Video

ಇಲ್ಲಿ ನೋಡಿ, ಇವನೇ ಆ ‘ಹಲ್ಕಾ ಡಾನ್‌’..!

ಟೈಟಲ್‌ ಟೀಸರ್‌ನಲ್ಲಿ ‘ಹಲ್ಕಾ ಡಾನ್‌’ ಎಂಟ್ರಿ

ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಪ್ರಮೋದ್‌ ರೆಡಿ

ಮಾಸ್‌ ಕಂಟೆಂಟ್‌, ಫುಲ್‌ ಎಂಟರ್‌ಟೈನ್ಮೆಂಟ್‌…

‘ಪ್ರೀಮಿಯರ್‌ ಪದ್ಮಿನಿ’ ಖ್ಯಾತಿಯ ನಟ ಪ್ರಮೋದ್‌ ಈ ಬಾರಿ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಾಗಿದ್ದಾರೆ. ಇಲ್ಲಿಯವರೆಗೆ ಹೆಚ್ಚಾಗಿ ಲವರ್‌ ಬಾಯ್‌ ಆಗಿ, ಸಾಫ್ಟ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ಪ್ರಮೋದ್‌, ಈಗ ‘ಹಲ್ಕಾ ಡಾನ್‌’ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ! ಹೌದು, ನಟ ಪ್ರಮೋದ್‌ ಅಭಿನಯಿಸುತ್ತಿರುವ ಮುಂಬರುವ ಸಿನೆಮಾಕ್ಕೆ ‘ಹಲ್ಕಾ ಡಾನ್‌’ ಎಂದು ಹೆಸರಿಡಲಾಗಿದ್ದು, ಇದೇ ಮೊದಲ ಬಾರಿಗೆ ಹೊಸಥರದ ಪಾತ್ರವೊಂದರಲ್ಲಿ ಪ್ರಮೋದ್‌ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಹೆಸರೇ ಹೇಳುವಂತೆ ‘ಹಲ್ಕಾ ಡಾನ್‌’  ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಸಬ್ಜೆಕ್ಟ್‌ ಸಿನೆಮಾ. ಈ ಚಿತ್ರದ ಹೆಸರಿಗೆ ತಕ್ಕಂತೇ, ರಗಡ್‌ ಪಾತ್ರದಲ್ಲಿ ವಿಭಿನ್ನ ಶೈಲಿಯಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಪ್ರಮೋದ್‌ ತಯಾರಿ ನಡೆಸಿದ್ದಾರೆ.

‘ಹಲ್ಕಾ ಡಾನ್‌’ ಟೈಟಲ್‌ ಅನೌನ್ಸ್‌…

ಇದೇ ‘ದೀಪಾವಳಿ ಹಬ್ಬ’ದ ಸಂದರ್ಭದಲ್ಲಿಯೇ ‘ಹಲ್ಕಾ ಡಾನ್‌’ ಸಿನೆಮಾದ ಟೈಟಲ್‌ ಅನೌನ್ಸ್‌ ಆಗಿತ್ತು. ಇದೀಗ ‘ಹಲ್ಕಾ ಡಾನ್‌’ ಸಿನೆಮಾದ ಟೈಟಲ್‌ ಟೀಸರ್‌ ಕೂಡ ಬಿಡುಗಡೆಯಾಗಿದೆ. ಒಂದಷ್ಟು ಮಾಸ್‌ ಕಂಟೆಂಟ್‌ ಜೊತೆಗೆ ಎಂಟರ್‌ಟೈನ್ಮೆಂಟ್‌ ಅಂಶಗಳನ್ನು ಇಟ್ಟುಕೊಂಡು ‘ಹಲ್ಕಾ ಡಾನ್‌’ ಸಿನೆಮಾವನ್ನು ತೆರೆಗೆ ತರುತ್ತಿರುವ ಸುಳಿವನ್ನು ಚಿತ್ರತಂಡ ಟೈಟಲ್‌ ಟೀಸರ್‌ ವಿಡಿಯೋದಲ್ಲಿ ಬಿಟ್ಟುಕೊಟ್ಟಿದೆ.

ಇನ್ನು ‘ಹಲ್ಕಾ ಡಾನ್‌’ ಸಿನೆಮಾದಲ್ಲಿ ನಾಯಕ ನಟ ಪ್ರಮೋದ್‌ ಭೂಗತ ಲೋಕದ ಡಾನ್‌ ಪಾತ್ರದಲ್ಲಿ ನಟ ಡೈಲಾಗ್‌ ಕಿಂಗ್‌ ಸಾಯಿಕುಮಾರ್‌ ಅವರ ಅಭಿಮಾನಿಯ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಕರಾವಳಿ ಭಾಗವನ್ನು ಹಿನ್ನೆಲೆಯಾಗಿಟ್ಟುಕೊಂಡು ತೆರೆಗೆ ಬರುತ್ತಿರುವ ‘ಹಲ್ಕಾ ಡಾನ್‌’ ಸಿನೆಮಾ ಆಕ್ಷನ್‌-ಕಾಮಿಡಿ ಶೈಲಿಯಲ್ಲಿ ತೆರೆಗೆ ಬರುತ್ತಿದೆ. ಸದ್ಯ ‘ಹಲ್ಕಾ ಡಾನ್‌’ ಸಿನೆಮಾದ ಟೈಟಲ್‌ ಟೀಸರ್‌ ವಿಡಿಯೋ ‘ಡಿ ಬೀಟ್ಸ್‌’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಈ ಟೈಟಲ್‌ ಟೀಸರ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

‘ಹಲ್ಕಾ ಡಾನ್‌’ ಸಿನೆಮಾದ ಟೈಟಲ್‌ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಇನ್ನು ಪ್ರಮೋದ್‌ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ‘ಹಲ್ಕಾ ಡಾನ್‌’ ಸಿನೆಮಾವನ್ನು ‘ವೀನಸ್‌ ಎಂಟರ್‌ಟೈನರ್ಸ್‌’ ಬ್ಯಾನರ್‌ನಲ್ಲಿ ಕೆ. ಪಿ. ಶ್ರೀಕಾಂತ್‌ ನಿರ್ಮಾಣ ಮಾಡುತ್ತಿದ್ದಾರೆ. ಚಲ ಈ ಸಿನೆಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಹಲ್ಕಾ ಡಾನ್‌’ ಸಿನೆಮಾದ ಹಾಡುಗಳಿಗೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ಅರ್ಜುನ್‌ ಕಿಟ್ಟು ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಮೋದ್‌ ಅವರಿಗೆ ಅಮೃತಾ ಅಯ್ಯಂಗಾರ್‌ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ  ಅಂತ್ಯಕ್ಕೆ ‘ಹಲ್ಕಾ ಡಾನ್‌’ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Related Posts

error: Content is protected !!