Banner Top
Banner Content

ಸಂಕ್ರಾಂತಿ ಹಬ್ಬಕ್ಕೆ ‘ಚೌಕಿದಾರ್’ ಟೀಸರ್ ರಿಲೀಸ್

‘ಚೌಕಿದಾರ್’ ಗಾಗಿ ರಕ್ತಸಿಕ್ತ ಅವತಾರ ತಾಳಿದ ‘ದಿಯಾ’ ಪೃಥ್ವಿ…

ರಾ ಅಂಡ್ ರಗಡ್ ಆದ ಪೃಥ್ವಿ… ‘ಚೌಕಿದಾರ್’ ಮಾಸ್ ಟೀಸರ್ ರಿಲೀಸ್

ಕನ್ನಡದಲ್ಲಿ ಇಲ್ಲಿಯವರೆಗೆ ಕ್ಲಾಸ್ ಸಿನೆಮಾಗಳ ಮೂಲಕ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ಅಂಬರ್ ಮೊದಲ ಬಾರಿಗೆ ರಗಡ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೋಸ್ ಹಿಡಿಯುತ್ತಿದ್ದ ಪೃಥ್ವಿ ಕೈಗೆ ಇದೀಗ ‘ಚೌಕಿದಾರ್’ ಸಿನೆಮಾದಲ್ಲಿ ಲಾಂಗ್ ಕೊಟ್ಟು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ರಕ್ತಹರಿಸಿದ್ದಾರೆ. ಅದರ ಮೊದಲ ಭಾಗವಾಗಿ ‘ಸಂಕ್ರಾಂತಿ ಹಬ್ಬ’ದ ವಿಶೇಷವಾಗಿ ‘ಚೌಕಿದಾರ್’ ಸಿನೆಮಾದ ಮೊದಲ ಟೀಸರ್ ಅನಾವರಣಗೊಂಡಿದೆ.

ರಕ್ತಸಿಕ್ತ ‘ಚೌಕಿದಾರ್’ ಅವತಾರದ ಟೀಸರ್ ನಲ್ಲಿ ಪೃಥ್ವಿ ಅಂಬರ್…

‘ಚೌಕಿದಾರ್’ ಸಿನೆಮಾದ ಟೀಸರ್ ನಲ್ಲಿ ಎಲ್ಲಾ ಪಾತ್ರಗಳನ್ನು ತೋರಿಸಿರುವ ಚಂದ್ರಶೇಖರ್ ಬಂಡಿಯಪ್ಪ ಕಥೆಯ ಗುಟ್ಟನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ‘ಚೌಕಿದಾರ್’ ಸಿನೆಮಾದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಖಾಕಿ ಲುಕ್ ನಲ್ಲಿ ಸುಧಾರಾಣಿ‌ ಖದರ್ ತೋರಿಸಿದ್ದಾರೆ. ಹಿರಿಯ ನಟ ಸಾಯಿ ಕುಮಾರ್ ಪೃಥ್ವಿ ತಂದೆ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಧರ್ಮ, ಹಿರಿಯ ನಟಿ ಶ್ವೇತಾ ತಾರಾ ಬಳಗದಲ್ಲಿದ್ದಾರೆ. ‘ಚೌಕಿದಾರ್’ ಸಿನೆಮಾದ ಟೀಸರ್ ನಲ್ಲಿ ಹಿಂದೆಂದೂ ಕಾಣದ ಲುಕ್ ನಲ್ಲಿ ಪೃಥ್ವಿ ಪ್ರತ್ಯಕ್ಷರಾಗಿದ್ದಾರೆ. ರಕ್ತಸಿಕ್ತ ಅವತಾರವೆತ್ತಿರುವ ಪೃಥ್ವಿ ಅವರ ‘ಚೌಕಿದಾರ್’ ಸಿನೆಮಾದ ಹೊಸ ಲುಕ್ ಸಿನಿರಸಿಕರ ಗಮನ ಸೆಳೆಯುವಂತಿದೆ.

‘ಚೌಕಿದಾರ್’ ಸಿನೆಮಾದ ಟೀಸರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

https://www.youtube.com/watch?v=rXy2Wm_kj4M

ಇನ್ನು ‘ಚೌಕಿದಾರ್’ ಸಿನೆಮಾದಲ್ಲಿ ನಾಯಕ ನಟ ಪೃಥ್ವಿ ಅಂಬರ್ ಗೆ ಜೋಡಿಯಾಗಿ ಅಭಿನಯಿಸಿರುವ ಧನ್ಯಾ ರಾಮಕುಮಾರ್ ಮೊದಲ ಬಾರಿಗೆ ಈ ಸಿನೆಮಾದಲ್ಲಿ ಡಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. ‘ಚೌಕಿದಾರ್’ ಸಿನೆಮಾದ ಹಾಡುಗಳಿಗೆ ಸಚಿನ್ ಬಸ್ರೂರ್ ಸಂಗೀತ ಸಂಯೋಜಿಸಿದ್ದು, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ. ಇದೇ 2025ರ ಮೇ ತಿಂಗಳಲ್ಲಿ ʼಚೌಕಿದಾರ್ʼ ಸಿನೆಮಾವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Banner Content
Tags: , , , , , ,

Related Article

Sponsored Ads1

error: Content is protected !!