Video

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಟೀಸರ್ ಔಟ್‌

ಮತ್ತೊಂದು ಕೇಸ್..‌, ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಟೀಸರ್

ವಿಜಯ ರಾಘವೇಂದ್ರ ಅಭಿನಯದ ಮತ್ತೊಂದು ಹೊಸಚಿತ್ರ ಬಿಡುಗಡೆಗೆ ರೆಡಿ

ಸೋಶಿಯಲ್‌ ಮೀಡಿಯಾದಲ್ಲಿ ಸೆಲೆಬ್ರಿಟಿಗಳಿಂದ ಟೀಸರ್‌ ರಿಲೀಸ್‌

ನಟ ವಿಜಯ ರಾಘವೇಂದ್ರ ಅಭಿನಯಿಸುತ್ತಿರುವ ಹೊಸ ಸಿನೆಮಾ ‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ಈ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಈ ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಸೋಶಿಯಲ್‌ ಮೀಡಿಯಾಗಳಲ್ಲಿ ‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’ ಚಿತ್ರದ ಮೊದಲ ಟೀಸರ್‌ ಬಿಡುಗಡೆಯಾಗಿದ್ದು, ನಟಿ ಭಾವನಾ ಮೆನನ್, ನಟರಾದ ಶಿವರಾಜ್ ಕುಮಾರ್, ಡಾಲಿ ಧನಂಜಯ್ , ಉನ್ನಿ ಮುಕುಂದ್ ಹಾಗೂ ನವೀನ್ ಶಂಕರ್ ಮೊದಲಾದ ತಾರೆಯರು ಸೋಶಿಯಲ್‌ ಮೀಡಿಯಾದಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನೆಮಾದ ಟೀಸರ್ ನ್ನು‌ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’ ಟೀಸರ್‌…

ಸದ್ಯ ಸೋಶಿಯಲ್‌ ಮೀಡಿಯಾಗಳಲ್ಲಿ ಬಿಡುಗಡೆಯಾಗಿರುವ ‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’ ಸಿನೆಮಾದ ಟ್ರೇಲರ್‌ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುವಂತಿದೆ. ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನೆಮಾದ ಟೀಸರ್ ನಲ್ಲಿ ನಾಯಕ ನಟ ವಿಜಯ್‌ ರಾಘವೇಂದ್ರ ಪೊಲೀಸ್‌ ಅಧಿಕಾರಿಯಾಗಿ ಮತ್ತೊಂದು ಪ್ರಕರಣವನ್ನು‌ ಇಲ್ಲಿ ಕೈಗೆತ್ತಿಕೊಂಡಿದ್ದಾರೆ. ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಶೈಲಿಯಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನೆಮಾ ಮೂಡಿಬರುತ್ತಿದ್ದು, ಟೀಸರ್‌ನಲ್ಲಿ ಚಿತ್ರದ ಕೆಲ ಝಲಕ್‌ ಅನ್ನು ತೋರಿಸಲಾಗಿದೆ.

‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’ ಸಿನೆಮಾದ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಹಿಂದಿನ ‘ಸೀತಾರಾಮ್‌ ಬಿನೋಯ್‌’ ಚಿತ್ರದ ಸೀಕ್ವೆಲ್‌…

ಅಂದಹಾಗೆ, ‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’ ಸಿನೆಮಾ, 2021ರಲ್ಲಿ ತೆರೆಕಂಡ ವಿಜಯ ರಾಘವೇಂದ್ರ ನಟನೆಯ ‘ಸೀತಾರಾಮ್‌ ಬಿನೋಯ್‌’ ಸಿನೆಮಾದ ಸೀಕ್ವೆಲ್‌ ಆಗಿದೆ. ಅದರಲ್ಲಿ ಪೊಲೀಸ್‌ ಅಧಿಕಾರಿಯಾಗಿ ಮಿಂಚಿದ್ದ ವಿಜಯ ರಾಘವೇಂದ್ರ ಬಳಿಕ ‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’ ಸಿನೆಮಾದಲ್ಲೂ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಈ ಹಿಂದೆ ‘ಸೀತಾರಾಮ್‌ ಬಿನೋಯ್‌’ ಚಿತ್ರವನ್ನು ನಿರ್ದೇಶಿಸಿದ್ದ ದೇವಿಪ್ರಸಾದ್‌ ಶೆಟ್ಟಿ ಅವರೇ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಇದೀಗ ಮತ್ತೊಮ್ಮೆ ದೇವಿ ಪ್ರಸಾದ್‌ ಶೆಟ್ಟಿ ಜೊತೆ ವಿಜಯ ರಾಘವೇಂದ್ರ ‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’ ಸಿನೆಮಾ ಮಾಡಿದ್ದಾರೆ. ಹಿಂದಿನ ಸಿನೆಮಾದಲ್ಲಿ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನೆಮಾದಲ್ಲೂ ಮುಂದುವರೆದಿದ್ದಾರೆ.

ಶೀಘ್ರದಲ್ಲಿಯೇ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ತೆರೆಗೆ

ಸದ್ಯ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ. ನಿರ್ದೇಶಕ ದೇವಿಪ್ರಸಾದ್‌ ಅವರೇ ಈ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರಕ್ಕೆ ಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿ ಸಾತ್ವಿಕ್‌ ಹೆಬ್ಬಾರ್‌ ಜೊತೆ ಕೈಜೋಡಿಸಿದ್ದಾರೆ. ನಿರ್ದೇಶಕ ಪವನ್‌ ಒಡೆಯರ್‌ ಸಿನೆಮಾವನ್ನು ಪ್ರಸ್ತುಪಡಿಸಲಿದ್ದಾರೆ. ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರಕ್ಕೆ ಹೇಮಂತ್ ಆಚಾರ್ ಛಾಯಾಗ್ರಹಣ, ನವನೀತ್ ಶ್ಯಾಮ್ ಸಂಗೀತ ನಿರ್ದೇಶನ, ಶಶಾಂಕ್ ನಾರಾಯಣ್ ಸಂಕಲನ, ಭವಾನಿ ಶಂಕರ್‌ ಕಲಾ ನಿರ್ದೇಶನವಿದೆ.

Related Posts

error: Content is protected !!