Street Beat

‘ಮಾರ್ನಮಿ’ ಮೆರವಣಿಗೆ ದಿನ ನಿಗದಿ

ಇದೇ ನವೆಂಬರ್ 21ಕ್ಕೆ ಬೆಳ್ಳಿತೆರೆಯಲ್ಲಿ ‘ಮಾರ್ನಮಿ’ ಮೆರವಣಿಗೆ

ರಿತ್ವಿಕ್ ಮಠದ್ – ಚೈತ್ರಾ ಆಚಾರ್ ಜೋಡಿಯ ಹೊಸಚಿತ್ರ ಬಿಡುಗಡೆಗೆ ರೆಡಿ…

ಥಿಯೇಟರಿನಲ್ಲಿ ಮತ್ತೊಂದು ಕರಾವಳಿ ಭಾಗದ ಪ್ರೇಮಕಥೆ

ಈ ವರ್ಷ ಈಗಾಗಲೇ ಒಂದಷ್ಟು ಕರಾವಳಿ ಹಿನ್ನೆಲೆಯ ಸಿನೆಮಾಗಳು ಬಿಡುಗಡೆಯಾಗಿ ತೆರೆಗೆ ಬಂದಿವೆ. ಈಗ ಈ ಸಿನೆಮಾಗಳ ಸಾಲಿಗೆ ಮತ್ತೊಂದು ಸಿನೆಮಾ ಸೇರ್ಪಡೆಯಾಗುತ್ತಿದೆ. ಆ ಸಿನೆಮಾದ ಹೆಸರೇ ‘ಮಾರ್ನಮಿ’. ಈಗಾಗಲೇ ತನ್ನ ಬಹುತೇಕ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಮಾರ್ನಮಿ’ ಸಿನೆಮಾವನ್ನು ಇದೇ ನವೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

ಹೌದು, ಕರಾವಳಿ ಭಾಗದ ಪ್ರೇಮ ಕಹಾನಿ ಹೊಂದಿರುವ ‘ಮಾರ್ನಮಿ’ ಸಿನೆಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ 2025 ನವೆಂಬರ್ 21ಕ್ಕೆ ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಎಂಟ್ರಿ‌ ಕೊಡಲಿದೆ. ಕನ್ನಡ ಕಿರುತೆರೆಯಲ್ಲಿ ‘ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಮುಂತಾದ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿರುವ ನಟ ರಿತ್ವಿಕ್ ಮಠದ್ ‘ಮಾರ್ನಮಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಚೈತ್ರಾ ಜೆ. ಆಚಾರ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.

ಪ್ರೇಮಕಥೆ ಜೊತೆಗೆ ಹುಲಿವೇಷದ ಕಥೆ

‘ಮಾರ್ನಮಿ’ ಕರಾವಳಿ ಭಾಗದ ಹುಲಿವೇಷ ಹಿನ್ನೆಲೆಯ ಕಥೆ. 1990ರ ದಶಕ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಸ್ಟೋರಿ. ಈ ಚಿತ್ರದ ಮೂಲಕ ನಿರ್ದೇಶಕ ರಿಷಿತ್ ಶೆಟ್ಟಿ ಹುಲಿ ವೇಷ ಸಂಸ್ಕೃತಿಯನ್ನು ಈ ಸಿನೆಮಾದ ಮೂಲಕ ಇಡೀ ಪ್ರಪಂಚಕ್ಕೆ ತೋರಿಸಲು ಹೊರಟಿದ್ದಾರೆ. ಸದ್ಯ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್‌ ಅಂತಿಮ ಕೆಲಸಗಳಲ್ಲಿ ‘ಮಾರ್ನಮಿ’ ಚಿತ್ರತಂಡ ಬ್ಯುಸಿಯಾಗಿದೆ.

‘ಮಾರ್ನಮಿ’ ಸಿನೆಮಾಗೆ ರಿಷಿತ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನೆಮಾ. ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಅವರದ್ದೇ. ಚಿತ್ರದ ಕಥೆ ಸುಧಿ ಆರ್ಯನ್ ಅವರು ಬರೆದಿದ್ದಾರೆ. ಈ ಸಿನೆಮಾದಲ್ಲಿ ರಿತ್ವಿಕ್ ಮತ್ತು ಚೈತ್ರಾ ಜೊತೆಗೆ ಸುಮನ್ ತಲ್ವಾರ್, ಸೋನು ಗೌಡ, ಪ್ರಕಾಶ್ ತುಮಿನಾಡು, ಜ್ಯೋತೀಶ್ ಶೆಟ್ಟಿ, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್, ಚೈತ್ರಾ ಶೆಟ್ಟಿ ಮುಂತಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನವೆಂಬರ್‌ ಅಂತ್ಯಕ್ಕೆ ‘ಮಾರ್ನಮಿ’ ಭವಿಷ್ಯ…

‘ಮಾರ್ನಮಿ’ ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕ್ಯಾಮೆರಾ ಕೈ ಚಳಕ, ಪ್ರತೀಕ್ ಶೆಟ್ಟಿ ಸಂಕಲನ, ವರದರಾಜ್ ಕಾಮತ್ ಕಲಾ ನಿರ್ದೇಶನ ಮಾಡಿದ್ದಾರೆ. ವರ್ಷಾ ಆಚಾರ್ಯ ವಸ್ತ್ರ ವಿನ್ಯಾಸ ಮಾಡಿದ್ದಾರೆ. ‘ಗುಣಾಧ್ಯ ಪ್ರೊಡಕ್ಷನ್ಸ್’ ಮೂಲಕ ಶಿಲ್ಪಾ ನಿಶಾಂತ್ ಹಾಗೂ ನಿಶಾಂತ್ ಅವರು ‘ಮಾರ್ನಮಿ’ ಸಿನೆಮಾವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ತನ್ನ ಟೈಟಲ್‌ ಮತ್ತು ಕಂಟೆಂಟ್‌ ಮೂಲಕ ಒಂದಷ್ಟು ಸುದ್ದಿ ಮಾಡುತ್ತಿರುವ ‘ಮಾರ್ನಮಿ’ ಹೇಗಿರಲಿದೆ ಎಂಬುದು ಇದೇ ನವೆಂಬರ್‌ ತಿಂಗಳ ಅಂತ್ಯಕ್ಕೆ ಗೊತ್ತಾಗಲಿದೆ.

Related Posts

error: Content is protected !!