Banner Top
Banner Content

‘ಎಕ್ಕ’ ಸಿನೆಮಾದ ‘ಬ್ಯಾಂಗಲ್‌ ಬಂಗಾರಿ…’ ಸಾಂಗ್‌ ರಿಲೀಸ್…

ಯುವ ರಾಜಕುಮಾರ್ – ಸಂಜನಾ ಆನಂದ್‌ ಬಿಂದಾಸ್‌ ಡ್ಯಾನ್ಸ್

‘Congratulations ಜಾನು… ಈ ರಾಜಂಗ್ ನೀನೇ Queen-u..’ ಹಾಡು ಅನಾವರಣ

ನಟ ಯುವ‌ ರಾಜಕುಮಾರ್ ನಾಯಕನಾಗಿ ನಟಿಸುತ್ತಿರುವ ಎರಡನೇ ಚಿತ್ರ ‘ಎಕ್ಕ’ದ ಕಡೆಯಿಂದ ಹೊಸ ಅಪ್‌ ಡೇಟ್‌ ಸಿಕ್ಕಿದೆ. ಈಗಾಗಲೇ ‘ಎಕ್ಕ’ ಚಿತ್ರದ  ಟೈಟಲ್‌ ಟ್ರ್ಯಾಕ್‌ ಹಾಗೂ ಟೀಸರ್‌ ಮೂಲಕ ಒಂದಷ್ಟು ಕುತೂಹಲ ಹೆಚ್ಚಿಸಿರುವ ಚಿತ್ರತಂಡ ಇದೀಗ, ‘ಎಕ್ಕ’ ಚಿತ್ರದ ‘ಬ್ಯಾಂಗಲ್‌ ಬಂಗಾರಿ…’ ಎಂಬ ಹೊಸ ಹಾಡನ್ನು ಅನಾವರಣ ಮಾಡಿದೆ. ‘ಆನಂದ್‌ ಆಡಿಯೋ’ ಯೂ-ಟ್ಯೂಬ್‌ ಚಾನೆಲ್‌ನಲ್ಲಿ ‘ಬ್ಯಾಂಗಲ್‌ ಬಂಗಾರಿ…’ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿದ್ದು, ನಿಧಾನವಾಗಿ ಸೋಶಿಯಲ್‌ ಮೀಡಿಯಾಗಳಲ್ಲಿ  ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇನ್ನು ಔಟ್‌ ಅಂಡ್‌ ಔಟ್‌ ಮಾಸ್‌ ಶೈಲಿಯಲ್ಲಿ ಮೂಡಿಬಂದಿರುವ ‘ಎಕ್ಕ’ ಚಿತ್ರದ ಈ ಗೀತೆಯಲ್ಲಿ ನಾಯಕ ನಟ ಯುವ ರಾಜಕುಮಾರ್‌ ಹಾಗೂ ನಾಯಕಿ ಸಂಜನಾ ಆನಂದ್‌ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ.

ಅಂತೋನಿ ದಾಸನ್‌ ಧ್ವನಿಯಲ್ಲಿ ಮೂಡಿದ ಗೀತೆ

ತನ್ನ ಇಷ್ಟದ ಹುಡ್ಗಿಯನ್ನು ‘ಬ್ಯಾಂಗಲ್‌ ಬಂಗಾರಿ…’ ಅಂತಾ ಕರೆಯುತ್ತಾ ನಾಯಕ ಕುಣಿದು ಕುಪ್ಪಳಿಸಿರುವ ಮೆಲೋಡಿ ಹಾಡು ಇದಾಗಿದೆ. ಈ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಚರಣ್ ರಾಜ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ‘ಬ್ಯಾಂಗಲ್ ಬಂಗಾರಿ…’ ಗೀತೆಗೆ ತಮಿಳಿನ ಖ್ಯಾತ ಗಾಯಕ ಅಂತೋನಿ ದಾಸನ್‌ ಧ್ವನಿಯಾಗಿದ್ದಾರೆ. ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆಯಲ್ಲಿ ಈ ಗೀತೆ ಸ್ಟೈಲಿಶ್‌ ಆಗಿ ಮೂಡಿ ಬಂದಿದೆ.

‘ಎಕ್ಕ’ ಸಿನೆಮಾದ ‘ಬ್ಯಾಂಗಲ್‌ ಬಂಗಾರಿ…’ ಹಾಡಿನ ಲಿರಿಕಲ್‌ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ತೆರೆಗೆ ಬರಲು ‘ಎಕ್ಕ’ ತಯಾರಿ

‘ಎಕ್ಕ’ ಸಿನಿಮಾವನ್ನು ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರ ‘ಪಿ.ಆರ್‌.ಕೆ ಪ್ರೊಡಕ್ಷನ್ಸ್‌’, ಜಯಣ್ಣ ಹಾಗೂ ಭೋಗೇಂದ್ರ ಅವರ ‘ಜಯಣ್ಣ ಕಂಬೈನ್ಸ್‌’ ಹಾಗೂ ‘ಕೆ.ಆರ್‌.ಜಿ ಸ್ಟುಡಿಯೋ’ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರದಲ್ಲಿ ಯುವ ರಾಜಕುಮಾರ್ ಸಖತ್ ರಫ್ ಆ್ಯಂಡ್ ಟಫ್ ರೋಲ್ ಮಾಡಿದ್ದಾರೆ. ರಕ್ತಸಿಕ್ತ ಜಗತ್ತಿನ ಹೊಸ ಅಧ್ಯಾಯ ಅಂತಲೂ ಫೀಲ್ ಆಗುತ್ತದೆ. ಆ ರೀತಿಯ ಪೋಸ್ಟರ್‌ಗಳು ಈಗಾಗಲೇ ರಿಲೀಸ್ ಆಗಿವೆ. ರೋಹಿತ್ ಪದಕಿ ನಿರ್ದೇಶನದಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ನಾಯಕ ಯುವ ರಾಜಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್‌ ಕೊಟ್ಟಿದ್ದಾರೆ. ಉಳಿದಂತೆ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿದೆ. ಈಗಾಗಲೇ ಒಂದಷ್ಟು ನಿರೀಕ್ಷೆ ಮೂಡಿಸಿರುವ ‘ಎಕ್ಕ’ ಸಿನೆಮಾವನ್ನು ಇದೇ ಜುಲೈ 18ಕ್ಕೆ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Banner Content
Tags: , , , , , , , ,

Related Article

Sponsored Ads1

error: Content is protected !!