Banner Top
Banner Content

ಕಿರುತೆರೆಗೆ ಬಂತು ಸಿಂಪಲ್ ಸುನಿ ‘ಒಂದು ಸರಳ ಪ್ರೇಮ ಕಥೆ’ ಚಿತ್ರ

ವಿನಯ್‌ ರಾಜಕುಮಾರ್‌ ರೊಮ್ಯಾಂಟಿಕ್‌ ಕಾಮಿಡಿ ಕಹಾನಿ ಓಟಿಟಿಯಲ್ಲಿ ಸ್ಟ್ರೀಮಿಂಗ್‌

ಇದೇ ನವೆಂಬರ್‌ 21ರಿಂದ‌ ‘ZEE 5’ನಲ್ಲಿ ಸ್ಟ್ರೀಮಿಂಗ್

ಕಳೆದ ವರ್ಷ ಸಿಂಪಲ್‌ ಸುನಿ ನಿರ್ದೇಶನದ, ವಿನಯ್‌ ರಾಜಕುಮಾರ್‌ ಅಭಿನಯದ ‘ಒಂದು ಸರಳ ಪ್ರೇಮಕಥೆ’ ಸಿನೆಮಾ ಥಿಯೇಟರಿಗೆ ಬಂದಿದ್ದು ನಿಮಗೆ ನೆನಪಿರಬಹುದು. ಚಿತ್ರಮಂದಿರದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಸಿನೆಮಾ ಇದೀಗ ಓಟಿಟಿಯಲ್ಲೂ ವೀಕ್ಷಣೆಗೆ ಲಭ್ಯವಾಗುತ್ತಿದೆ.

ಹೌದು, ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ, ವಿನಯ್ ರಾಜ್ ಕುಮಾರ್ ನಟನೆಯ ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ‘ಒಂದು ಸರಳ ಪ್ರೇಮ ಕಥೆ’ ಓಟಿಟಿ ಎಂಟ್ರಿಗೆ ಸಜ್ಜಾಗಿದೆ. ಇದೇ ತಿಂಗಳ 21ರಿಂದ ‘ZEE 5’ನಲ್ಲಿ ‘ಒಂದು ಸರಳ ಪ್ರೇಮ ಕಥೆ’ ಸ್ಟ್ರೀಮಿಂಗ್ ಆಗಲಿದೆ.

ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್ ಒಳಗೊಂಡ ಈ ಚಿತ್ರ ಪ್ರೇಕ್ಷಕರಿಂದ ಭಾರೀ‌ ಮೆಚ್ಚುಗೆ ಪಡೆದಿತ್ತು. ನಾಯಕ ವಿನಯ್, ನಾಯಕಿಯರಾದ ಸ್ವಾತಿಷ್ಠ, ಮಲ್ಲಿಕಾ ಅಮೋಘ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್‌ನ್ನು ಸಿನಿರಸಿಕರು ಸಖತ್ ಇಷ್ಟಪಟ್ಟಿದ್ದರು. ರಾಘವೇಂದ್ರ ರಾಜ್‌ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ಸಿನಿಮಾದಲ್ಲಿದ್ದಾರೆ.

ಏನಿದು ‘ಒಂದು ಸರಳ ಪ್ರೇಮಕಥೆ’..? 

‘ಒಂದು ಸರಳ ಪ್ರೇಮಕಥೆ’ ಚಿತ್ರಕ್ಕೆ ಕಾರ್ತಿಕ್‌ ಛಾಯಾಗ್ರಹಣ, ಆದಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ‘ರಾಮ್ ಮೂವೀಸ್’ ಬ್ಯಾನರ್ ನಡಿ ಮೈಸೂರು ರಮೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಥಾನಾಯಕ ಅತಿಶಯ್‌ಗೆ (ವಿನಯ್‌) ಜೀವನದಲ್ಲಿ ಇರುವುದು ಎರಡೇ ಕನಸು. ಒಂದು, ದೊಡ್ಡ ಸಂಗೀತ ನಿರ್ದೇಶಕ ಆಗಬೇಕು ಎಂಬುದು. ಇನ್ನೊಂದು, ತನ್ನ ಹೃದಯ ಒಪ್ಪುವ ಹುಡುಗಿಯನ್ನು ಮದುವೆ ಆಗಬೇಕು ಎಂಬುದು. ಇವೆರಡಲ್ಲೂ ಆತ ಯಶಸ್ಸು ಸಾಧಿಸುತ್ತಾನಾ ಎಂಬುದೇ ಕಥೆ. ಅದು ತೆರೆಮೇಲೆ ಹೇಗೆ ಮೂಡಿಬಂದಿದೆ ಎಂಬುದನ್ನು ನೋಡಿರದವರು, ಓಟಿಟಿಯಲ್ಲಿ ಸಿನೆಮಾ ಬಿಡುಗಡೆಯಾದ ಮೇಲೆ ಕಣ್ತುಂಬಿಕೊಳ್ಳಬಹುದು.

Banner Content
Tags: , , , , ,

Related Article

Sponsored Ads1

error: Content is protected !!