Banner Top
Banner Content

ಹೊರಬಂತು ‘ಥಗ್‌ ಲೈಫ್‌’ ಸಿನೆಮಾದ ಮೊದಲ ಹಾಡು

ಕಮಲ್‌ ಹಾಸನ್-ಮಣಿರತ್ನಂ ಜೋಡಿಯ ಬಹುನಿರೀಕ್ಷಿತ ಚಿತ್ರ

ಮೂರು ದಶಕದ ಬಳಿಕ ಕಮಲ್‌ – ಮಣಿರತ್ನಂ ಕಮಾಲ್‌!

ಸುಮಾರು ಮೂರು ದಶಕದ ನಂತರ ಕಮಲ್ ಹಾಸನ್ – ಮಣಿರತ್ನಂ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರುವ ಬಹುನಿರೀಕ್ಷಿತ ಸಿನೆಮಾ ‘ಥಗ್‌ ಲೈಫ್’ ತೆರೆಗೆ ಬರಲು ತಯಾರಾಗುತ್ತಿದೆ.‌ ಈಗಾಗಲೇ ಈ ಸಿನೆಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೀಗ ‘ಥಗ್‌ ಲೈಫ್’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ‘ಥಗ್‌ ಲೈಫ್’ ಸಿನೆಮಾದ ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತು. ಅತ್ಯಂತ ವರ್ಣರಂಜಿತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ‘ಥಗ್‌ ಲೈಫ್’ ಸಿನೆಮಾದ ಕಲಾವಿದರಾದ ಕಮಲ್ ಹಾಸನ್, ಸಿಂಬು, ನಿರ್ದೇಶಕ ಮಣಿರತ್ನಂ, ಅಭಿರಾಮಿ, ಅಶೋಕ್ ಸೆಲ್ವನ್, ತ್ರಿಷಾ ಸೇರಿದಂತೆ ಚಿತ್ರದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ತಮಿಳು ಚಿತ್ರರಂಗದ ಹಲವು ತಾರೆಯರು ಭಾಗವಹಿಸಿದ್ದರು.

‘ಥಗ್‌ ಲೈಫ್‌’ ಚಿತ್ರದ ‘ಜಿಂಗುಚ್ಚಾ…’ ಬಿಡುಗಡೆ

‘ಥಗ್‌ ಲೈಫ್‌’ ಚಿತ್ರದ ‘ಜಿಂಗುಚ್ಚಾ…’ ಬಿಡುಗಡೆ ಆಗಿದ್ದು, ಹಾಡಿನಲ್ಲಿ ಕಮಲ್, ಸಿಂಬು ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಮದುವೆ ಸಮಾರಂಭದ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷ ಅಂದರೆ ಈ ಹಾಡಿಗೆ ಸ್ವತಃ ಕಮಲ್‌ ಹಾಸನ್‌ ಸಾಹಿತ್ಯ ಒದಗಿಸಿದ್ದಾರೆ. ಎ. ಆರ್. ರೆಹಮಾನ್ ಸಂಗೀತ ಎಲ್ಲರನ್ನೂ ಹಿಡಿದಿಟ್ಟುಕೊಳ್ಳುವಂತೆ ಮಾಡಿದೆ‌. ಚೆನ್ನೈನಲ್ಲಿ ನಡೆದ ಪ್ಯಾ‌ನ್ ಇಂಡಿಯಾದ ಪ್ರೆಸ್ ಮೀಟ್ ವೇದಿಕೆಯಲ್ಲಿ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.

‘ಥಗ್‌ ಲೈಫ್‌’ ಚಿತ್ರದ ‘ಜಿಂಗುಚ್ಚಾ…’ ಹಾಡಿನ ಲಿರಿಕಲ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಬಿಗ್‌ ಬಜೆಟ್‌, ಬಹು ತಾರಾಗಣದ ‘ಥಗ್‌ ಲೈಫ್’

ಇನ್ನು ‘ಥಗ್‌ ಲೈಫ್’ ಸಿನೆಮಾ ಬಿಗ್‌ ಬಜೆಟ್‌ನಲ್ಲಿ ಮತ್ತು ಬಹು ತಾರಾಗಣದಲ್ಲಿ ತಯಾರಾಗುತ್ತಿದೆ. ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’, ಆರ್. ಮಹೇಂದ್ರನ್, ‘ಮದ್ರಾಸ್ ಟಾಕೀಸ್’ ಮತ್ತು ಶಿವ ಅನಂತ್ ನಿರ್ಮಾಣದಲ್ಲಿ ‘ಥಗ್‌ ಲೈಫ್’ ಸಿನೆಮಾ ತಯಾರಾಗಿದೆ. ‘ಥಗ್‌ ಲೈಫ್’ ಚಿತ್ರದಲ್ಲಿ ಕಮಲ್ ಹಾಸನ್, ಸಿಲಂಬರಸನ್ ಟಿ. ಆರ್, ತ್ರಿಷಾ, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಅಭಿರಾಮಿ, ನಾಸರ್ ಹೀಗೆ ದೊಡ್ಡ ಕಲಾವಿದರ ದಂಡೇ ಇದೆ.

ಈ ಬಹು ನಿರೀಕ್ಷಿತ ‘ಥಗ್‌ ಲೈಫ್’ ಚಿತ್ರಕ್ಕೆ  ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್ ಸಂಗೀತವಿದೆ. ಈ ಚಿತ್ರದ ಕಥೆ, ಚಿತ್ರಕಥೆಯನ್ನು ಮಣಿರತ್ನಂ ಮತ್ತು ಕಮಲ್ ಹಾಸನ್ ಜಂಟಿಯಾಗಿ ಬರೆದಿದ್ದು, ಮಣಿರತ್ನಂ ನಿರ್ದೇಶನದಲ್ಲಿ ಈ ಸಿನೆಮಾ ಮೂಡಿಬರುತ್ತಿದೆ. ‘ಥಗ್‌ ಲೈಫ್’ ಚಿತ್ರಕ್ಕೆ ರವಿ ಆರ್. ಚಂದ್ರನ್ ಸಿನಿಮಾಟೋಗ್ರಫಿ, ಅನ್ಬರಿವ್ ಆ್ಯಕ್ಷನ್ ಕೋರಿಯಾಗ್ರಫಿ ಇದೆ.

ಕಮಲ್‌ ಚಿತ್ರಕ್ಕೆ ಭಾರೀ ಬೇಡಿಕೆ!

ಈಗಾಗಲೇ ‘ಥಗ್‌ ಲೈಫ್‌’ ಚಿತ್ರದ ಒಟಿಟಿ ಹಕ್ಕು ‘ನೆಟ್‌ ಫ್ಲಿಕ್ಸ್‌’ ಪಾಲಾಗಿದ್ದು, ಆಡಿಯೋ ಹಕ್ಕನ್ನು ‘ಸರೆಗಮ’ ತನ್ನದಾಗಿಸಿಕೊಂಡಿದೆ. ಇನ್ನು ‘ಥಗ್‌ ಲೈಫ್’ ಸಿನೆಮಾದ ಬಿಡುಗಡೆಗೂ ಕೂಡ ಅನೇಕ ಘಟಾನುಘಟಿ ವಿತರಕರು ಮುಂದೆ ಬಂದಿದ್ದಾರೆ. ‘ಥಗ್ಸ್‌ ಲೈಫ್‌’ ಸಿನೆಮಾವನ್ನು ತಮಿಳುನಾಡಿನಲ್ಲಿ ‘ರೆಡ್ ಜೈಂಟ್’ ಮೂವೀಸ್ ವಿತರಣೆ ಜವಾಬ್ದಾರಿ ಹೊತ್ತುಕೊಂಡಿದೆ. ಓವರ್‌ ಸೀಸ್‌ ನಲ್ಲಿ ‘ಹೋಮ್ ಸ್ಕ್ರೀನ್ ಎಂಟರ್‌ಟೈನ್‌ಮೆಂಟ್’ ಸಹಯೋಗದೊಂದಿಗೆ ‘ಎ. ಪಿ ಇಂಟರ್‌ನ್ಯಾಷನಲ್’ ವಿತರಣೆ ಮಾಡುತ್ತಿದೆ. ಇನ್ನು ಉತ್ತರ ಭಾರತದಲ್ಲಿ ‘ಪೆನ್ ಮರುಧರ್ ಸಿನಿ ಎಂಟರ್‌ಟೈನ್‌ಮೆಂಟ್’, ಆಂಧ್ರಪ್ರದೇಶ ಮತ್ತು ತೆಲಂಗಾಣನಲ್ಲಿ ‘ಶ್ರೇಷ್ಠ್ ಮೂವೀಸ್’ ಕಮಲ್‌ ಹಾಸನ್‌ ಚಿತ್ರವನ್ನು ವಿತರಣೆ ಮಾಡಿದರೆ, ಕರ್ನಾಟಕದಲ್ಲಿ ‘ಫೈವ್ ಸ್ಟಾರ್ ಸೆಂಥಿಲ್’ ಸಂಸ್ಥೆ ಕಮಲ್‌ ಹಾಸನ್ ಅವರ ಬಹುನಿರೀಕ್ಷಿತ ‘ಥಗ್‌ ಲೈಫ್’ ಸಿನೆಮಾವನ್ನು ವಿತರಣೆ ಮಾಡಲಿದೆ.

Banner Content
Tags: , , , , , , , , ,

Related Article

Sponsored Ads1

error: Content is protected !!