Street Beat

ಆಡಿಯನ್ಸ್‌ ಮುಂದೆ ಬರೋಕೆ ಹೊಸ ‘ಬೆಟಾಲಿಯನ್’ ರೆಡಿ!

ಹೊಸ ಪ್ರತಿಭೆಗಳ ‘ಬೆಟಾಲಿಯನ್‌’ ಚಿತ್ರದ ಟೈಟಲ್‌ ಬಿಡುಗಡೆ

‘ಆಕಾಶ್ ಪಿಕ್ಚರ್ಸ್‌’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

ಪ್ರಕಾಶ್‌ ಎಸ್‌. ಬೂದೂರು ನಿರ್ಮಾಣದ ಚಿತ್ರಕ್ಕೆ ಕೆ. ಎಸ್‌. ಕೃಷ್ಣಕುಮಾರ್‌ ನಿರ್ದೇಶನ

‘ಆಕಾಶ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಎಸ್. ಬೂದೂರು ಅವರ ನಿರ್ಮಾಣದಲ್ಲಿ ಯುವ ಪ್ರತಿಭೆ ಕೆ. ಎಸ್‌. ಕೃಷ್ಣಕುಮಾರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಕನ್ನಡ ಚಿತ್ರಕ್ಕೆ ‘ಬೆಟಾಲಿಯನ್’ ಎಂದು ಹೆಸರಿಡಲಾಗಿದ್ದು, ಇದೀಗ ಈ ಹೊಸಚಿತ್ರದ ಶೀರ್ಷಿಕೆಯನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.

ಈಗಾಗಲೇ ‘ಆಕಾಶ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಮೊದಲನೇ ನಿರ್ಮಾಣದ ‘ಮಹಾನ್’ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಮತ್ತು ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯಿಸಿದ್ದು, ಎರಡನೇ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ‘ಆಕಾಶ್ ಪಿಕ್ಚರ್ಸ್’ ಬ್ಯಾನರ್ ಮೂರನೇ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದು, ಆ ಚಿತ್ರಕ್ಕೆ ‘ಬೆಟಾಲಿಯನ್’ ಎಂದು ಹೆಸರಿಡಲಾಗಿದೆ. ಇದೊಂದು ಯೂಥ್‌ ಫುಲ್‌ ಸಬ್ಜೆಕ್ಟ್‌ ಸಿನೆಮಾವಾಗಿದ್ದು, ಹೊಸಥರದ ಕಥೆಯನ್ನು ಬಯಸುವ ಪ್ರೇಕ್ಷಕರಿಗೆ ಈ ಸಿನೆಮಾ ಇಷ್ಟವಾಗಲಿದೆ ಎಂಬುದು ಚಿತ್ರತಂಡದ ಮಾತು.

ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವದು ‘ಬೆಟಾಲಿಯನ್’ ಉದ್ದೇಶ

‘ಆಕಾಶ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರ ‘ಬೆಟಾಲಿಯನ್’ ಅನ್ನು ಇಂದಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಅದ್ದೂರಿಯಾಗಿ ನಿರ್ಮಾಣ ಮಾಡಲಾಗುತ್ತಿದೆಯಂತೆ. ಕನ್ನಡದ ಪ್ರತಿಭಾವಂತ ಹೊಸ ತಂತ್ರಜ್ಞರು ಈ ಚಿತ್ರತಂಡ ಸೇರಿಕೊಂಡಿದ್ದು, ಈಗಾಗಲೇ ಚಿತ್ರಕ್ಕೆ ಒಂದಿಷ್ಟು ಕಲಾವಿದರ ಆಯ್ಕೆಯಾಗಿದ್ದು ಶೆಟ್ರು ‘ಬೆಟಾಲಿಯನ್’ ಇಂದ ಒಬ್ಬರು, ಡಾಲಿ ‘ಬೆಟಾಲಿಯನ್’ ಇಂದ ಒಬ್ಬರು ಚಿತ್ರತಂಡ ಸೇರಿಕೊಂಡಿದ್ದಾರೆ. ಇನ್ನುಳಿದ ಕಲಾವಿದರ ಆಯ್ಕೆಗಾಗಿ ಶೀಘ್ರದಲ್ಲಿ ಚಿತ್ರತಂಡ ಆಡಿಷನ್ ಕರೆ ನೀಡಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆಯಂತೆ.

ತಮ್ಮ ‘ಬೆಟಾಲಿಯನ್’ ಚಿತ್ರದ ಬಗ್ಗೆ ಮಾತನಾಡಿರುವ ಚಿತ್ರತಂಡ, ‘ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೊಸರೀತಿಯ ಸಿನೆಮಾವಾಗಲಿದೆ. ‘Alliance University School of Film making and performing arts’ ಸಹಕಾರದೊಂದಿಗೆ ಕರ್ನಾಟಕದ ವಿವಿಧ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆ ನಮ್ಮ ಚಿತ್ರ ತಂಡಕ್ಕಿದೆ. ‘ತಾಂತ್ರಿಕ ಗುಣಮಟ್ಟ ಹಾಗೂ ಮನರಂಜನೆಗೆ ಸಮಾನ ಆದ್ಯತೆ  ನೀಡಿ ಚಿತ್ರವನ್ನು  ನಿರ್ಮಿಸಲಾಗುತ್ತಿದ್ದು ಶೀಘ್ರದಲ್ಲೇ ಚಿತ್ರದ ಮಹೂರ್ತ ಮಾಡಲಾಗುವುದು’ ಎಂದು ಚಿತ್ರತಂಡ ತಿಳಿಸಿದೆ.

Related Posts

error: Content is protected !!