Banner Top
Banner Content

ಸೆ. 26ರಿಂದ ‘ZEE 5’ನಲ್ಲಿ ‘ಸುಮತಿ ಒಲವು’ ಪ್ರದರ್ಶನ 

ಮಲೆಯಾಳಂನ ‘ಸುಮತಿ ಒಲವು’ ಚಿತ್ರ ಈಗ ಕನ್ನಡದಲ್ಲೂ ವೀಕ್ಷಣೆ‌ಗೆ ಲಭ್ಯ

 ‘ಸುಮತಿ ಒಲವು’ ಹಾರರ್ ಕಥೆಗೆ ಕಾಮಿಡಿ ಟಚ್

ಭಾರತದ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ‘ZEE 5’ ಇದೇ ಸೆಪ್ಟೆಂಬರ್‌ ಅಂತ್ಯಕ್ಕೆ ಮತ್ತೊಂದು ಹೊಸ ಕಥೆಯೊಂದನ್ನು ಪ್ರೇಕ್ಷಕರ ಎದುರು ತರುತ್ತಿದೆ. ಅದು ಮಲಯಾಳಂ ಹಾರರ್ ಕಾಮಿಡಿ‌ ‘ಸುಮತಿ ಒಲವು’ ಚಿತ್ರ. ಹೌದು, ಇದೇ 2025ರ ಸೆಪ್ಟೆಂಬರ್‌ ತಿಂಗಳ 26ರಿಂದ ‘ZEE 5’ನಲ್ಲಿ ‘ಸುಮತಿ ಒಲವು’ ಸಿನೆಮಾ ಸ್ಟ್ರೀಮಿಂಗ್ ಆಗಲಿದ್ದು, ಮಲೆಯಾಳಂ ಮೂಲದ ಈ ಸಿನೆಮಾವನ್ನು ಈಗ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಕೂಡ ವೀಕ್ಷಣೆ‌ ಮಾಡಬಹುದು.

ಗರ್ಭಿಣಿ ಕೊಲೆಯ ಸುತ್ತ ಸಾಗುವ ಚಿತ್ರ!

ವಿಷ್ಣು ಶಶಿಶಂಕರ್ ‘ಸುಮತಿ ಒಲವು’ ಸಿನೆಮಾಗೆ ಆಕ್ಷನ್-ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅರ್ಜುನ್ ಅಶೋಕನ್, ಗೋಕುಲ್ ಸುರೇಶ್, ಸೈಜು ಕುರುಪ್, ಬಾಲು ವರ್ಗೀಸ್, ಮಾಳವಿಕಾ ಮನೋಜ್ ಮತ್ತು ಶಿವಡ ಸೇರಿದಂತೆ ಪ್ರತಿಭಾನ್ವಿತ ತಾರಾಬಳಗವಿದೆ. ಸುಮತಿ ಎಂಬ ಗರ್ಭಿಣಿ ಕೊಲೆ ಬಳಿಕ ನಡೆಯುವ ಹಾರರ್ ಕಥೆಗೆ ಕಾಮಿಡಿ ಟಚ್ ಕೊಟ್ಟು ಸಿನೆಮಾವನ್ನು ಕಟ್ಟಿಕೊಡಲಾಗಿದೆ.

‘ZEE 5’ನಲ್ಲಿ ಸ್ಟ್ರೀಮಿಂಗ್ ಆಗಿರುತ್ತಿರುವ ‘ಸುಮತಿ ಒಲವು’ ಸಿನೆಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ವಿಷ್ಣು ಶಶಿಶಂಕರ್, ”ಸುಮತಿ ಒಲವು’ ಸಿನೆಮಾ ಕೇರಳದ ಜಾನಪದದಲ್ಲಿ ಬೇರೂರಿದ್ದು, ಅದನ್ನು ಇಂದಿನ ಸಮಕಾಲೀನ ಪ್ರೇಕ್ಷಕರಿಗಾಗಿ ರಚಿಸಲಾಗಿದೆ. ಇದು ಕೇವಲ ಭಯಾನಕತೆಯನ್ನು‌ ಒಳಗೊಂಡಿರದೇ ಮಾನವನ ಭಾವನೆ ಬಗ್ಗೆ ರೂಪಿಸಲಾಗಿದೆ. ಸಿನೆಮಾ ಪುರಾಣ, ನೆನಪು ಹಾಗೂ ನಿಗೂಢತೆಯ ಸುತ್ತ ಸಾಗುತ್ತದೆ. ತಮ್ಮ ಈ ಕಂಟೆಂಟ್ ನ್ನು‌ ಪ್ರೇಕ್ಷಕರಿಗೆ ತಲುಪಿಸಲು zee5 ನಮಗೆ ಪರಿಪೂರ್ಣವಾದ ವೇದಿಕೆ’ ಎಂದಿದ್ದಾರೆ.

ಶೂಟಿಂಗ್ ಸಮಯದಲ್ಲಿ ತಮಗೆ ಆದ ಅನುಭವ ಹಂಚಿಕೊಂಡ ನಟ ಅರ್ಜುನ್ ಅಶೋಕನ್, ”ZEE 5′ ವಿವಿಧ ಭಾಷೆಗಳ ಪ್ರೇಕ್ಷಕರಿಗೆ ಸಮತಿ ಒಲವು ಸಿನೆಮಾ ಪ್ರದರ್ಶಿಸುತ್ತಿರುವುದು ಸಂತಸ’ ಎಂದು ಹೇಳಿದರು. ನಟಿ ಮಾಳವಿಕಾ ಮನೋಜ್ ಮಾತನಾಡಿ, ”ಸುಮತಿ ಒಲವು’ ಸಿನೆಮಾ ಕೇರಳದ ಸಂಸ್ಕೃತಿ ಜೊತೆಗೆ ಸಸ್ಪೆನ್ಸ್ ತುಂಬಿರುವ ಸಿನೆಮಾ. ಈ ಚಿತ್ರದ ಭಾಗವಾಗಿರುವುದು ಖುಷಿಯಾಗಿದೆ. ಪ್ರತಿಭಾನ್ವಿತ ತಾರಾಬಳಗದ ಜೊತೆ ನಟಿಸಿರುವುದು‌ ರೋಮಾಂಚನಕಾರಿ ಅನುಭವಾಗಿದೆ. ‘ZEE 5′ ಪ್ರೇಕ್ಷಕರ ಪ್ರತಿಕ್ರಿಯೆಗೆ ನಾನು ಕಾತರಳಾಗಿದ್ದೇನೆ’ ಎಂದು ಹೇಳಿದ್ದಾರೆ.

Banner Content
Tags: , , , ,

Related Article

Sponsored Ads1

error: Content is protected !!