Banner Top
Banner Content

ಭಾರೀ ಮೊತ್ತಕ್ಕೆ ‘ರಾಕ್ಷಸ’ ತೆಲುಗು ಥಿಯೇಟರ್ ಹಕ್ಕು ಮಾರಾಟ…

‘ಕಂಚಿ ಕಾಮಾಕ್ಷಿ ಕೋಲ್ಕತ್ತಾ ಕಾಳಿ ಕ್ರಿಯೇಷನ್’ ತೆಕ್ಕೆಗೆ ‘ರಾಕ್ಷಸ’ ತೆಲುಗು ರೈಟ್ಸ್

‘ರಾಕ್ಷಸ’ನ ತೆಲುಗು ಹಾದಿ ಸುಗಮ…

ಪ್ರತಿ ಸಿನೆಮಾಗಳಲ್ಲಿಯೂ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ರಂಜಿಸುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ‘ರಾಕ್ಷಸ’ ಅವತಾರವೆತ್ತಿರುವುದು ಗೊತ್ತೇ ಇದೆ. ಅಂದರೆ ಈ ಚಿತ್ರದಲ್ಲಿ ಅವರು ಡಿಫರೆಂಟ್ ಗೆಟಪ್ ಧರಿಸಿದ್ದಾರೆ. ‘ಶಿವರಾತ್ರಿ ಹಬ್ಬ’ಕ್ಕೆ ತೆರೆಗೆ ಬರುತ್ತಿರುವ ‘ರಾಕ್ಷಸ’ ಸಿನೆಮಾದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ತೆಲುಗಿನಲ್ಲಿಯೂ ಬಿಡುಗಡೆಯಾಗುತ್ತಿರುವ ಈ ಚಿತ್ರದ ಥಿಯೇಟರ್ ಹಕ್ಕನ್ನು ‌’ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್’ ತನ್ನದಾಗಿಸಿಕೊಂಡಿದೆ. ಅಖಂಡ ತೆಲುಗು ಪ್ರೇಕ್ಷಕರಿಗೆ ‘ರಾಕ್ಷಸ’ ಸಿನೆಮಾವನ್ನು ಈ ಸಂಸ್ಥೆ ತಲುಪಿಸಲಿದೆ.

ಸಂತಸದಲ್ಲಿ ನಿರ್ಮಾಪಕರು

‘ಇತ್ತೀಚೆಗೆ ಕನ್ನಡ ಸಿನೆಮಾಗಳು ವ್ಯಾಪಾರವಾಗ್ತಿರುವುದೇ ಕಡಿಮೆ. ಹೀಗಿದ್ದರೂ ಈಗಾಗಲೇ ಕನ್ನಡ ಥಿಯೇಟರ್ ರೈಟ್ಸ್ ಬಿಕರಿಯಾಗಿದೆ. ಈಗ ಬರೀ ಟೀಸರ್, ಟ್ರೇಲರ್, ಕಂಟೆಂಟ್ ನೋಡಿಯೇ ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ಒಳ್ಳೆ ಮೊತ್ತಕ್ಕೆ ಹಕ್ಕನ್ನು ತಮ್ಮದಾಗಿಸಿಕೊಂಡಿದೆ. ಹಲವಾರು ಹೊಸತನಗಳನ್ನು ಹೊಂದಿರುವ ಈ ಸಿನಿಮಾ ಮೇಲೆ ಭರವಸೆಯಿಟ್ಟೇ ವಿತರಣೆ ಹಕ್ಕನ್ನು ಪಡೆದುಕೊಂಡಿದೆ. ಇದು ಸಂತಸ ತಂದಿದೆ’ ಎಂದು ನಿರ್ಮಾಪಕರಾಗಿರುವ ದೀಪು ಬಿ. ಎಸ್ ಖುಷಿ ಹಂಚಿಕೊಂಡಿದ್ದಾರೆ.

ಕಂಟೆಂಟ್ ಮೆಚ್ಚಿಕೊಂಡೇ ‘ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್’ ತೆಲುಗು ಥಿಯೇಟರ್ ಹಕ್ಕು ಖರೀದಿ ಮಾಡಿರುವುದು ಇದು ಚಿತ್ರತಂಡಕ್ಕೆ ಸಿಕ್ಕಿರುವ ಆರಂಭಿಕ ಗೆಲುವು ಎಂದರು ತಪ್ಪಾಗಲಿಕ್ಕಿಲ್ಲ. ಕನ್ನಡ ಭಾಷೆಯ ಥಿಯೇಟರ್ ಹಕ್ಕು ಹಾಗೂ ಆಡಿಯೋ ಹಕ್ಕು ಕೂಡ ಒಳ್ಳೆ ಮೊತ್ತಕ್ಕೆ ಬಿಕರಿಯಾಗಿದ್ದು, ಇಡೀ ‘ರಾಕ್ಷಸ’ ಟೀಂ ಖುಷಿಗೊಂಡಿದೆ.

ಟೈಮ್ ಲೂಪ್ ಕಾನ್ಸೆಪ್ಟ್ ‘ರಾಕ್ಷಸ’ 

‘ರಾಕ್ಷಸ’ ವಿಶೇಷವಾದ ಸಿನೆಮಾವಾಗಿದೆ. ಇದು ಟೈಮ್ ಲೂಪ್ ಕಾನ್ಸೆಪ್ಟ್ ಇರುವ ಚಿತ್ರವೇ ಆಗಿದೆ. ಕನ್ನಡದಲ್ಲಿ ಈ ರೀತಿಯ ಚಿತ್ರ ಬಂದೇ ಇಲ್ಲ. ಮೊದಲ ಬಾರಿಗೆ ಈ ರೀತಿಯ ಚಿತ್ರ ಬರ್ತಿದೆ. ‘ಮಮ್ಮಿ’, ‘ದೇವಕಿ’ ಚಿತ್ರಗಳನ್ನ ಡೈರೆಕ್ಟರ್ ಮಾಡಿರೋ ಲೋಹಿತ್ ಈ ‘ರಾಕ್ಷಸ’ ಚಿತ್ರ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್ ಅವರು ಭಿನ್ನ ಗೆಟಪ್ ತಾಳಿರುವ ಈ ಸಿನೆಮಾದ ಪಾತ್ರವರ್ಗದಲ್ಲಿ ಶೋಭಾರಾಜ್, ವತ್ಸಲಾ ಮೋಹನ್, ಆರ್ನ ರಾಥೋಡ್, ಸಿದ್ಲಿಂಗು ಶ್ರೀಧರ್ ಮುಂತಾದ ಕಲಾವಿದರು ನಟಿಸಿದ್ದಾರೆ. ಚಿತ್ರದ ಶೇಕಡ 80ರಷ್ಟು ಚಿತ್ರೀಕರಣ ‘ರಾಮೋಜಿ ಫಿಲ್ಮ್ ಸಿಟಿ’ಯಲ್ಲಿ ಮಾಡಲಾಗಿದೆ. ಇನ್ನುಳಿದ ದೃಶ್ಯಗಳ ಚಿತ್ರೀಕರಣವನ್ನು ರಾಮೇಶ್ವರಂ, ಗೋವಾ ಹಾಗೂ ಬೆಂಗಳೂರಿನಲ್ಲಿ ನಡೆಸಲಾಗಿದೆ.

ಶಿವರಾತ್ರಿ ದಿನದಂದು ‘ರಾಕ್ಷಸ’ ರಿಲೀಸ್

‘ಶಾನ್ವಿ ಎಂಟರ್‌ಟೇನ್ಮೆಂಟ್’ ಮೂಲಕ ದೀಪು ಬಿ. ಎಸ್. ಅವರು ಈ ಸಿನೆಮಾವನ್ನು ನಿರ್ಮಿಸಿದ್ದಾರೆ. ನವೀನ್ ಮತ್ತು ಮಾನಸಾ ಕೆ. ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಜೇಬಿನ್ ಪಿ. ಜೋಕಬ್ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ವಿನೋದ್ ಅವರ ಸಾಹಸ ನಿರ್ದೇಶನ, ವರುಣ್ ಉನ್ನಿ ಅವರ ಸಂಗೀತ ನಿರ್ದೇಶನ, ಅವಿನಾಶ್ ಬಸುತ್ಕರ್ ಅವರ ಹಿನ್ನಲೆ ಸಂಗೀತ ಹಾಗೂ ರವಿಚಂದ್ರನ್ ಸಿ. ಸಂಕಲನ ಈ ಚಿತ್ರಕ್ಕಿದೆ. ‘ಶಿವರಾತ್ರಿ ಹಬ್ಬ’ದ ಸಮಯದಲ್ಲಿ ‘ರಾಕ್ಷಸ’ ಸಿನೆಮಾ ರಿಲೀಸ್ ಆಗಲಿದೆ. ಶಿವರಾತ್ರಿ ದಿನದಂದು ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳಿಗೆ ಥಿಯೇಟರ್ಗಳಲ್ಲಿ ಭರ್ಜರಿ ಮನರಂಜನೆ ಸಿಗಲಿದೆ.

Banner Content
Tags: , , , ,

Related Article

Sponsored Ads1

error: Content is protected !!