Banner Top
Banner Content

ಕಿಚ್ಚ-ಅನೂಪ್ ಜೋಡಿಯ ‘ಬಿಲ್ಲ ರಂಗ ಭಾಷಾ’ ಚಿತ್ರೀಕರಣ ಶುರು

ಕಿಚ್ಚನ ‘ಬಿಲ್ಲ‌ ರಂಗ ಭಾಷಾ’ ಚಿತ್ರದ ಶೂಟಿಂಗ್ ಕಿಕ್‌ ಸ್ಟಾರ್ಟ್‌

ಚಿತ್ರೀಕರಣದ ಮಾಹಿತಿ ಕೊಟ್ಟ ನಿರ್ದೇಶಕ ಅನೂಪ್ ಭಂಡಾರಿ

‘ಮ್ಯಾಕ್ಸ್’ ಸಿನೆಮಾದ ನಂತರ ಕಿಚ್ಚ ಸುದೀಪ್ ಯಾವ ಸಿನೆಮಾ ಮಾಡುತ್ತಾರೆ? ಯಾವಾಗಿನಿಂದ ಸುದೀಪ್ ಹೊಸ ಸಿನೆಮಾದ ಶೂಟಿಂಗ್? ಎಂದು ಕುತೂಹಲದಿಂದ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಈಗೊಂದು ಗುಡ್ ನ್ಯೂಸ್ ಬಂದಿದೆ. ಹೌದು, ಕಿಚ್ಚ ಸುದೀಪ್ ಅಭಿಮಾನಿಗಳು ಕಾಯ್ತಿದ್ದ ಆ ಕ್ಷಣ ಬಂದೇ ಬಿಟ್ಟಿದ್ದೆ. ಇದೇ ಏಪ್ರಿಲ್ 16, 2025 ರಿಂದ ಇಂದು ‘ಬಿಲ್ಲ ರಂಗ ಭಾಷಾ’ ಚಿತ್ರದ ಚಿತ್ರೀಕರಣಕ್ಕೆ ಕಿಕ್‌ ಸ್ಟಾರ್ಟ್‌ ಸಿಕ್ಕಿದೆ. ಇದೇ ಏಪ್ರಿಲ್ ನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ. ವಿಶೇಷವಾದ ಪೋಸ್ಟರ್ ಮೂಲಕ ಚಿತ್ರತಂಡ ಶೂಟಿಂಗ್ ಆರಂಭವಾಗಿದೆ ಎಂದು ಚಿತ್ರತಂಡ ಹೇಳಿದೆ.

‘ಬಿಲ್ಲ ರಂಗ ಭಾಷಾ’ ಚಿತ್ರದ ಚಿತ್ರೀಕರಣದ ಬಗ್ಗೆ ಮಾತನಾಡಿರುವ ನಿರ್ದೇಶಕ ಅನೂಪ್‌ ಭಂಡಾರಿ, ’20 ದಿನಗಳ ಕಾಲ ‘ಬಿಲ್ಲ ರಂಗ ಭಾಷಾ’ ಚಿತ್ರದ ಮೊದಲ ಹಂತದ ಚಿತ್ರೀಕರಣ ನಡೆಸುತ್ತೇವೆ. ಚಿತ್ರದ ಪ್ರಮುಖ ಆಕ್ಷನ್‌ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ಅದ್ಭುತ ಸೆಟ್‌ ಕೆಲಸ ನಡೆಯುತ್ತಿತ್ತು. ಅದು ಈಗ ಪೂರ್ಣಗೊಂಡಿದ್ದು ಚಿತ್ರೀಕರಣಕ್ಕೆ ಸಿದ್ಧವಾಗಿದೆ. ಮೊದಲ ಹಂತದ ಚಿತ್ರೀಕರಣ ಮುಗಿಸಿದ ಬಳಿಕ ಬ್ರೇಕ್ ತೆಗೆದುಕೊಂಡು ಮುಂದಿನ ಹಂತದ ಶೂಟಿಂಗ್‌ ಗೆ ಸಜ್ಜಾಗುತ್ತೇವೆ’ ಎಂದು ತಿಳಿಸಿದ್ದಾರೆ.

ಸುದೀಪ್ ಸಿನಿಕರಿಯರ್ ನ ಬಹುದೊಡ್ಡ ಬಜೆಟ್ ಚಿತ್ರ

ಈ ಹಿಂದೆ ಸುದೀಪ್ ಅವರೇ ಹೇಳಿಕೊಂಡಿರುವಂತೆ, ‘ಬಿಲ್ಲ ರಂಗ ಭಾಷಾ’ ಅವರ ಸಿನಿಕರಿಯರ್ ನ ಬಹುದೊಡ್ಡ ಬಜೆಟ್ ಚಿತ್ರವಾಗಿದೆ. ಟಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನೆಮಾ ‘ಹನುಮಾನ್’ ನಿರ್ಮಾಪಕರಾದ ನಿರಂಜನ್ ರೆಡ್ಡಿ ಹಾಗೂ‌ ಚೈತನ್ಯ ರೆಡ್ಡಿ ‘ಬಿಲ್ಲ ರಂಗ ಭಾಷಾ’ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ತಮ್ಮದೇ ‘ಪ್ರೈಮ್ ಶೋ ಎಂಟರ್ ಟೈನ್ಮೆಂಟ್’ ಬ್ಯಾನರ್ ನಡಿ ಈ ಚಿತ್ರವನ್ನು ಅವರು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಈ ಮೊದಲು ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇದಾದ ಬಳಿಕ ಈ ಜೋಡಿ ‘ಬಿಲ್ಲ ರಂಗ ಬಾಷಾ’ ಸಿನೆಮಾಗೆ ಕೈ ಜೋಡಿಸಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.

Banner Content
Tags: , , , , ,

Related Article

Sponsored Ads1

error: Content is protected !!