ಸಿನಿಮಾದ ಮೊದಲ ಹಾಡನ್ನು ಇದೇ‌ ನವೆಂಬರ್‌ ತಿಂಗಳ‌ 24ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Banner Content
Tags: , , , , , ,

Related Article

Sponsored Ads1

error: Content is protected !!