Video

ಟ್ರೇಲರಿನಲ್ಲಿ ಕಂಡರು… ‘ಅನಿರೀಕ್ಷಿತ ಅತಿಥಿಗಳು’

ಹೊರಬಂತು ‘ಅನಿರೀಕ್ಷಿತ ಅತಿಥಿಗಳು’ ಟ್ರೇಲರ್

ಹೊಸಬರ ಕ್ರೈಂ-ಥ್ರಿಲ್ಲರ್‌ ‘ಅನಿರೀಕ್ಷಿತ ಅತಿಥಿಗಳು’ ಟ್ರೇಲರಿಗೆ ಮೆಚ್ಚುಗೆ

ಹೊಸರೀತಿಯಲ್ಲಿ ಕಥೆ ಹೇಳಲು ಹೊರಟ ‘ಅನಿರೀಕ್ಷಿತ ಅತಿಥಿಗಳು’ 

ಇದೇ ಸಪ್ಟೆಂಬರ್ 18ರಂದು ತೆರೆಕಾಣಲಿರುವ ‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಪ್ರಮೋದ್ ಶೆಟ್ಟಿ ‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಅನಿರೀಕ್ಷಿತ ಅತಿಥಿಗಳು’ ಚಿತ್ರಕ್ಕೆ ಮನೋಜ್ ಅಣ್ಣಯ್ಯ ನಿರ್ದೇಶನ ಮಾಡಿದ್ದಾರೆ. ಸದ್ಯ ‘ಅನಿರೀಕ್ಷಿತ ಅತಿಥಿಗಳು’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ‘ಅನಿರೀಕ್ಷಿತ ಅತಿಥಿಗಳು’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಕೊಟ್ಟಿದೆ. ಬಿ. ವಿನೋದ್ ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ವಿವೇಕ್‌ ಸಿಂಹ, ಮೈತ್ರಿ ಜಗ್ಗಿ, ಸಂಪ್ರತಿ ಆಳ್ವಾ, ಹರಿತ ಶಾ ಕಾರಣ, ದೈವಿಕ್ ಶ್ರೀದತ್ತ, ದಯ ಪಲ್ಲವಗೆರೆ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್‌ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಇದೇ 2026ರ ಸೆಪ್ಟೆಂಬರ್‌ 18ಕ್ಕೆ ಚಿತ್ರ ತೆರೆಗೆ 

‘ಅನಿರೀಕ್ಷಿತ ಅತಿಥಿಗಳು’ ಚಿತ್ರಕ್ಕೆ ಎರಿಕ್‌ ಛಾಯಾಗ್ರಹಣ, ಸ್ವಾಮಿನಾಥನ್ ಸಂಗೀತವಿದೆ. ಸದ್ಯ ಟ್ರೇಲರ್‌ ಮೂಲಕ ಒಂದಷ್ಟು ಮಂದಿಯ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಅನಿರೀಕ್ಷಿತ ಅತಿಥಿಗಳು’ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಜನಮನ ಗೆಲ್ಲಲಿದ್ದಾರೆ ಎಂಬುದು ಇದೇ 2026ರ ಸೆಪ್ಟೆಂಬರ್‌ ಅಂತ್ಯಕ್ಕೆ ಗೊತ್ತಾಗಲಿದೆ.

Related Posts

error: Content is protected !!