ಶ್ರೀಮುರಳಿ ಆ್ಯಕ್ಷನ್ ಪ್ಯಾಕ್ಡ್ ‘ಪರಾಕ್’ ಟೀಸರ್ ಔಟ್
ಹೊರಬಂತು ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್
‘ಪರಾಕ್’ ಟೀಸರಿನಲ್ಲಿ ರಗಡ್ ಅವತಾರದಲ್ಲಿ ಎಂಟ್ರಿಯಾದ ರೋರಿಂಗ್ ಸ್ಟಾರ್
ಔಟ್ ಅಂಡ್ ಔಟ್ ಆ್ಯಕ್ಷನ್ ಅವತಾರ ತಾಳಿದ ಶ್ರೀಮುರಳಿ
ಸ್ಯಾಂಡಲ್‌ವುಡ್‌ನ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಅಬಿನಯದ ಮುಂಬರುವ ಚಿತ್ರ ‘ಪರಾಕ್’ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ‘ಪರಾಕ್’ ಚಿತ್ರದ ಆರಂಭದ ಒಂದಷ್ಟು ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಶ್ರೀಮುರಳಿ ಅವರ ಅಭಿಮಾನಿಗಳಿಗೆ ‘ಪರಾಕ್’ನ ಝಲಕ್ ಹೇಗಿರಲಿದೆ ಎಂಬುದನ್ನು ಪರಿಚಯಿಸಿದೆ. 
ಹೌದು, ನಟ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಅಬಿನಯದ ‘ಪರಾಕ್’ ಚಿತ್ರದ ಮೊದಲ ಟೀಸರ್ ಇದೀಗ ಬಿಡುಗಡೆಯಾಗಿದೆ. ‘ಪರಾಕ್’ ಸೆಟ್ಟೇರಿದಾಗಿನಿಂದಲೂ ಚಿತ್ರದ ಬಗ್ಗೆ ಹೆಚ್ಚೇನೂ ಮಾಹಿತಿ ನೀಡದೆ ಕುತೂಹಲವನ್ನು ಕಾಯ್ದಿರಿಸಿಕೊಂಡು ಬಂದಿದ್ದ ಚಿತ್ರತಂಡ, ಇದೀಗ ‘ಪರಾಕ್’ ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡುವ ಮೂಲಕ ಶ್ರೀಮುರಳಿ ಅಭಿಮಾನಿಗಳಿಗೆ ಸ್ಪೆಷಲ್ ಸರ್ಪ್ರೈಸ್ ನೀಡಿದೆ. 2026ರ ಜು. 13ರಂದು ಬೆಳಿಗ್ಗೆ 10.10ಕ್ಕೆ ‘ಪರಾಕ್’ ಸಿನೆಮಾದ ಮೊದಲ ಟೀಸರ್ ‘ಆನಂದ ಆಡಿಯೋ’ ಯು-ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
ಹೇಗಿದೆ ‘ಪರಾಕ್’ ಟೀಸರ್..?
ಆರಂಭದಲ್ಲಿಯೇ ‘ಪರಾಕ್’ ಚಿತ್ರತಂಡ ಹೇಳಿಕೊಂಡು ಬಂದಿರುವಂತೆ, ‘ಪರಾಕ್’ ಒಂದು ಔಟ್ ಅಂಡ್ ಔಟ್ ಆ್ಯಕ್ಷನ್ ಪ್ಯಾಕ್ಡ್ ಸಿನೆಮಾ. ಇದೀಗ ಬಿಡುಗಡೆಯಾಗಿರುವ ‘ಪರಾಕ್’ ಸಿನೆಮಾದ ಟೀಸರಿನಲ್ಲಿ ಕೂಡ ಶ್ರೀಮುರಳಿ ಅವರ ಆ್ಯಕ್ಷನ್ ಪ್ಯಾಕ್ಡ್ ದೃಶ್ಯಗಳೇ ಹೈಲೈಟ್ ಆಗಿದೆ. ‘ಪರಾಕ್’ ಟೀಸರ್ ನಲ್ಲಿ ಸಿಕ್ಸ್ ಪ್ಯಾಕ್ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಶ್ರೀಮುರಳಿ, ಆ್ಯಕ್ಷನ್ ಸೀನ್ಸ್ ನಲ್ಲಿ ಭರ್ಜರಿಯಾಗಿ ಅಬ್ಬರಿಸಿದ್ದಾರೆ. ಯುವ ನಿರ್ದೇಶಕ ನಿರ್ದೇಶಕ ಹಾಲೇಶ್ ಕೋಗುಂಡಿ ‘ಪರಾಕ್’ ಸಿನೆಮಾಕ್ಕೆ ನಿರ್ದೇಶನ ಮಾಡಿದ್ದು, ‘ಪರಾಕ್’ ಸಿನೆಮಾದ ಆ್ಯಕ್ಷನ್ ಟೀಸರ್ ಮಾಸ್ ಆಡಿಯನ್ಸ್ ಗಮನ ಸೆಳೆಯುವಂತಿದೆ. ಕೊಂದ ರೆಟ್ರೋ ಸ್ಟೈಲಿನಲ್ಲಿ ‘ಪರಾಕ್’ ಟೀಸರ್ ಅನ್ನು ತೆರೆಮೇಲೆ ತರಲಾಗಿದೆ.
‘ಪರಾಕ್’ ಸಿನೆಮಾದ ಟೀಸರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಇದೇ ವರ್ಷಾಂತ್ಯಕ್ಕೆ ‘ಪರಾಕ್’ ದರ್ಶನ ಸಾಧ್ಯತೆ..?
‘ಪರಾಕ್’ ಚಿತ್ರತಂಡದ ಮೂಲಗಳ ಪ್ರಕಾರ, ಈಗಾಗಲೇ ‘ಪರಾಕ್’ ಚಿತ್ರದ ಶೇ. 35%ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಚಿತ್ರತಂಡ ತಯಾರಿ ನಡೆಸುತ್ತಿದೆ. ‘ಪರಾಕ್’ ಚಿತ್ರದ ಹಾಡುಗಳಿಗೆ ಚರಣ್ ರಾಜ್ ಎಂ. ಆರ್. ಸಂಗೀತ ಸಂಯೋಜಿಸುತ್ತಿದ್ದು, ಸಂದೀಪ್ ವಲ್ಲೂರಿ ಛಾಯಾಗ್ರಹಣ, ರಕ್ಷಿತ್ ಕಾಪ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ ಬ್ರ್ಯಾಂಡ್ ಸ್ಟುಡಿಯೋಸ್’ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದೆ. ‘ಪರಾಕ್’ ಚಿತ್ರಕ್ಕೆ ಡಾ. ಕೆ. ರವಿವರ್ಮ ಸಾಹಸ ನಿರ್ದೇಶನವಿದೆ. ಮಂಜುನಾಥ್ ಟಿ, ಮೋಹನ್ ಕೆ. ಓ, ಹಾಲೇಶ್ ಕೋಗುಂಡಿ ‘ಪರಾಕ್’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಇನ್ನು ಚಿತ್ರರಂಗದ ಮೂಲಗಳ ಪ್ರಕಾರ, ಎಲ್ಲ ಅಂದುಕೊಂಡಂತೆ ನಡೆದರೆ ಇದೇ ವರ್ಷದ ಕೊನೆಯಲ್ಲಿ ‘ಪರಾಕ್’ ಚಿತ್ರ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಬಿಡುಗಡೆಯಾಗಿರುವ ‘ಪರಾಕ್’ ಚಿತ್ರದ ಟೀಸರಿಗೆ ಯು-ಟ್ಯೂಬ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಉಳಿದಂತೆ ‘ಪರಾಕ್’ ಚಿತ್ರದ ಬಗ್ಗೆ ಇರುವ ಹೆಚ್ಚಿನ ಕುತೂಹಲಕ್ಕೆ ಚಿತ್ರ ತೆರೆಗೆ ಬಂದ ಮೇಲಷ್ಟೇ ಉತ್ತರ ಸಿಗಲಿದೆ.















