Banner Top
Banner Content

ಮತ್ತೊಂದು ಪ್ರೇಮಕಥೆಯೊಂದಿಗೆ ಬಂದ ರಶ್ಮಿಕಾ ಮಂದಣ್ಣ..

‘ದಿ ಗರ್ಲ್ ಫ್ರೆಂಡ್’ ರಶ್ಮಿಕಾಳನ್ನು ಪರಿಚಯಿಸಿದ ನಟ ವಿಜಯ್ ದೇವರಕೊಂಡ

‘ಪುಷ್ಪ-2’ ಸಕ್ಸಸ್‌ ಬೆನ್ನಲ್ಲೆ ಮತ್ತೊಂದು ಸಿನೆಮಾಕ್ಕೆ ರಶ್ಮಿಕಾ ರೆಡಿ

ಇತ್ತೀಚೆಗಷ್ಟೇ ‘ಪುಷ್ಪ-2’ ಸಿನೆಮಾ ತೆರೆಗೆ ಬಂದು, ಬಾಕ್ಸಾಫೀಸ್‌ನಲ್ಲಿ ದೊಡ್ಡ ಗೆಲುವು ದಾಖಲಿಸಿದ್ದು, ನಿಮಗೆ ನೆನಪಿರಬಹುದು. ಇನ್ನು ‘ಪುಷ್ಪ-2’ ಸಿನೆಮಾ ನಾಯಕ ನಟಿ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಸಕ್ಸಸ್‌ ತಂದುಕೊಟ್ಟಿದ್ದು, ಸದ್ಯ ಗೆಲುವಿನ ಖುಷಿಯಲ್ಲಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹೊಸ ರೂಪದೊಂದಿಗೆ ಪ್ರೇಕ್ಷಕರ ಎದುರು ಬಂದಿದ್ದಾರೆ. ಹೌದು, ‘ಪುಷ್ಪ-2’  ಸಿನೆಮಾದಲ್ಲಿ ‘ಪುಷ್ಪ’ರಾಜ್ ನ ಮಡದಿ ‘ಶ್ರೀವಲ್ಲಿ’ಯಾಗಿ ಸಿನಿರಸಿಕರನ್ನು ರಂಜಿಸಿರುವ ರಶ್ಮಿಕಾ ಈಗ ಸದ್ದಿಲ್ಲದೆ ಹೊಸ ಪ್ರೇಮಕಥೆಯನ್ನು ಅಭಿಮಾನಿಗಳಿಗೆ ಒಪ್ಪಿಸೋದಿಕ್ಕೆ ಸಜ್ಜಾಗಿದ್ದಾರೆ. ‘ಪುಷ್ಪ-2’  ಸಿನೆಮಾದ ಸಕ್ಸಸ್‌ ಬೆನ್ನಲ್ಲೇ ಇದೀಗ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್ ಫ್ರೆಂಡ್’ ಸಿನೆಮಾದ ಟೀಸರ್ ರಿಲೀಸ್ ಬಿಡುಗಡೆಯಾಗಿದೆ.

ರಶ್ಮಿಕಾ ಹೊಸ ಸಿನೆಮಾಕ್ಕೆ ವಿಜಯ್‌ ದೇವರಕೊಂಡ ಶುಭ ಹಾರೈಕೆ

ಇನ್ನು ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಹೊಸ ಸಿನೆಮಾ ‘ದಿ ಗರ್ಲ್ ಫ್ರೆಂಡ್’ನ ಮೊದಲ ಟೀಸರ್‌ ಅನ್ನು  ಟಾಲಿವುಡ್ ರೌಡಿಭಾಯ್ ವಿಜಯ್ ದೇವರಕೊಂಡ ಪರಿಚಯಿಸಿದ್ದಾರೆ. ಟೀಸರ್ ಗೆ ಧ್ವನಿಯಾಗಿ, ‘ದಿ ಗರ್ಲ್ ಫ್ರೆಂಡ್’ ಹಾಗೂ ರಶ್ಮಿಕಾ ಬಗ್ಗೆ ಮನದ ಮಾತು ಹಂಚಿಕೊಂಡಿದ್ದಾರೆ. ‘ದಿ ಗರ್ಲ್ ಫ್ರೆಂಡ್ ಟೀಸರ್ ಲ್ಲಿ ಪ್ರತಿ ದೃಶ್ಯವೂ ಆಕರ್ಷಕವಾಗಿದೆ. ನಾನು ಈ ಸಿನಿಮಾವನ್ನು ವೀಕ್ಷಿಸಲು ಕಾತರರಾಗಿದ್ದೇನೆ. 8 ವರ್ಷಗಳ ಹಿಂದೆ ರಶ್ಮಿಕಾ ಅವರನ್ನು ಸೆಟ್ ನಲ್ಲಿ ಭೇಟಿಯಾಗಿದ್ದೆ. ಆ ನಂತರ ಅವರು ಸಾಕಷ್ಟು ಸಕ್ಸಸ್ ನೋಡಿದ್ದಾರೆ. ಆದರೂ ಅವರು ವಿನಮ್ರವಾಗಿದ್ದಾರೆ. ರಾಹುಲ್, ಸುಂದರ ಪ್ರೇಮ ಕಥೆಯೊಂದಿಗೆ ಪ್ರೇಕ್ಷಕರ ಹೃದಯ ಸ್ಪರ್ಶಿಸಲಿದ್ದಾರೆ ಎಂದು ಭಾವಿಸಿದ್ದೇನೆ. ಇಡೀ ‘ದಿ ಗರ್ಲ್ ಫ್ರೆಂಡ್’ ತಂಡಕ್ಕೆ ಒಳ್ಳೆಯದಾಗಲಿ’ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಅಭಿನಯದ ಹೊಸ ಸಿನೆಮಾ ‘ದಿ ಗರ್ಲ್ ಫ್ರೆಂಡ್’ನ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಮುಂದಿನ ವರ್ಷದ ಆರಂಭದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾಳೆ ‘ದಿ ಗರ್ಲ್ ಫ್ರೆಂಡ್’ 

‘ದಿ ಗರ್ಲ್ ಫ್ರೆಂಡ್’ ಸಿನೆಮಾವನ್ನು ರಾಹುಲ್ ರವೀಂದ್ರನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿ ‘ದಿ ಗರ್ಲ್ ಫ್ರೆಂಡ್’ ಸಿನೆಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರಾವ್ ರಮೇಶ್, ರೋಹಿಣಿ ಸೇರಿದಂತೆ ಮತ್ತಿತರ ಕಲಾವಿದರು ‘ದಿ ಗರ್ಲ್ ಫ್ರೆಂಡ್’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರೇಮಕಥೆ ಜೊತೆಗೆ ಭಾವಾನಾತ್ಮಕ ಅಂಶಗಳನ್ನು ಸೇರಿಸಿ ‘ದಿ ಗರ್ಲ್ ಫ್ರೆಂಡ್’ ಸಿನೆಮಾದ ಟೀಸರ್ ಕಟ್ ಮಾಡಲಾಗಿದೆ. ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ‘ದಿ ಗರ್ಲ್ ಫ್ರೆಂಡ್’ ಚಿತ್ರವನ್ನು ಪ್ರಸ್ತುಪಡಿಸುತ್ತಿದ್ದು, ‘ಗೀತಾ ಆರ್ಟ್ಸ್’, ‘ಮಾಸ್ ಮೂವಿ ಮೇಕರ್ಸ್’ ಮತ್ತು ‘ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ನಡಿಯಲ್ಲಿ ಧೀರಜ್ ಮೊಗಿಲಿನೇನಿ ಮತ್ತು ವಿದ್ಯಾ ಕೊಪ್ಪಿನೀಡಿ ಜಂಟಿಯಾಗಿ ಈ ಸಿನೆಮಾವನ್ನು ನಿರ್ಮಿಸಿದ್ದಾರೆ. ಹೇಶಾಮ್ ಅಬ್ದುಲ್ ವಹಾಬ್ ‘ದಿ ಗರ್ಲ್ ಫ್ರೆಂಡ್’ ಸಿನೆಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ‘ದಿ ಗರ್ಲ್ ಫ್ರೆಂಡ್’ ಸಿನೆಮಾ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ.

Banner Content
Tags: , , , ,
Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Article

Sponsored Ads1

error: Content is protected !!