Banner Top
Banner Content

‘ಎಕ್ಕ’ ಸಿನಿಮಾದ ಹಾಡಿಗೆ 10 ಮಿಲಿಯನ್ ವೀವ್ಸ್

ರೆಕಾರ್ಡ್ ಬರೆದ ಯುವ ರಾಜಕುಮಾರ್ ‘ಬ್ಯಾಂಗಲ್ ಬಂಗಾರಿ…’ ಹಾಡು

ಯುವ ರಾಜಕುಮಾರ್ ‘ಎಕ್ಕ’ ಚಿತ್ರದ ಹಾಡಿಗೆ ಭರ್ಜರಿ ರೆಸ್ಪಾನ್ಸ್ 

‘ಎಕ್ಕ’ ಸಿನಿಮಾದ ‘ಬ್ಯಾಂಗಲ್ ಬಂಗಾರಿ…’ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಾಯಕ ಯುವ ರಾಜಕುಮಾರ್ ಹಾಗೂ ನಾಯಕಿ ಸಂಜನಾ ಆನಂದ್ ‘ಬ್ಯಾಂಗಲ್ ಬಂಗಾರಿ…’ ಅಂತಾ ಕುಣಿದು ಕುಪ್ಪಳಿಸಿದ್ದರು.

‘ಬ್ಯಾಂಗಲ್ ಬಂಗಾರಿ’ಗೆ 10 ಮಿಲಿಯನ್ ವೀವ್ಸ್

ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದ ಹಾಡಿಗೆ ಆಂತೋನಿ ದಾಸ್ ಕಂಠ ಕುಣಿಸಿದ್ದರು. ಚರಣ್ ರಾಜ್ ಸಂಗೀತ, ಯುವ-ಸಂಜನಾ ಕುಣಿದ ‘ಬ್ಯಾಂಗಲ್ ಬಂಗಾರಿ…’ ಗೀತೆ ಸಖತ್ ಹಿಟ್ ಕಂಡಿದೆ. ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿರುವ ಹಾಡು, ‘ಟಾಪ್ ಮ್ಯೂಸಿಕ್ ವಿಡಿಯೋ’ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದಿದೆ. ಅತಿ ಕಡಿಮೆ ಸಮಯದಲ್ಲಿ ‘ಬ್ಯಾಂಗಲ್ ಬಂಗಾರಿ…’ ದಾಖಲೆ ಬರೆದಿದ್ದು, ಚಿತ್ರತಂಡದ ಖುಷಿಗೆ ಕಾರಣವಾಗಿದೆ.

ನಾಯಕಿ ಸಂಜನಾ ಆನಂದ್ ಇಲ್ಲಿ ‘ಬ್ಯಾಂಗಲ್ ಬಂಗಾರಿ…’ ಆಗಿದ್ದಾರೆ. ಯವ ರಾಜಕುಮಾರ್ ಲೈಫ್ ಅಲ್ಲಿ ಬರೋ ಈ ಬಂಗಾರಿಗೆ ಬ್ಯಾಂಗಲ್ ತೊಡಿಸಿದಾಗ ಶುರು ಆಗೋ ಹಾಡು ಇದಾಗಿದೆ. ಸಂಭ್ರಮಾಚರಣೆಯ ಕ್ಷಣದ ಈ ಗೀತೆಗೆ ಮುರಳಿ ಮಾಸ್ಟರ್ ಒಳ್ಳೆ ಸ್ಟೆಪ್‌ಗಳನ್ನೆ ಕಂಪೋಸ್ ಮಾಡಿದ್ದಾರೆ.

ಜುಲೈ 18 ರಂದು ‘ಎಕ್ಕ’ ಸಿನಿಮಾ ಬಿಡುಗಡೆ

‘ಎಕ್ಕ’ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತದ ಮೋಡಿ ಇಡೀ ಚಿತ್ರಕ್ಕಿದೆ. ಅಶ್ವಿನಿ ಪುನೀತ್ ರಾಜಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಒಟ್ಟಿಗೆ ಸೇರಿ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಚಿತ್ರದಲ್ಲಿ ‘ಡೆಡ್ಲಿ ಸೋಮ’ ಖ್ಯಾತಿಯ ನಟ ಆದಿತ್ಯ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ ಕೂಡ ನಟಿಸಿದ್ದಾರೆ. ಇವರಲ್ಲದೆ ಈ ಚಿತ್ರದಲ್ಲಿ ಸಂಜನಾ ಆನಂದ್, ಸಂಪದಾ ಸೇರಿ ಇಬ್ಬರು ನಾಯಕಿಯರಿದ್ದಾರೆ. ಜುಲೈ 18 ರಂದು ‘ಎಕ್ಕ’ ಸಿನಿಮಾ ಬಿಡುಗಡೆಯಾಗುತ್ತಿದ್ದು, ಯುವ ರಾಜಕುಮಾರ್ ಎರಡನೇ ಸಿನಿಮಾ ಇದಾಗಿದೆ.

Banner Content
Tags: , , , ,

Related Article

Sponsored Ads1

error: Content is protected !!