Video

‘ಮಾರ್ನಮಿ’ಯ ಮತ್ತೊಂದು ಟೀಸರ್‌ ರಿಲೀಸ್‌

‘ಮಾರ್ನಮಿ’ ಎಂಬ ಕರಾವಳಿ ಸೊಗಡಿನ ಚಿತ್ರ

‘ಮಾರ್ನಮಿ’ ಚಿತ್ರದ ಮೂರನೇ ಟೀಸರ್‌ ಬಿಡುಗಡೆ

ನಾಯಕ ನಟನ ಹುಟ್ಟುಹಬ್ಬಕ್ಕೆ ಚಿತ್ರತಂಡ ಸ್ಪೆಷಲ್‌ ಗಿಫ್ಟ್‌

ಈಗಾಗಲೇ ಕಿರುತೆರೆಯ ‘ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಮೊದಲಾದ ಧಾರಾವಾಹಿಗಳ ಮೂಲಕ ಸಾಕಷ್ಟು ಜನಪ್ರಿಯ ಆಗಿರುವ ನಟ ರಿತ್ವಿಕ್ ಮಠದ್ ಈಗ ರಗಡ್‌ ಅವತಾರವೆತ್ತಿ ಹಿರಿತೆರೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ‘ಗಿಫ್ಟ್ ಬಾಕ್ಸ್’ ಚಿತ್ರದ ನಂತರ ತುಂಬಾ ಸಮಯ ತೆಗೆದುಕೊಂಡು ಕಿರುತೆರೆಯಿಂದ ಈಗ ರಿತ್ವಿಕ್‌ ಬೆಳ್ಳಿತೆರೆಗೆ ಒಂದೊಳ್ಳೆ ಕಥೆ ಹಾಗೂ ತಂಡ ಕಟ್ಟಿಕೊಂಡು ಎಂಟ್ರಿ ಕೊಟ್ಟಿದ್ದಾರೆ, ಅವರು ನಟಿಸುತ್ತಿರುವ ಹೊಸಚಿತ್ರ ‘ಮಾರ್ನಮಿ’ಯ ಮತ್ತೊಂದು ಟೀಸರ್‌ ಇತ್ತೀಚೆಗೆ ರಿಲೀಸ್‌ ಆಗಿದೆ. ರಿತ್ವಿಕ್ ಮಠದ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ಅವರ ಇಂಟ್ರೂಡಕ್ಷನ್‌ ಟೀಸರ್‌ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ‘ಗುಣಾದ್ಯಾ ಪ್ರೊಡಕ್ಷನ್ಸ್’ ಯೂ-ಟ್ಯೂಬ್‌ ಚಾನೆಲ್ ನಲ್ಲಿ ರಿಲೀಸ್‌ ಆಗಿರುವ ಈ ಟೀಸರ್‌ ನಲ್ಲಿ ಚಿತ್ರತಂಡ ಒಂದಷ್ಟು ಕುತೂಹಲಭರಿತ ವಿಷಯಗಳನ್ನು ಹೇಳಲು ಹೊರಟಂತಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ‘ಮಾರ್ನಮಿ’ ಚಿತ್ರದ ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ರಿಷಿ, ನಿರ್ದೇಶಕ ಸಿಂಪಲ್‌ ಸುನಿ, ಬಿಗ್‌ ಬಾಸ್‌ ಖ್ಯಾತಿಯ ಕಾರ್ತಿಕ್‌ ಮಹೇಶ್‌, ದಿವ್ಯ ಉರುಡುಗ ಮತ್ತು ಕೆ. ಪಿ ಅರವಿಂದ್ ಮೊದಲಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದರು.

‘ಮಾರ್ನಮಿ’ ಚಿತ್ರದ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಈಗಾಗಲೇ ಕನ್ನಡದ ಕೆಲ ಸಿನೆಮಾಗಳಲ್ಲಿ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ರಿಶಿತ್ ಶೆಟ್ಟಿ ‘ಮಾರ್ನಮಿ’ ಚಿತ್ರಕ್ಕೆ ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ. ‘ಮಾರ್ನಮಿ’ ಚಿತ್ರದಲ್ಲಿ ರಿತ್ವಿಕ್ ಅವರಿಗೆ ಚೈತ್ರಾ ಜೆ. ಆಚಾರ್ ನಾಯಕಿಯಾಗಿದ್ದಾರೆ. ಉಳಿದಂತೆ ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ಸೇರಿದಂತೆ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ‘ಮಾರ್ನಮಿ’ ಚಿತ್ರಕ್ಕೆ ಶಿವಸೇನ ಛಾಯಾಗ್ರಹಣವಿದ್ದು, ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಗುಣಾಧ್ಯ’ ಬ್ಯಾನರ್ ಅಡಿಯಲ್ಲಿ ಶಿಲ್ಪಾ ನಿಶಾಂತ್, ‘ಮಾರ್ನಮಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!