Banner Top
Banner Content

‘ಜೂನಿಯರ್‌’ ಎರಡನೇ ಹಾಡು ‘ವೈರಲ್‌ ವಯ್ಯರಿ…’ ಬಿಡುಗಡೆ

ಡಿಎಸ್‌ಪಿ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ ಕಿರೀಟಿ-ಶ್ರೀಲೀಲಾ

‘ಜೂನಿಯರ್‌’ ಚಿತ್ರದ ಡ್ಯಾನ್ಸಿಂಗ್‌ ನಂಬರ್…

ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗದಲ್ಲಿ ಛಾಪೂ ಮೂಡಿಸಲು ಸಜ್ಜಾಗಿದ್ದಾರೆ. ಕಿರೀಟಿ ಅಭಿನಯದ ಚೊಚ್ಚಲ ಚಿತ್ರ ‘ಜೂನಿಯರ್‌’ ಟೀಸರ್‌ ಈಗಾಗಲೇ ಒಂದಷ್ಟು ಸದ್ದು ಮಾಡುತ್ತಿದೆ. ಇದೀಗ ‘ಜೂನಿಯರ್‌’ ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ. ‘ಆದಿತ್ಯ ಮ್ಯೂಸಿಕ್‌ ಕನ್ನಡ’ದಲ್ಲಿ ‘ವೈರಲ್‌ ವಯ್ಯರಿ…’ ಎಂಬ ಡ್ಯಾನ್ಸಿಂಗ್‌ ನಂಬರ್‌ ಸಾಂಗ್‌ ಇದೀಗ ಅನಾವರಣಗೊಂಡಿದೆ.

ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ

‘ವೈರಲ್‌ ವಯ್ಯರಿ…’ ಹಾಡಿಗೆ ಪವನ್‌ ಭಟ್‌ ಸಾಹಿತ್ಯ ಬರೆದಿದ್ದು, ಹರಿಪ್ರಿಯಾ ಮತ್ತು ದೀಪಕ್‌ ಬ್ಲೂ ಧ್ವನಿಯಾಗಿದ್ದಾರೆ. ದೇವಿಶ್ರೀ ಪ್ರಸಾದ್‌ ಮ್ಯೂಸಿಕ್‌ ಕಿಕ್‌ಗೆ ಕಿರೀಟಿ ಶ್ರೀಲೀಲಾ ಬೊಂಬಾಟ್‌ ಆಗಿ ಕುಣಿದಿದ್ದಾರೆ. ಇವರಿಬ್ಬರ ಎನರ್ಜಿ ಹೈಲೆವೆಲ್‌ನಲ್ಲಿದೆ. ತುಂಬ ಅದ್ಧೂರಿಯಾಗಿ ಕಿರೀಟಿ ಮತ್ತು ಶ್ರೀಲೀಲಾ ಹೆಜ್ಜೆ ಹಾಕಿರುವ ಈ ಹಾಡನ್ನು ಚಿತ್ರೀಕರಿಸಲಾಗಿದೆ.

ಬಹುತಾರಾಗಣದ ಬಿಗ್‌ ಬಜೆಟ್‌ ಚಿತ್ರ

ಅಂದಹಾಗೆ, ‘ಜೂನಿಯರ್‌’ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಬಹುನಿರೀಕ್ಷಿತ ‘ಜೂನಿಯರ್‌’ ಸಿನಿಮಾದಲ್ಲಿ ಕಿರೀಟಿ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಬಾಹುಬಲಿ’, ‘ಆರ್‌ಆರ್‌ಆರ್’ ಅಂತಹ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಕ್ಯಾಮರಾ ವರ್ಕ್ ಮಾಡಿರುವ ಕೆ. ಕೆ. ಸೆಂಥಿಲ್ ಕುಮಾರ್ ಅವರ ಕ್ಯಾಮರಾ ಕೈಚಳಕ ಈ ಚಿತ್ರದಲ್ಲಿದೆ.

‘ಜೂನಿಯರ್‌’ ಸಿನಿಮಾದ ಎರಡನೇ ಹಾಡು ‘ವೈರಲ್‌ ವಯ್ಯರಿ…’ ಹಾಡಿನ ಲಿರಿಕಲ್‌ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಜುಲೈ 18ಕ್ಕೆ ‘ಜೂನಿಯರ್‌’ ಸಿನಿಮಾ ಬಿಡುಗಡೆ

ಸಿನಿಮಾಗೆ ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ಸಾಹಸ ಸಂಯೋಜಿಸಿದ್ದಾರೆ. ದಕ್ಷಿಣ ಚಿತ್ರರಂಗದ ‘ರಾಕ್‌ ಸ್ಟಾರ್‌’ ದೇವಿಶ್ರೀ ಪ್ರಸಾದ್‌ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪ್ರಾರಂಭವಾದಾಗ ನಿರ್ದೇಶಕ ರಾಜಮೌಳಿ ಮುಹೂರ್ತಕ್ಕೆ ಆಗಮಿಸಿ ಶುಭಾಶಯ ತಿಳಿಸಿದ್ದರು. ಜುಲೈ 18ಕ್ಕೆ ‘ಜೂನಿಯರ್‌’ ಸಿನಿಮಾ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Banner Content
Tags: , , , , , ,

Related Article

Sponsored Ads1

error: Content is protected !!