Pop Corner

ಪುರಿ ಜಗನ್ನಾಥ್ – ವಿಜಯ್‌ ಸೇತುಪತಿ ಚಿತ್ರಕ್ಕೆ ದುನಿಯಾ ವಿಜಯ್‌ ಎಂಟ್ರಿ!

ಪುರಿ ಜಗನ್ನಾಥ್ – ವಿಜಯ್‌ ಸೇತುಪತಿ ಚಿತ್ರದಲ್ಲಿ ದುನಿಯಾ ವಿಜಯ್‌ 

‘ವೀರಸಿಂಹ ರೆಡ್ಡಿ’ ಬಳಿಕ ವಿಜಯ್‌ ನಟಿಸಲಿರುವ ಎರಡನೇ ತೆಲುಗು ಸಿನಿಮಾ

ಪುರಿ ಜಗನ್ನಾಥ್‌ ಪ್ರಾಜೆಕ್ಟ್‌ಗೆ ಸ್ಯಾಂಡಲ್‌ವುಡ್‌ ‘ಸಲಗ’

ನಿರ್ದೇಶಕ ಪುರಿ ಜಗನ್ನಾಥ್‌ ಹಾಗೂ ವಿಜಯ್‌ ಸೇತುಪತಿ ಕಾಂಬಿನೇಷನ್‌ ಸಿನಿಮಾ ಈಗಾಗಲೇ ತಾರಾಬಳಗದ ಮೂಲಕ ಕುತೂಹಲ ಹೆಚ್ಚಿಸಿದೆ. ಟಬು ಇತ್ತೀಚೆಗಷ್ಟೇ ಚಿತ್ರತಂಡ ಸೇರಿಕೊಂಡಿದ್ದು, ಇದೀ ಸ್ಯಾಂಡಲ್‌ವುಡ್‌ ‘ಸಲಗ’ ವಿಜಯ್‌ ಕುಮಾರ್‌ ಪುರಿ ಜಗನ್ನಾಥ್‌ ಪ್ರಾಜೆಕ್ಟ್‌ಗೆ ಎಂಟ್ರಿ ಕೊಟ್ಟಿದ್ದಾರೆ.

‘ವೀರಸಿಂಹ ರೆಡ್ಡಿ’ ಬಳಿಕ ವಿಜಯ್‌ ನಟಿಸಲಿರುವ ಎರಡನೇ ತೆಲುಗು ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ದುನಿಯಾ ವಿಜಯ್‌ ಅಭಿನಯಸಲಿದ್ದು, ಅವರನ್ನು ತಮ್ಮ ತಂಡಕ್ಕೆ ಪುರಿ ಜಗನ್ನಾಥ್‌ ಹಾಗೂ ನಿರ್ಮಾಪಕಿ ಚಾರ್ಮಿ ಬರ ಮಾಡಿಕೊಂಡಿದ್ದಾರೆ.

ಪುರಿ ಜಗನ್ನಾಥ್‌ ಬರೆದು ನಿರ್ದೇಶಿಸುತ್ತಿರುವ ಈ ಪ್ಯಾನ್‌ ಇಂಡಿಯಾ ಪ್ರಾಜೆಕ್ಟ್‌ ‘ಪುರಿ ಕನೆಕ್ಟ್‌’ ಬ್ಯಾನರ್‌ ನಡಿ ಮೂಡಿಬರಲಿದೆ. ಪುರಿ ಜಗನ್ನಾಥ್‌ ಹಾಗೂ ಚಾರ್ಮಿ ಕೌರ್‌ ಬಂಡವಾಳ ಹೂಡಲಿರುವ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಜೂನ್‌ನಿಂದ ಚಿತ್ರತಂಡ ಶೂಟಿಂಗ್‌ ಅಖಾಡಕ್ಕೆ ಇಳಿಯಲಿದೆ.

Related Posts

error: Content is protected !!