‘ಅಮೆಜಾನ್ ಪ್ರೈಮ್’ನಲ್ಲಿ ‘ಗತವೈಭವ’ ಪ್ರದರ್ಶನ
ಓಟಿಟಿಗೆ ಬಂತು ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’
ದುಶ್ಯಂತ್-ಆಶಿಕಾ ರಂಗನಾಥ್ ಜೋಡಿಯ ‘ಗತವೈಭವ’ ಚಿತ್ರ ‘ಅಮೆಜಾನ್ ಪ್ರೈಮ್’ನಲ್ಲಿ ಲಭ್ಯ
‘ಅಮೆಜಾನ್ ಪ್ರೈಮ್’ ಓಟಿಟಿಯಲ್ಲಿ ‘ಗತವೈಭವ’ ಸ್ಟ್ರೀಮಿಂಗ್
ಕಳೆದ 2025ರ ನವೆಂಬರ್ 14ರಂದು ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಗತವೈಭವ’ ಚಿತ್ರ ತೆರೆಗೆ ಬಂದಿದ್ದು, ನಿಮಗೆ ನೆನಪಿರಬಹುದು. ಥಿಯೇಟರಿನಲ್ಲಿ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ‘ಗತವೈಭವ’ ಚಿತ್ರ ಈಗ ಥಿಯೇಟರಿನಿಂದ ಓಟಿಟಿಗೂ ಬರುತ್ತಿದೆ.
ಹೌದು, ‘ಗತವೈಭವ’ ಚಿತ್ರದ ಓಟಿಟಿ ಹಕ್ಕುಗಳನ್ನು ‘ಅಮೇಜಾನ್ ಪ್ರೈಮ್’ ಖರೀದಿಸಿದ್ದು, ಇದೇ 2026ರ ಜನವರಿ ಕೊನೆಯಿಂದ ‘ಗತವೈಭವ’ ಚಿತ್ರ ‘ಅಮೇಜಾನ್ ಪ್ರೈಮ್’ ಓಟಿಟಿಯಲ್ಲಿ ಪ್ರಸಾರವಾಗಲಿದೆ.
‘ಗತವೈಭವ’ ಚಿತ್ರದಲ್ಲಿ ನವನಟ ದುಶ್ಯಂತ್ ನಾಯಕನಾಗಿ ಹಾಗೂ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ನಾಲ್ಕು ವಿಭಿನ್ನ ಕಥೆಗಳನ್ನು ನಿರ್ದೇಶಕ ಸಿಂಪಲ್ ಸುನಿ, ತೆರೆಮೇಲೆ ಕಟ್ಟಿಕೊಟ್ಟಿದ್ದರು. ಚೊಚ್ಚಲ ಚಿತ್ರದಲ್ಲಿಯೇ ಯುವ ನಾಯಕ ನಟ ದುಶ್ಯಂತ್ ಸಿನಿಪ್ರಿಯರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.
‘ಗತವೈಭವ’ ಚಿತ್ರಕ್ಕೆ ಸಿಂಪಲ್ ಸುನಿ ಕಥೆ, ಚಿತ್ರಕಥೆ ಜೊತೆಗೆ ಸಂಭಾಷಣೆ ಕೂಡ ಬರೆದಿದ್ದಾರೆ. ‘ಸುನಿ ಸಿನಿಮಾಸ್’ ಸಂಸ್ಥೆಯಲ್ಲಿ ದೀಪಿಕ್ ಹಾಗೂ ಸುನಿ ಇಬ್ಬರೂ ಸೇರಿ ‘ಗತವೈಭವ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಗತವೈಭವ’ ಚಿತ್ರಕ್ಕೆ ವಿಲಿಯಂ ಡೇವಿಡ್ ಕ್ಯಾಮೆರಾ ಛಾಯಾಗ್ರಹಣ ಕಾರ್ಯವಿದ್ದು, ಚಿತ್ರದ ಹಾಡುಗಳಿಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಥಿಯೇಟರಿನಲ್ಲಿ ‘ಗತವೈಭವ’ ಸಿನಿಮಾವನ್ನು ನೋಡದೆ ಮಿಸ್ ಮಾಡಿಕೊಂಡಿದ್ದವರು ‘ಅಮೇಜಾನ್ ಪ್ರೈಮ್’ ಓಟಿಟಿಯಲ್ಲಿ ‘ಗತವೈಭವ’ ಚಿತ್ರವನನ್ನು ನೋಡಿ ಕಣ್ತುಂಬಿಕೊಳ್ಳಬಹುದು.















