Banner Top
Banner Content

‘ಪ್ರೇಮಿಗಳ ದಿನ’ಕ್ಕೆ ಪ್ರಮೋದ್ – ಪೃಥ್ವಿ ಸಿನೆಮಾ ತೆರೆಗೆ ಎಂಟ್ರಿ

ಫೆಬ್ರವರಿ 14ರಂದು ‘ಭುವನಂ ಗಗನಂ’ ದರ್ಶನ

ಪ್ರೇಮಕಥಾಹಂದರ ಹೊಂದಿರುವ ಚಿತ್ರ

‘ಎಸ್‌. ವಿ. ಸಿ ಫಿಲಂಸ್‌’ ಬ್ಯಾನರ್‌ನಡಿ ಎಂ. ಮುನೇಗೌಡ ನಿರ್ಮಿಸಿರುವ ‘ಭುವನಂ ಗಗನಂ’ ಸಿನೆಮಾ ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನದ ಸ್ಪೆಷಲ್ ಆಗಿ ಚೆಂದದ ಪ್ರೇಮಕಥಾಹಂದರ ಹೊಂದಿರುವ ಚಿತ್ರ ತೆರೆಗೆ ಬರ್ತಿದೆ. ಲವರ್ ಬಾಯ್ ಆಗಿ ಗಮನ ಸೆಳೆದಿರುವ ಪೃಥ್ವಿ ಅಂಬರ್ ಹಾಗೂ ರಗಡ್ ಪಾತ್ರಗಳ ಮೂಲಕ ಖ್ಯಾತಿ ಪಡೆದಿರುವ ಪ್ರಮೋದ್ ನಾಯಕರಾಗಿ ‘ಭುವನಂ ಗಗನಂ’ನಲ್ಲಿ ನಟಿಸಿದ್ದಾರೆ.

ಗಿರೀಶ್‌ ಮೂಲಿಮನಿ ‘ಭುವನಂ ಗಗನಂ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಭುವನಂ ಗಗನಂ’ ಪ್ರೇಮ, ಪ್ರಣಯ ಮತ್ತು ಕೌಟುಂಬಿಕ ಭಾವನೆಗಳನ್ನು ಹೊಂದಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ನಡೆಯುತ್ತದೆ. ‘ಲವ್ ಮಾಕ್‌ಟೇಲ್‌’ ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ರಾಚೇಲ್ ಡೇವಿಡ್ ನಾಯಕ ಪ್ರಮೋದ್ ಅವರಿಗೆ ಜೋಡಿಯಾಗಿದ್ದು, ಅಶ್ವತಿ ನಾಯಕ ಪೃಥ್ವಿ ಅಂಬರ್ ಗೆ ಜೋಡಿಯಾಗಿದ್ದಾರೆ.

ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ ಮತ್ತು ಚೇತನ್ ದುರ್ಗ ‘ಭುವನಂ ಗಗನಂ’ ಚಿತ್ರದ ಇತರ ತಾರಾಗಣದಲ್ಲಿದ್ದಾರೆ.
ಉದಯ್ ಲೀಲಾ ಅವರ ಛಾಯಾಗ್ರಹಣ, ಗುಮ್ಮನೇನಿ ವಿಜಯ್ ಅವರ ಸಂಗೀತ ಮತ್ತು ಸುನೀಲ್ ಕಶ್ಯಪ್ ಅವರ ಸಂಕಲನ ‘ಭುವನಂ ಗಗನಂ’ ಚಿತ್ರಕ್ಕಿದೆ. ಟೀಸರ್ ಹಾಗೂ ಹಾಡಿನ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಕೊಟ್ಟಿರುವ ‘ಭುವನಂ ಗಗನಂ’ ಚಿತ್ರತಂಡ ಶೀಘ್ರದಲ್ಲೇ ಪ್ರಚಾರ ಕಾರ್ಯ ಆರಂಭಿಸಲಿದೆ.

Banner Content
Tags: , , ,

Related Article

Sponsored Ads1

error: Content is protected !!