Banner Top
Banner Content

‘ಸ್ವಯಂಭು’ ಚಿತ್ರದ ‘ಬಾ ಬಾ ಧೀವರ…’ ಹಾಡು ಬಿಡುಗಡೆ

ನಿಖಿಲ್ ಸಿದ್ದಾರ್ಥ್ ನಟನೆಯ ‘ಸ್ವಯಂಭು’ವಿನ ‘ಬಾ ಬಾ ಧೀವರ…’ ಸಾಂಗ್ ರಿಲೀಸ್

ಬಹುಭಾಷೆಗಳಲ್ಲಿ ಹೊರಬಂತು ‘ಸ್ವಯಂಭು’ ಹಾಡು

ತೆಲುಗಿನ ಪ್ರತಿಭಾನ್ವಿತ ನಟ ನಿಖಿಲ್ ಸಿದ್ಧಾರ್ಥ್ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ‘ಸ್ವಯಂಭು’ ಸಿನೆಮಾ ತೆರೆಗೆ ಬರುತ್ತಿದೆ. ಸದ್ಯ ‘ಸ್ವಯಂಭು’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ‘ಸ್ವಯಂಭು’ ಚಿತ್ರದ ‘ಬಾ ಬಾ ಧೀವರ…’ ಎಂಬ ಹಾಡನ್ನು ಬಿಡುಗಡೆ ಮಾಡಿದೆ.

ಇನ್ನು ಬಹುಭಾಷೆಯಲ್ಲಿ‌ ‘ಸ್ವಯಂಭು’ ಚಿತ್ರದ ‘ಬಾ ಬಾ ಧೀವರ…’ ಹಾಡು ಬಿಡುಗಡೆ ಆಗಿದೆ. ಕನ್ನಡದಲ್ಲಿ ಈ ಹಾಡಿಗೆ ರವಿ ಬಸ್ರೂರ್ ಸಾಹಿತ್ಯ ಬರೆದಿದು, ಸಂಗೀತ ಒದಗಿಸಿದ್ದಾರೆ. ಸಂತೋಷ್ ವೆಂಕಿ ಹಾಡಿಗೆ ಧ್ವನಿಯಾಗಿದ್ದಾರೆ. ನಿಖಿಲ್ ಸಿದ್ದಾರ್ಥ್ ಹಾಗೂ ನಭಾ ನಟೇಶ್ ಅದ್ದೂರಿ ಸೆಟ್ ನಲ್ಲಿ ಈ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ಜೊತೆಗೆ ಸಂಯುಕ್ತಾ, ನಭಾ ನಟೇಶ್ ಮತ್ತು ನವಾಬ್ ಶಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಪಿಕ್ಸೆಲ್ ಸ್ಟುಡಿಯೋ’ ಮೂಲಕ ಭುವನ್ ಹಾಗೂ ಶ್ರೀಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಟ್ಯಾಗೋರೆ ಮಧು ಪ್ರಸ್ತುತಪಡಿಸುತ್ತಿದ್ದಾರೆ. ‘ಸ್ವಯಂಭು’ ಎಂದರೆ ಸ್ವಯಂ ಹುಟ್ಟು ಎಂದರ್ಥ. ಸಹಸ್ರಮಾನಗಳ ಹಿಂದಿನ ಕಥೆ ಒಳಗೊಂಡಿರುವ ‘ಸ್ವಯಂಭು’ ಸಿನೆಮಾ ನಿಖಿಲ್ ಸಿದ್ದಾರ್ಥ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರವಾಗಿದೆ.

‘ಸ್ವಯಂಭು’ ಚಿತ್ರದ ‘ಬಾ ಬಾ ದೀವರ…’ ಹಾಡಿನ ಲಿರಿಕಲ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಭಾರತ್ ಕೃಷ್ಣಮಾಚಾರಿ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘KGF’ ಮತ್ತು ‘ಸಲಾರ್’ ಖ್ಯಾತಿಯ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ‘ಬಾಹುಬಲಿ’ ಮತ್ತು ‘RRR’ ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದ ಕೆ. ಕೆ. ಸೆಂಥಿಲ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ‘ಬಾಹುಬಲಿ’ ಖ್ಯಾತಿಯ ತಮ್ಮಿರಾಜು ಸಂಕಲನಕಾರರಾಗಿ ಕೆಲಸ ಮಾಡಿದ್ದು, ವಿಜಯ್ ಕಾಮಿಸೆಟ್ಟಿ ಚಿತ್ರಕ್ಕೆ ಸಂಭಾಷಣೆಯನ್ನು ನೀಡಿದ್ದಾರೆ. ಚಿತ್ರವು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಚೈನೀಸ್, ಸ್ಪಾನಿಷ್ ಹಾಗೂ ಅರೇಬಿಕ್ ಭಾಷೆಯಲ್ಲಿ ತೆರೆಗೆ ಬರಲಿದೆ.

Banner Content
Tags: , , , , , , ,

Related Article

Sponsored Ads1

error: Content is protected !!