‘ಕಿಚ್ಚ’ನ ಬರ್ತ್‌ಡೇಗೆ ‘ಬಿಲ್ಲ ರಂಗ ಬಾಷಾ’ ಸ್ಪೆಷಲ್ ಪೋಸ್ಟರ್
ಸುದೀಪ್ ಹುಟ್ಟುಹಬ್ಬಕ್ಕೆ ‘ಬಿಲ್ಲ ರಂಗ ಬಾಷಾ’ (BRB) ಚಿತ್ರದ ಗಿಫ್ಟ್
ಮತ್ತೆ ‘ಬಿಲ್ಲ ರಂಗ ಬಾಷಾ’ (BRB)ದಲ್ಲಿ ಒಂದಾದ ‘ವಿಕ್ರಾಂತ್ ರೋಣ’ ಜೋಡಿ
‘ಬಿಲ್ಲ ರಂಗ ಬಾಷಾ’ ಸ್ಪೆಷಲ್ ಪೋಸ್ಟರ್‌ನಲ್ಲಿ ಸುದೀಪ್ ಆಕ್ಷನ್ ಲುಕ್
ನಟ ಕಿಚ್ಚ ಸುದೀಪ್ ಅವರ ಜನ್ಮದಿನದ ಪ್ರಯುಕ್ತ ಸುದೀಪ್ ಅಭಿನಯದ ಮುಂಬರಲಿರುವ ಹಲವು ಸಿನೆಮಾಗಳ ಬಗ್ಗೆ ಒಂದಷ್ಟು ಮಾಹಿತಿಗಳೂ ಹೊರಬೀಳುತ್ತಿವೆ. ಅದರಲ್ಲಿ ಒಂದು ‘ಬಿಲ್ಲ ರಂಗ ಬಾಷಾ’ ಚಿತ್ರ. ಅಂದಹಾಗೆ, ಕಿಚ್ಚ ಸುದೀಪ್ ಅವರ ಜನ್ಮದಿನದ ಪ್ರಯುಕ್ತ ‘ಬಿಲ್ಲ ರಂಗ ಬಾಷಾ’ (BRB) ಚಿತ್ರದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಿದೆ. ‘ಬಿಲ್ಲ ರಂಗ ಬಾಷಾ’ ಚಿತ್ರದ ಸ್ಪೆಷಲ್ ಪೋಸ್ಟರ್‌ನಲ್ಲಿ ಸುದೀಪ್ ಆಕ್ಷನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನೆಮಾಕ್ಕೆ ನಿರ್ದೇಶನ ಮಾಡಿದ್ದ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಮ್ಮೆ ‘ಬಿಲ್ಲ ರಂಗ ಬಾಷಾ’ ಚಿತ್ರಕ್ಕಾಗಿ ಸುದೀಪ್ ಜೊತೆ ಕೈಜೋಡಿಸಿದ್ದಾರೆ. 
ಹೀಗಿದೆ ‘ಬಿಲ್ಲ ರಂಗ ಬಾಷಾ’ ಸ್ಪೆಷಲ್ ಪೋಸ್ಟರ್…
ಸದ್ಯ ಬಿಡುಗಡೆಯಾಗಿರುವ ‘ಬಿಲ್ಲ ರಂಗ ಬಾಷಾ’ ಚಿತ್ರದ ಸ್ಪೆಷಲ್ ಪೋಸ್ಟರ್‌ನಲ್ಲಿ ಸುದೀಪ್ ಆಕ್ಷನ್ ಲುಕ್ ಗಮನ ಸೆಳೆಯುತ್ತಿದೆ. ಚಿತ್ರವು ವಿಶ್ವದರ್ಜೆಯ ಮೇಕಿಂಗ್ ಒಳಗೊಂಡಿದೆ ಎಂಬುದನ್ನು ಚಿತ್ರತಂಡ ಪೋಸ್ಟರ್‌ನಲ್ಲಿ ತೋರಿಸುವ ಪ್ರಯತ್ನ ಮಾಡಿದೆ. ‘ಬಿಲ್ಲ ರಂಗ ಬಾಷಾ’ (BRB) ಚಿತ್ರಕ್ಕಾಗಿ ಬೆಂಗಳೂರಿನಲ್ಲಿ ಬೃಹತ್ ಹಾಗೂ ಅದ್ಧೂರಿ ಸೆಟ್ ನಿರ್ಮಿಸಲಾಗಿದ್ದು, ಸದ್ಯ ಚಿತ್ರದ ಕೊನೆ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ತೆಲುಗಿನ ಪ್ಯಾನ್-ಇಂಡಿಯಾ ಹಿಟ್ ಸಿನೆಮಾ ‘ಹನುಮಾನ್’ ಖ್ಯಾತಿಯ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ‘ಬಿಲ್ಲ ರಂಗ ಬಾಷಾ’ (BRB) ಚಿತ್ರವನ್ನು ಬಿಗ್ ಬಜೆಟ್ ನಲ್ಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. 2027ರ ಮಾರ್ಚ್ ಒಳಗೆ ‘ಬಿಲ್ಲ ರಂಗ ಬಾಷಾ’ (BRB) ಚಿತ್ರದ ಟೀಸರ್ ಬಿಡುಗಡೆ ಆಗಲಿದ್ದು, 2027ರ ಜುಲೈ-ಸೆಪ್ಟೆಂಬರ್ ನಡುವೆ ಟ್ರೇಲರ್ ಮತ್ತು ಹಾಡುಗಳು ಅನಾವರಣಗೊಳ್ಳಲಿವೆ. 2027ರ ವರ್ಷಾಂತ್ಯದಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ‘ಬಿಲ್ಲ ರಂಗ ಬಾಷಾ’ (BRB) ಸಿನೆಮಾ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.













