Banner Top
Banner Content

ಸದ್ದಿಲ್ಲದೆ ಐವತ್ತು ದಿನ ಪೂರೈಸಿದ ‘ಬ್ಲಿಂಕ್‌’
ಚಿತ್ರತಂಡದ ಮೋಗದಲ್ಲಿ ಮೂಡಿದ ಗೆಲುವಿನ ನಗು

ಕೆಲ ತಿಂಗಳ ಹಿಂದೆ ಕನ್ನಡದಲ್ಲಿ’ಬ್ಲಿಂಕ್‌ʼ ಎಂಬ ಸಿನಿಮಾ ತೆರೆಕಂಡಿದ್ದು ಬಹುತೇಕರಿಗೆ ನೆನಪಿರಬಹುದು. ಇದೀಗ ಈ ‘ಬ್ಲಿಂಕ್‌’ ಸಿನಿಮಾ ಸದ್ದಿಲ್ಲದೆ 50 ದಿನಗಳನ್ನು ಪೂರೈಸಿದೆ.ಹೌದು, ಶ್ರೀನಿಧಿ ಬೆಂಗಳೂರು ನಿರ್ದೇಶನದ ಟೈಮ್‌ ಟ್ರಾವೆಲ್‌ ಸಿನಿಮಾ’ಬ್ಲಿಂಕ್‌’ ಸಿನಿಮಾ ಮೊದಲು ಥಿಯೇಟರಿನಲ್ಲಿ ಬಿಡುಗಡೆಯಾಗಿದ್ದು, ಆ ಬಳಿಕ ಕೆಲವೇ ದಿನಗಳಲ್ಲಿ ʼಅಮೇಜಾನ್ʼ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಸದ್ಯ ಓಟಿಟಿಯಲ್ಲಿ ‘ಬ್ಲಿಂಕ್‌’ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಈ ಸಿನಿಮಾದ ಕುರಿತು ಜನ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈಗಾಗಲೇ ಥಿಯೇಟರ್‌ ಮತ್ತು ಓಟಿಟಿ ಯಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ‘ಬ್ಲಿಂಕ್‌’ ಸಿನಿಮಾ ಇದೀಗ ಯಶಸ್ವಿಯಾಗಿ 50 ದಿನ ಪೂರೈಸಿದೆ. ʼಕನ್ನಡ ಸಿನಿಮಾಗಳನ್ನು ಪ್ರೇಕ್ಷಕರು ನೋಡುತ್ತಿಲ್ಲʼ ಎಂಬ ಅಪವಾದದ ನಡುವೆ ‘ಬ್ಲಿಂಕ್‌’ ಹಾಫ್‌ ಸೆಂಚೂರಿ ಬಾರಿಸಿರುವುದು ಇಡೀ ತಂಡಕ್ಕೆ ಖುಷಿ ಕೊಟ್ಟಿದೆ. ಈ ಖುಷಿಯನ್ನು ಚಿತ್ರತಂಡ ಮಾಧ್ಯಮದವರೊಂದಿಗೆ ಹಂಚಿಕೊಂಡಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ‘ಬ್ಲಿಂಕ್‌’ ಸಿನಿಮಾದ 50 ದಿನಗಳ ಸಕ್ಸಸ್‌ ಸಂಭ್ರಮದಲ್ಲಿ ಮಾತನಾಡಿದ ನಿರ್ಮಾಪಕ ರವಿಚಂದ್ರ ಎ. ಜೆ, ʼಸಿನಿಮಾ ಈ ಲೆವೆಲ್ ಗೆ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಮನೆಯವರು ಖುಷಿಯಾಗಿದ್ದಾರೆ. ತಂಡ ಖುಷಿಯಾಗಬೇಕು ಎಂದರೆ ಅಂದುಕೊಂಡಿರುವ ದೊಡ್ಡ ಗೆಲುವು ಬರಬೇಕು. ಇಡೀ ಸಿನಿಮಾ ತಂಡ ಪ್ರಾಮಾಣಿಕವಾಗಿ ದುಡಿದಿದೆ. ಅವರಿಗೆಲ್ಲಾ ಮುಂದೆ ಒಳ್ಳೆ ಸಿನಿ ಕರಿಯರ್ ಸಿಗಬೇಕು. ಆದಷ್ಟು ಬೇಗ ‘ಬ್ಲಿಂಕ್‌’ ಸಿನಿಮಾವನ್ನು ತೆಲುಗಿಗೂ ಡಬ್ ಮಾಡಿಸುತ್ತೇವೆ. ತಮಿಳು ಡಬ್ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಸಿನಿಮಾಗೆ ಭಾಷೆಯ ಎಲ್ಲೆ ಇಲ್ಲʼ ಎಂದರು.

‘ಬ್ಲಿಂಕ್‌’ ಸಿನಿಮಾದ ನಾಯಕ ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ʼಬಹಳ ಖುಷಿಯಾಗುತ್ತಿದೆ. ಎಷ್ಟೋ ವರ್ಷಗಳ ನಂತರ ಹೊಸಬರ ತಂಡ 50 ದಿನಗಳ ಕಾಲ ಸಿನಿಮಾವನ್ನು ಥಿಯೇಟರ್ ನಲ್ಲಿ ಉಳಿಸಿಕೊಂಡಿದ್ದೇವೆ. ನಮಗೆ ನಂಬಲು ಆಗುತ್ತಿಲ್ಲ. ಮೊದಲ ದಿನದಿಂದ ಇಲ್ಲಿವರೆಗೂ ಬಹಳಷ್ಟು ಹೋರಾಟ ಮಾಡಿದ್ದೇವು. ನಾವು ಜನರನ್ನು ಕರೆದುಕೊಂಡು ಥಿಯೇಟರ್ ತುಂಬಿಸುತ್ತಿದ್ದೇವೆ ಎಂದು ಒಂದಷ್ಟು ಜನ ಮಾತಾನಾಡಿಕೊಂಡರು. ಹಾಗೇ ಹೇಳಿದವರಿಗೆ ಉತ್ತರ 50 ದಿನ. ಸಿನಿಮಾ ಅಷ್ಟು ಕೋಟಿ ಮಾಡಬೇಕು. ಇಷ್ಟು ಕೋಟಿ ಮಾಡಬೇಕು ಎನ್ನುವುದು ನನ್ನ ತಲೆಯಲ್ಲಿ ಇರಲಿಲ್ಲ. ನಿರ್ಮಾಪಕರು ಗೆಲ್ಲಬೇಕು. ನಿಲ್ಲಬೇಕು ಅನ್ನುವುದಷ್ಟೇ ಇತ್ತು. ಹಾಕಿದ ಬಂಡವಾಳ ವಾಪಸ್ ಬರುವುದರಲ್ಲಿದೆ. ಹೀಗಾಗಿ ಖುಷಿ ಇದೆ ಎಂದು ಭಾವಿಸಿದ್ದೇನೆʼ ಎಂದು ಈ ಗೆಲುವಿಗೆ ಕಾರಣರಾದ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು.

ಓಟಿಟಿಯಲ್ಲಿಯೂ ‘ಬ್ಲಿಂಕ್‌’ ಸಿನಿಮಾಕ್ಕೆ ಬಹುಪರಾಕ್
ಥಿಯೇಟರ್ ನಲ್ಲಿ ಉತ್ತಮ ಮೆಚ್ಚುಗೆ ಪಡೆದಿದ್ದ ‘ಬ್ಲಿಂಕ್‌’ ಸಿನಿಮಾ ಓಟಿಟಿಯಲ್ಲಿಯೂ ಸದ್ದು ಮಾಡಿದೆ. ʼಅಮೇಜಾನ್ ಪ್ರೈಮ್ʼಗೆ ಎಂಟ್ರಿ ಕೊಟ್ಟು 3 ದಿನದಲ್ಲಿಯೇ 7 ಮಿಲಿಯನ್ಸ್ ಮಿನಿಟ್ ಸ್ಟ್ರೀಮಿಂಗ್ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದು, 4 ನೇ ದಿನ 10 ಮಿಲಿಯನ್ ಮಿನಿಟ್ಸ್ ರೀಚ್ ಆಗಿದೆ. ಹೊಸಬರ ಚಿತ್ರಕ್ಕೆ ಇಷ್ಟು ಒಳ್ಳೆ ರೆಸ್ಪಾನ್ಸ್ ಸಿಕ್ಕಿರುವುದು ಖುಷಿಯ ವಿಷಯ.
‘ಬ್ಲಿಂಕ್’ ಚಿತ್ರಕ್ಕೆ ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿದ್ದಾರೆ. ರವಿಚಂದ್ರ ಎ.ಜೆ. ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಚೈತ್ರಾ ಆಚಾರ್, ಗೋಪಾಲ್ ದೇಶಪಾಂಡೆ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ.

ಶಿವರಾತ್ರಿ ಹಬ್ಬದಂದು ಸೂಪರ್ ಸ್ಟಾರ್ಸ್ ಸಿನಿಮಾಗಳ ಮಧ್ಯೆ ತೆರೆಗೆ ಬಂದ ‘ಬ್ಲಿಂಕ್’ ಸಿನಿಮಾಗೆ ಪ್ರಾರಂಭದಲ್ಲಿ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದು ಮೂರರಲ್ಲಿ ಮತ್ತೊಂದು ಸಿನಿಮಾ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಆರಂಭದ ದಿನಗಳಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು, ಸಿನಿಮಾದ ಬಗ್ಗೆ ಮಾತನಾಡಿ ಆದ ಮೌತ್ ಪಬ್ಲಿಸಿಟಿಯಿಂದ ‘ಬ್ಲಿಂಕ್’ ಶೋಗಳು ಏರಿಕೆಯಾಗುತ್ತಾ ಹೋದವು. ಕನ್ನಡ ಸಿನಿಮಾಗಳಿಗೆ ಶೋ ಸಿಕ್ತಿಲ್ಲ ಎಂಬ ಆಪವಾದದ ನಡುವೆ 8 ಶೋಗಳಿಂದ 82 ಶೋ ಬ್ಲಿಂಕ್ ಪಾಲಾಗಿತ್ತು. ಹೀಗಾಗಿ ಶೋ ಹೆಚ್ಚಳದಿಂದ ಪ್ರೇಕ್ಷಕರ ಪ್ರೀತಿಯೂ ಪಡೆದ ಬ್ಲಿಂಕ್ ಸಿನಿಮಾ ಆಫ್ ಸೆಂಚೂರಿ ಬಾರಿಸಿದೆ.

Banner Content
Tags: ,

Related Article

Sponsored Ads1

error: Content is protected !!