Banner Top
Banner Content

ಹೊಬರ ವಿಭಿನ್ನ ಕಥಾಹಂದರದ ‘ದಿ’ ಚಿತ್ರ

ಗ್ರಾಫಿಕ್ಸ್‌ನಲ್ಲಿ ಮೂಡಿಬಂದ ‘ದಿ’ ಚಿತ್ರದ ಕರಡಿ‌ ಟೀಸರ್

ಕಾಡಿನ ನಡುವೆ ನಿಗೂಢ ನಡೆಯ ಕಥೆ

ಈಗಾಗಲೇ ಗಾಂಧಿನಗರದಲ್ಲಿ ತನ್ನ ಟೈಟಲ್‌ ಮತ್ತು ಮೇಕಿಂಗ್‌ ಮೂಲಕ ಒಂದಷ್ಟು ಸುದ್ದಿ ಮಾಡಿರುವ‌ ‘ದಿ’ ಚಿತ್ರದ ಮೊದಲ ಟೀಸರ್ ಇದೀಗ ಬಿಡುಗಡೆಯಾಗಿದೆ. ‘ದಿ’ ಸಿನೆಮಾದ ಕಥಾಹಂದರ ಕಾಡಿನಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯಲಿದ್ದು, ಈ ಚಿತ್ರದಲ್ಲಿ ಬರುವ ‘ಕರಡಿ’ಯ ಒಂದು ವಿಶೇಷ ಟೀಸರ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ.

‘ದಿ’ ಕಾಡಿನಲ್ಲಿ ನಡೆಯುವ‌ ಒಂದು ಹುಡುಕಾಟದ‌ ಕಥೆ. ಕಾಡಿಗೆ ವಿಹಾರಕ್ಕಾಗಿ‌ ತೆರಳುವ ಜೋಡಿಯ ಜೀವನದಲ್ಲಿ ನಡೆಯುವ ಆಕಸ್ಮಿಕ ಘಟನೆಗಳ ಸುತ್ತ ಕಥೆಯನ್ನು ಕುತೂಹಲಕಾರಿಯಾಗಿ ಹೆಣೆಯಲಾಗಿದೆ. ಈಗಾಗಲೇ ಚಿತ್ರ ತಂಡ ಒಂದು ಪ್ರೋಮೋ‌ ವಿಡಿಯೋ/ತುಣುಕನ್ನು ಬಿಡುಗಡೆ ಮಾಡಿದ್ದು,‌ ಇದೀಗ ಕಾಡು ಪ್ರಾಣಿಗಳ CG (ಕಲರ್ ಗ್ರೇಡಿಂಗ್) ತುಣುಕುಗಳನ್ನು ಟೀಸರ್ ಮೂಲಕ ಬಿಡುಗಡೆ ಮಾಡಿದೆ. ಕರಡಿ‌ ಹಾಗೂ ಇತರೆ ಪ್ರಾಣಿಗಳ CG ಕೆಲಸವನ್ನು ಉಜ್ಬೇಕಿಸ್ತಾನ್ ಹಾಗೂ ನ್ಯೂಯಾರ್ಕಿನಲ್ಲಿ ಮಾಡಿಸಿರುವುದು ಗಮನಾರ್ಹ ಸಂಗತಿ. ಇದೊಂದು ವಿಭಿನ್ನ ರೀತಿಯ ಪ್ರಯತ್ನವಾಗಿದ್ದು, ಕನ್ನಡ ಸಿನಿ ಪ್ರೇಕ್ಷಕರಿಗೆ ‘ದಿ’ ಸಿನೆಮಾ ಹೊಸಥರದ ಅನುಭವ ನೀಡಲಿದೆ ಎಂಬುದು ಚಿತ್ರತಂಡದ ಭರವಸೆಯ ಮಾತು.

‘ದಿ’ ಚಿತ್ರದ ಕರಡಿ‌ ಟೀಸರ್ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಶೀಘ್ರದಲ್ಲಿಯೇ ‘ದಿ’ ತೆರೆಗೆ

ವಿನಯ್ ವಾಸುದೇವ್ ನಿರ್ದೇಶನದ ‘ದಿ’ ಚಿತ್ರದಲ್ಲಿ ವಿನಯ್ ವಾಸುದೇವ್,‌ ದಿಶಾ‌ ರಮೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ನಾಗೇಂದ್ರ ಅರಸ್, ಹರಿಣಿ‌ ಶ್ರೀಕಾಂತ್, ಬಲ ರಾಜ್ವಾಡಿ‌ ಮುಂತಾದವರು ನಟಿಸಿದ್ದಾರೆ. ಸಿದ್ದಾರ್ಥ್ ಆರ್ ನಾಯಕ್ ಅವರು ಚಿತ್ರದ ಸಂಕಲನಕಾರರಾಗಿದ್ದು, ಅಲೆನ್ ಭರತ್ ಛಾಯಾಗ್ರಹಣ ಮಾಡಿದ್ದಾರೆ. ಸ್ಟೀವನ್ ಸತೀಶ್ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಈ ಚಿತ್ರವನ್ನು ‘ವಿಡಿಕೆ ಗ್ರೂಪ್ಸ್’ ನಿರ್ಮಿಸಿದೆ. ಈಗಾಗಲೇ ‘ದಿ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ಬೇಸಿಗೆ ಸಮಯದಲ್ಲಿ ‘ದಿ’ ಸಿನೆಮಾ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

Banner Content
Tags: , ,

Related Article

Sponsored Ads1

error: Content is protected !!