Banner Top
Banner Content

ಸಿನಿಮಾ ಪ್ರಿಯರಿಗೆ ಬಂಪರ್ ಆಫರ್…

‘ಕವಲುದಾರಿ’ಯಂತಹ ಗಂಭೀರ ಸಿನಿಮಾಗೂ ಸೈ.. ‘ನೋಡಿ ಸ್ವಾಮಿ ಇವನು ಇರೋದು ಹೀಗೆ’, ‘ಆಪರೇಷನ್ ಅಲಮೇಲಮ್ಮ’ ದಂತಹ ಕಾಮಿಡಿ ಚಿತ್ರಗಳಲ್ಲಿಯೂ ನಟಿಸಿ ಗಮನ ಸೆಳೆದಿರುವ ರಿಷಿ ಇದೀಗ ‘ರಾಮನ ಅವತಾರ’ ಮೂಲಕ ಪ್ರೇಕ್ಷಕರ ಎದುರು ಬರ್ತಿದ್ದಾರೆ. ಹೌದು, ರಿಷಿ ಅಭಿನಯದ ಹೊಸ ಸಿನಿಮಾ ʼರಾಮನ ಅವತಾರʼ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ʼರಾಮನ ಅವತಾರʼ ಸಿನಿಮಾದ ಪ್ರಚಾರ ಕಾರ್ಯಗಳು ಕೂಡ ಭರದಿಂದ ಸಾಗುತ್ತಿದ್ದು, ಇದೇ ಮೇ 10 ರಂದು ಸಿನಿಮಾ ತೆರೆಗೆ ಬರುತ್ತಿದೆ.

ರಿಷಿ ʼರಾಮನ ಅವತಾರʼ ಸಿನಿಮಾ ಟಿಕೆಟ್ ರೇಟ್‌ ಜಸ್ಟ್ 99 ರೂ.

ಅಂದಹಾಗೆ, ಈಗಾಗಲೇ ವಿಭಿನ್ನ ಪ್ರಮೋಷನ್ ವಿಡಿಯೋ ಮೂಲಕ ʼರಾಮನ ಅವತಾರʼ ಬಳಗ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗ ಚಿತ್ರತಂಡದ ಕಡೆಯಿಂದ ಮೆಗಾ ಆಫರ್ ವೊಂದು ಸಿಕ್ಕಿದೆ. ಅದೇನೆಂದರೆ, ʼರಾಮನ ಅವತಾರʼ ಸಿನಿಮಾದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಸಿಂಗಲ್ ಸ್ಕ್ರೀನ್ ಜೊತೆಗೆ ಮಲ್ಟಿಫ್ಲೆಕ್ಸ್ ಗಳಲ್ಲಿ ಟಿಕೆಟ್ ದರ ತಗ್ಗಿಸಲಾಗಿದ್ದು, ಕೇವಲ 99 ರೂಪಾಯಿ ʼರಾಮನ ಅವತಾರʼ ಸಿನಿಮಾವನ್ನು ನೀವು ಕಣ್ತುಂಬಿಕೊಳ್ಳಬಹುದು.

ಮೇ 9ಕ್ಕೆ ಪ್ರೀಮಿಯರ್..ಮೇ 10ಕ್ಕೆ ಚಿತ್ರ ರಿಲೀಸ್
ರಾಮನ ಅವತಾರ ಸಿನಿಮಾ ಮೇ 10ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೇ 10ಕ್ಕೂ ಮುನ್ನ ಒಂದು ದಿನ ಮೊದಲು ಅಂದ್ರೆ ಮೇ 9ರಂದು ಪೇಯ್ಡ್ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ. ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್ ದರ ಕೂಡ 99ರೂಪಾಯಿಗೆ ನಿಗದಿ ಮಾಡಲಾಗಿದೆ. ಕೇವಲ ಈ ಒಂದು ದಿನ ಮಾತ್ರವಲ್ಲ. ಚಿತ್ರ ಬಿಡುಗಡೆ ದಿನ ಅಂದ್ರೆ ಮೇ 10ಕ್ಕೂ ಕೂಡ ಟಿಕೆಟ್ ಬೆಲೆ 99ರೂಪಾಯಿ ಇರಲಿದೆ. ಮೇ 9 ಹಾಗೂ ಮೇ 10ರಂದು ರಾಮನ ಅವತಾರ ಸಿನಿಮಾದ ಟಿಕೆಟ್ ಬೆಲೆ 99ರೂಪಾಯಿಗೆ ದೊರೆಯಲಿದೆ.

ʼರಾಮನʼ ಜೊತೆ ಬೃಹತ್‌ ಕಲಾವಿದರ ತಾರಾಗಣ 
ʼರಾಮನ ಅವತಾರʼ ಸಿನಿಮಾದಲ್ಲಿ ರಿಷಿಗೆ ಜೋಡಿಯಾಗಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ಸಾಥ್ ಕೊಟ್ಟಿದ್ದಾರೆ. ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಕಾಸ್ ಪಂಪಾಪತಿ ಸಾರಥ್ಯದಲ್ಲಿ ಚಿತ್ರ ಮೂಡಿ ಬಂದಿದ್ದು, ನಿರ್ದೇಶಕರಾಗಿ ಇವರಿಗೆ ಇದು ಮೊದಲ ಸಾಹಸ. ʼರಾಮನ ಅವತಾರʼ ಸಿನಿಮಾದ ಮೂಲಕ ವಿಕಾಸ್, ಮಾರ್ಡನ್ ರಾಮನ ಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ. ಟ್ರೇಲರ್ ನೋಡ್ತಿದ್ರೆ ರಾಮಾಯಣ ನೆನಪಿಸುವ ಒಂದಷ್ಟು ದೃಶ್ಯಗಳು ಕಾಣುತ್ತವೆ. ರಾಮ ಹೆಗೆ ಜೆಂಟಲ್ ಮ್ಯಾನ್ ಆಗ್ತಾನೆ? ರಾವಣನ ರೀತಿ ಸಮಸ್ಯೆಗಳನ್ನು ಹೇಗೆ ಎದುರಿಸ್ತಾನೆ ಅನ್ನೋದನ್ನು ಕಟ್ಟಿಕೊಡಲಾಗದೆ.

ʼಸ್ಟಾರ್ ಫ್ಯಾಬ್ ಪ್ರೊಡಕ್ಷನ್ʼ ನಡಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಕಲನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ.

Banner Content
Tags: , , ,

Related Article

Sponsored Ads1

error: Content is protected !!