Banner Top
Banner Content

ರೆಡ್ ಗೌನ್ ನಲ್ಲಿ ‘ಪಟಾಕ’ ಬೆಡಗಿ ನಭಾ ನಟೇಶ್ ಮಿಂಚಿಂಗ್…

ಹೊಸ ಫೋಟೋಶೂಟ್ ನಲ್ಲಿ ಪಡ್ಡೆಗಳಿಗೆ ಕಿಚ್ಚು ಹಚ್ಚಿಸಿದ ‘ವಜ್ರಕಾಯ’ ಸುಂದರಿ..

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ವಜ್ರಕಾಯ’ ಸಿನೆಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದವರು ನಟಿ ನಭಾ ನಟೇಶ್. ಮೊದಲ  ಸಿನೆಮಾದಲ್ಲಿಯೇ ‘ಪಟಾಕ’ ಎಂಬ ಬಜಾರಿ ಪಾತ್ರದ ಮೂಲಕ ಸಿನಿ ಪ್ರಿಯರ ಗಮನಸೆಳೆದ ಶೃಂಗೇರಿಯ ಈ ಸುಂದರಿ, ಮೊದಲ ನೋಟದಲ್ಲೇ ಸಿನಿಮಾ ಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.  ‘ವಜ್ರಕಾಯ’ ಸಿನೆಮಾದ ನಂತರ ಕನ್ನಡದಲ್ಲಿ ನಭಾ ಬ್ಯುಸಿಯಾಗಲಿದ್ದಾರೆ ಎನ್ನುವಾಗಲೇ, ನಿಧಾನವಾಗಿ ಕನ್ನಡದಿಂದ ತೆಲುಗಿನತ್ತ ನಭಾ ಮುಖ ಮಾಡಿದ್ದರು. ಈಗ ಸದ್ಯಕ್ಕೆ ಟಾಲಿವುಡ್ ಅಂಗಳದಲ್ಲಿ ಬ್ಯಾಕ್‌ ಟು ಬ್ಯಾಕ್‌ ತೆಲುಗು ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ನಭಾ ನಟೇಶ್‌ ತೆಲುಗು ಸಿನಿಪ್ರಿಯರ ಗಮನ ಸೆಳೆಯುವಲ್ಲೂ ಯಶಸ್ವಿಯಾಗಿದ್ದಾರೆ. ಇನ್ನು ಇತ್ತೀಚೆಗಷ್ಟೇ ತೆಲುಗಿನಲ್ಲಿ ‘ಡಾರ್ಲಿಂಗ್’ ಸಿನೆಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ನಭಾ ನಟೇಶ್, ತಮ್ಮ ಅಭಿನಯದ ಮೂಲಕ ತೆಲುಗು ಸಿನಿಪ್ರಿಯರಿಗೆ ಇಷ್ಟವಾಗಿದ್ದರು. ಈಗ ಹೊಸ ಥರದ ಫೋಟೋಶೂಟ್ ನಲ್ಲಿ ಮಿಂಚಿ, ಮತ್ತೆ ಸುದ್ದಿಯಾಗಿದ್ದಾರೆ.

ನಭಾ ‘ಡಾರ್ಲಿಂಗ್’ ಸಪ್ತ ಅವತಾರಕ್ಕೆ ಫ್ಯಾನ್ಸ್ ಜೈಕಾರ

ಒಂದಷ್ಟು ಸಿನೆಮಾಗಳಲ್ಲಿ ಅಭಿನಯಿಸುತ್ತಿರುವ ನಭಾ ಇದರ ನಡುವೆಯೇ ಇತ್ತೀಚೆಗೆ ಭರ್ಜರಿಯಾಗಿ ಫೋಟೋಶೂಟ್‌ ಮಾಡಿಸಿದ್ದಾರೆ. ಈ ಫೋಟೋಶೂಟ್‌ ನ ಫೋಟೋಗಳನ್ನು ನಭಾ ತಮ್ಮ ಸೋಶೀಯಲ್‌ ಮೀಡಿಯಾ ಖಾತೆಗಳಲ್ಲಿ ಕೂಡ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಗೌನ್ ನಲ್ಲಿ ಗುಲಾಬಿಯಂತೆ ಕಂಗೊಳಿಸಿರುವ ‘ಪಟಾಕ’ ನಯಾ ಸ್ಟೈಲ್ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. ರೆಡ್ ಗೌನ್ ನಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಅವತಾರದಲ್ಲಿ ತರೇವಾರಿ ಫೋಸ್ ಕೊಟ್ಟು ಕ್ಯಾಮೆರಾಗೆ ‘ವಜ್ರಕಾಯ’ ಬೆಡಗಿ ಕಣ್ಣು ಹೊಡೆದಿದ್ದಾಳೆ. ಶೃಂಗೇರಿ ಸುಂದರಿಯ ಸ್ಟೈಲೀಶ್ ಅವತಾರ ಕಂಡು ಅಭಿಮಾನಿಗಳು ‘ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನ ನೋಡಿ…’ ಅಂತಾ ಕಮೆಂಟ್ ಮಾಡುತ್ತಿದ್ದಾರೆ.

ಅಪಘಾತದಿಂದ ಚೇತರಿಸಿಕೊಂಡ ಬಳಿಕ ನಭಾ ನಟೇಶ್ ಬೆಳ್ಳಿಪರದೆಯಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ. ನಟ ಪ್ರಿಯಾದರ್ಶಿಗೆ ನಾಯಕಿಯಾಗಿ ನಟಿಸಿರುವ ತೆಲುಗಿನ ‘ಡಾರ್ಲಿಂಗ್’ ಸಿನಿಮಾದಲ್ಲಿ ನಭಾ ನಟೇಶ್ ಮೋಡಿ ಮಾಡಿದ್ದಾರೆ. ‘7’ ಪಾತ್ರದಲ್ಲಿ ‘ಪಟಾಕ’ ಧಮಾಕ ಸೃಷ್ಟಿಸಿದ್ದಾರೆ.

 ‘ಡಾರ್ಲಿಂಗ್’ ಸಿನಿಮಾದಲ್ಲಿ ನಭಾ ನಟೇಶ್ ಧಮಾಕ

ನಭಾ ‘ಸ್ವಯಂಭು’ ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಕೆಲಸ ಕೂಡ ನಡೆಯುತ್ತಿದೆ. ನಿಖಿಲ್ ಸಿದ್ಧಾರ್ಥ್‌ಗೆ ನಾಯಕಿಯಾಗಿ ನಭಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ‘ಪಟಾಕ ರಾಣಿ’ಯಂತ ರೂಲ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದು, ಅವರ ಲುಕ್ ವೈರಲ್ ಆಗಿದೆ. ಕನ್ನಡ ಸಿನಿಮಾವಲ್ಲದೇ ನಭಾ ನಟೇಶ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಎಲ್ಲ ಚಿತ್ರಗಳಲ್ಲಿ ‘ಇಸ್ಮಾರ್ಟ್’ ಸಿನಿಮಾ ಹೆಚ್ಚು ಗಮನ ಸೆಳೆದಿತ್ತು. ನಂತರ ‘ಡಿಸ್ಕೋ ರಾಜಾ’ ಸಿನಿಮಾದಲ್ಲೂ ನಭಾ ನಟೇಶ್ ಅಭಿನಯ ಜನರಿಗೆ ಇಷ್ಟವಾಗಿತ್ತು.

Banner Content
Tags: ,

Related Article

Sponsored Ads1

error: Content is protected !!