Banner Top
Banner Content

ದೊಡ್ಮನೆ ‘ಯುವ’ನಿಗೆ ದುನಿಯಾ ವಿಜಯ್‌ ಪುತ್ರಿ ರಿತನ್ಯಾ ನಾಯಕಿ

‘ಪಿಆರ್‌ಕೆ’, ‘ಕೆಆರ್‌ಜಿ’, ‘ಜಯಣ್ಣ ಫಿಲ್ಮಂ’ ಬ್ಯಾನರ್‌ನ ಮತ್ತೊಂದು ಸಿನೆಮಾ…

‘ಅಕ್ಷಯ ತೃತೀಯ’ಕ್ಕೆ ಸೂರಿ ಹೊಸ ಸಿನೆಮಾಗೆ ಚಾಲನೆ…

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ‘ಪಿಆರ್‌ಕೆ ಪ್ರೊಡಕ್ಷನ್ಸ್‌’, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ. ರಾಜ್‌ ಒಡೆತನದ ‘ಕೆಆರ್‌ಜಿ’ ಹಾಗೂ ಜಯಣ್ಣ-ಭೋಗಣ್ಣ ಅವರ ‘ಜಯಣ್ಣ ಫಿಲ್ಮಂಸ್‌’ ಬ್ಯಾನರ್‌ನಡಿ ‘ಎಕ್ಕ’ ಸಿನೆಮಾ ಅದ್ಧೂರಿಯಾಗಿ ತಯಾರಾಗುತ್ತಿದೆ. ‘ಎಕ್ಕ’ ಸಿನೆಮಾ ಜೂನ್‌ ತಿಂಗಳಲ್ಲಿ ತೆರೆಗೆ ಬರಲಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಈ ಪ್ರೊಡಕ್ಷನ್ಸ್‌ ನಡಿ ಹೊಸ ಸಿನೆಮಾ ಘೋಷಣೆಯಾಗಿದೆ.

ಯುವ-ರಿತನ್ಯಾಗೆ ದುನಿಯಾ ಸೂರಿ ಆಕ್ಷನ್‌-ಕಟ್‌

ಬಹಳ ದಿನಗಳಿಂದ ಕೇಳಿ ಬರ್ತಿದ್ದ ಯುವ ರಾಜಕುಮಾರ್‌ ಹಾಗೂ ಸುಕ್ಕ ಸೂರಿ ಸಿನೆಮಾಗೆ ‘ಅಕ್ಷಯ ತೃತೀಯ’ ದಿನ ಅಧಿಕೃತ ಚಾಲನೆ ಸಿಕ್ಕಿದೆ. ‘ಅಕ್ಷಯ ತೃತೀಯ’ ದಿನ ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಈ ಸಿನೆಮಾದ ಮುಹೂರ್ತ ನೆರವೇರಿದೆ. ಸ್ಯಾಂಡಲ್‌ವುಡ್‌ ‘ಸಲಗ’ ದುನಿಯಾ ವಿಜಯ್‌ ಕುಮಾರ್‌ ಕ್ಲ್ಯಾಪ್‌ ಮಾಡಿದ್ದು, ಅಪ್ಪು ಅವರ ಮಗಳು ಧೃತಿ ಪುನೀತ್ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವ ಫ್ಯಾಮಿಲಿ, ಅಶ್ವಿನಿ ಪುನೀತ್‌ ರಾಜಕುಮಾರ್‌, ಕಾರ್ತಿಕ್‌ ಗೌಡ, ಯೋಗಿ ಜಿ. ರಾಜ್‌, ನಿರ್ದೇಶಕ ಸೂರಿ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.

ಯುವ ರಾಜಕುಮಾರ್ ಮೂರನೇ ಚಿತ್ರ

ಸುಕ್ಕ ಸೂರಿ ರಾ ಸ್ಟೈಲ್‌ ಮೇಕಿಂಗ್‌ಗೆ ಫೇಮಸ್. ಹೀಗಾಗಿ ಯುವ ಅವರ ಗರಡಿಯಲ್ಲಿ ಯಾವ ರೀತಿ ಕಾಣಿಸಲಿದ್ದಾರೆ ಎಂಬ ಕುತೂಹಲವಿದೆ. ಇನ್ನೂ ‘ದುನಿಯಾ’ ವಿಜಯ್‌ ಮೊದಲ ಪುತ್ರಿ ರಿತನ್ಯಾ ವಿಜಯ್‌ ಕುಮಾರ್‌ ಈ ಚಿತ್ರದ ನಾಯಕಿ. ಈಗಾಗಲೇ ಅಪ್ಪನ ಜೊತೆ ‘ಲ್ಯಾಂಡ್‌ ಲಾರ್ಡ್‌’ ಸಿನೆಮಾ ಮೂಲಕ ಇಂಡಸ್ಟ್ರೀಗೆ ಬಲಗಾಲಿಟ್ಟಿರುವ ರಿತನ್ಯಾಗೆ ಇದು ಎರಡನೇ ಸಿನೆಮಾವಾದರೆ, ಯುವ ರಾಜಕುಮಾರ್ ಗೆ ಇದು ಮೂರನೇ ಚಿತ್ರ.

ಸೂರಿ ಗರಡಿಯಲ್ಲಿ ಖಾಯಂ ಆಗಿ ಕೆಲಸ ಮಾಡುವ ದೀಪು ಎಸ್‌. ಕುಮಾರ್‌ ಸಂಕಲನ, ಚರಣ್‌ ರಾಜ್‌ ಸಂಗೀತ ನಿರ್ದೇಶನ, ಸಂತೋಷ್‌ ಕಲಾ ನಿರ್ದೇಶನ, ಶೇಖರ್‌ ಕ್ಯಾಮೆರಾ ವರ್ಕ್‌ ಈ ಚಿತ್ರಕ್ಕೆ ಇರಲಿದೆ. ಮೇ ತಿಂಗಳಾತ್ಯಂತಕ್ಕೆ ಚಿತ್ರತಂಡ ಶೂಟಿಂಗ್‌ ಅಖಾಡಕ್ಕೆ ಇಳಿಯಲಿದೆ. ಪ್ರತಿಷ್ಠಿತ ಮೂರು ನಿರ್ಮಾಣ ಸಂಸ್ಥೆಯಡಿ ಬರ್ತಿರುವ ಸಿನೆಮಾ ಬಹಳ ದೊಡ್ಡಮಟ್ಟದಲ್ಲಿ ತಯಾರಗಲಿದೆ.

ಜೂನ್‌ಗೆ ‘ಎಕ್ಕ’ ತೆರೆಗೆ
‘ಪಿಆರ್‌ಕೆ ಪ್ರೊಡಕ್ಷನ್ಸ್‌’, ‘ಕೆಆರ್‌ಜಿ’, ‘ಜಯಣ್ಣ ಫಿಲ್ಮಂ’ ಬ್ಯಾನರ್‌ನಡಿ ಬರ್ತಿರುವ ಯುವ ರಾಜಕುಮಾರ್‌ ನಾಯಕನಾಗಿ ಹಾಗೂ ರೋಹಿತ್‌ ಪದಕಿ ನಿರ್ದೇಶನದ ‘ಎಕ್ಕ’ ಸಿನೆಮಾ ಜೂನ್‌ ತಿಂಗಳಲ್ಲಿ ತೆರೆಗೆ ಬರಲಿದೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ರಿಲೀಸ್‌ ಆಗಿರುವ ‘ಎಕ್ಕ’ ಸಿನೆಮಾ ಟೀಸರ್‌ ಹಾಗೂ ಟೈಟಲ್‌ ಟ್ರ್ಯಾಕ್‌ ದೊಡ್ಡ ಮಟ್ಟದ ಹಿಟ್‌ ಕಂಡಿದೆ.

Banner Content
Tags: , , , , , ,

Related Article

Sponsored Ads1

error: Content is protected !!