Banner Top
Banner Content

‘ಲೋ ನವೀನ…’ ನವೀನ್ ಸಜ್ಜು ಚೊಚ್ಚಲ ಸಿನೆಮಾ ಟೈಟಲ್ 

ನವೀನ್ ಸಜ್ಜು ಸಿನೆಮಾದ ಟೈಟಲ್‌ ರಿಲೀಸ್ ಮಾಡಿದ ತಾರೆಯರು

ತಮ್ಮ ವಿಶಿಷ್ಟ ಕಂಠ ಹಾಗೂ ಗಾಯನದ ಮೂಲಕ ಕನ್ನಡ ಸಿನಿ ರಸಿಕರು ಹಾಗೂ ಸಂಗೀತ ಪ್ರೇಮಿಗಳ ಮನ ಗೆದ್ದಿರುವ ಲೂಸಿಯಾ ಖ್ಯಾತಿಯ ಗಾಯಕ ನವೀನ್‌ ಸಜ್ಜು ಈಗ ಮೊದಲ ಬಾರಿಗೆ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನವೀನ್‌ ಸಜ್ಜು ಅಭಿನಯದ ಚೊಚ್ಚಲ ಸಿನೆಮಾಕ್ಕೆ ʼಲೋ ನವೀನ…ʼ ಎಂದು ಟೈಟಲ್‌ ಇಡಲಾಗಿದ್ದು, ಇತ್ತೀಚೆಗೆ ಈ ಸಿನೆಮಾದ ಟೈಟಲ್‌ ಪೋಸ್ಟರ್‌ ಬಿಡುಗಡೆಯಾಗಿದೆ. ನವೀನ್ ಹೊಸ ಪಯಣಕ್ಕೆ ಕನ್ನಡ ಚಿತ್ರರಂಗದ ತಾರೆಯರು ಸಾಥ್ ಕೊಟ್ಟಿದ್ದು, ʼಲೋ ನವೀನ…ʼ ಎಂದು ಸಿನಿಮಾದ ಟೈಟಲ್ ನ್ನು ಸ್ಯಾಂಡಲ್‌ ವುಡ್‌ ಹಾಗೂ ಕಿರುತೆರೆಯ 100 ಜನ ನಟ- ನಟಿಯರು ತಮ್ಮ, ತಮ್ಮ ಸೋಷಿಯಲ್‌ ಮೀಡಿಯಾಗಳ ಮೂಲಕ ನವೀನ್ ಸಜ್ಜು ಚೊಚ್ಚಲ ಸಿನೆಮಾಗೆ ಶುಭ ಕೋರಿದ್ದಾರೆ.

ಹಳ್ಳಿ ಸೊಗಡಿನ ಸಿನೆಮಾ…

ʼಲೋ ನವೀನ…ʼ, ಹಳ್ಳಿ ಸೊಗಡಿನ ಚಿತ್ರವಾಗಿದ್ದು. ಸ್ವತಃ ನವೀನ್‌ ಸಜ್ಜು ಅವರೇ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಧನುರ್ದಾರಿ ಪವನ್‌ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಮೂರು ಜನ ಸಿನಿಮಾಟೋಗ್ರಾಫರ್‌ ಗಳಿರುವುದು ವಿಶೇಷ. ʼಬಿಗ್‌ ಬಾಸ್‌ʼ ಖ್ಯಾತಿಯ ಅಕ್ಷತಾ ಪಾಂಡವಪುರ ಹಾಗೂ ಪ್ರಸನ್ನ ಸಾಗರ ಅವರ ವಸ್ತ್ರ ವಿನ್ಯಾಸ ಲೋ ನವೀನ ಚಿತ್ರಕ್ಕಿದೆ. ʼಎನ್‌ ಎಸ್‌-ನವೀನ್‌ ಸಜ್ಜು ಸ್ಟುಡಿಯೋʼ ಬ್ಯಾನರ್‌ ಅಡಿ ತಯಾರಾಗುತ್ತಿರುವ ಈ ಸಿನಿಮಾಗೆ ಅನಿವಾಸಿ ಭಾರತೀಯರಾದ ವರ್ಜೀನಿಯಾ ನಿವಾಸಿ ಕೀರ್ತಿ ಸ್ವಾಮಿ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ.

ಬೆಳ್ಳಿ ತೆರೆಯಲ್ಲಿ ಸಿಂಗರ್ ನವೀನ್‌ ಸಜ್ಜು ಅದೃಷ್ಟ ಪರೀಕ್ಷೆ

ಮೈಸೂರು, ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಯೋಜನೆ ಹಾಕಿಕೊಂಡಿದ್ದು, ಸಹ ನಟರು ಹಾಗು ತಂತ್ರಜ್ಞರ ಪಟ್ಟಿ ಅಂತಿಮಗೊಂಡಿದೆ. ಚಿತ್ರದ ನಾಯಕಿಯಾಗಿ ಹೊಸಬರನ್ನು ಈ ಚಿತ್ರದ ಮೂಲಕ ಚಂದನವನಕ್ಕೆ ಚಿತ್ರತಂಡ ಪರಿಚಯ ಮಾಡಲಿದೆ. ನವೀನ್ ಸಜ್ಜು ಮುಖ್ಯಪಾತ್ರದಲ್ಲಿ ನಟಿಸಿರುವ ʼಮ್ಯಾನ್‌ ಷನ್‌ ಹೌಸ್‌ ಮುತ್ತುʼ ಚಿತ್ರವು ಬಿಡುಗಡೆಗೆ ಸಿದ್ದಗೊಂಡಿರುವ ಹೊತ್ತಿನಲ್ಲೇ ʼಲೋ ನವೀನ…ʼ ಚಿತ್ರ ಸೆಟ್ಟೇರಿದೆ. ʼಕಲರ್ಸ್‌ ಕನ್ನಡʼದ ʼಚುಕ್ಕಿʼ ತಾರೆ ಧಾರಾವಾಹಿಯಲ್ಲಿ ಮಾಗಡಿ ರೋಡ್‌ ಮಲ್ಲಿಕಾರ್ಜುನನಾಗಿ ತಮ್ಮ ನಟನಾ ಕೌಶಲ್ಯದಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಸಿಂಗರ್ ನವೀನ್‌ ಸಜ್ಜು ಬೆಳ್ಳಿ ತೆರೆಯ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Banner Content
Tags: , , , ,

Related Article

Sponsored Ads1

error: Content is protected !!