Telewalk

ಓಟಿಟಿಗೆ ಎಂಟ್ರಿಯಾಗ್ತಿದ್ದಾನೆ ‘ದಿ ಡೆವಿಲ್’

ಓಟಿಟಿಯಲ್ಲಿ ‘ದಿ ಡೆವಿಲ್’ ಸಿನೆಮಾ ಸ್ಟ್ರೀಮಿಂಗ್‌

‘ಸೆಲೆಬ್ರಿಟಿಸ್‌’ಗೆ ಗುಡ್ ನ್ಯೂಸ್, ಥಿಯೇಟರಿನಿಂದ ಓಟಿಟಿಗೆ ‘ಡಿ ಬಾಸ್’ ಪಿಕ್ಚರ್

‘Zee 5’ ಕನ್ನಡ ಓಟಿಟಿಯಲ್ಲಿ ‘ದಿ ಡೆವಿಲ್‌’ ದರ್ಶನ

‌ಕನ್ನಡ ಚಿತ್ರರಂಗದ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅಭಿನಯದ ‘ದಿ ಡೆವಿಲ್‌’ ಸಿನೆಮಾ ಬಿಡುಗಡೆಯಾಗಿ ಥಿಯೇಟರಿಗೆ ಬಂದಿದ್ದು, ನಿಮಗೆಲ್ಲ ಗೊತ್ತೇ ಇದೆ. ಇದೀಗ ಅದೇ ‘ದಿ ಡೆವಿಲ್‌’ ಸಿನೆಮಾ ಥಿಯೇಟರಿನಿಂದ ಓಟಿಟಿಗೆ ಎಂಟ್ರಿಯಾಗುತ್ತಿದೆ. ಹೌದು, ‘ದಿ ಡೆವಿಲ್‌’ ಸಿನೆಮಾದ ಥಿಯೇಟರ್‌ ಪ್ರದರ್ಶನಗಳು ಪೂರ್ಣಗೊಂಡ ಬಳಿಕ ಇದೀಗ ಚಿತ್ರ ಓಟಿಟಿಯಲ್ಲಿ ಪ್ರದರ್ಶನಕ್ಕೆ ಸಿದ್ದವಾಗಿದೆ. ಈ ಮೂಲಕ ‘ದಿ ಡೆವಿಲ್‌’ ಓಟಿಟಿಯಲ್ಲೂ ತನ್ನ ಅಬ್ಬರವನ್ನು ಮುಂದುವರೆಸಲು ತಯಾರಾಗಿದ್ದಾನೆ.

2026ರ ಜು. 17ರಿಂದ ‘ದಿ ಡೆವಿಲ್‌’ ಸ್ಟ್ರೀಮಿಂಗ್‌

ಅಂದಹಾಗೆ, ಇದೇ 2026ರ ಜು. 17ರಿಂದ ‘Zee 5’ ಕನ್ನಡ ಓಟಿಟಿಯಲ್ಲಿ ‘ದಿ ಡೆವಿಲ್‌’ ಚಿತ್ರದ ಪ್ರದರ್ಶನ ಆರಂಭವಾಗಲಿದೆ. ಈ ಮೂಲಕ ದರ್ಶನ್‌ ಅಭಿನಯದ ‘ದಿ ಡೆವಿಲ್‌’ ಸಿನೆಮಾ ಓಟಿಟಿಗೆ ಬರೋದು ಯಾವಾಗ? ಎಂದು ಕಾತುರದಿಂದ ಕಾದು ಕೂತಿದ್ದ ದರ್ಶನ್‌ ಅಭಿಮಾನಿಗಳಿಗೆ ಹೊಸ ಸಿಹಿ ಸುದ್ದಿಯೊಂದು ಸಿಕ್ಕಂತಾಗಿದೆ. ಒಟ್ಟಾರೆ ಥಿಯೇಟರ್ ನಲ್ಲಿ ‘ದಿ ಡೆವಿಲ್‌’ ಚಿತ್ರವನ್ನು ಮಿಸ್ ಮಾಡಿಕೊಂಡಿದ್ದ, ಡಿ ಬಾಸ್‌ ಫ್ಯಾನ್ಸ್‌ ಇದೀಗ ಓಟಿಟಿಯಲ್ಲಿ ವೀಕ್ಷಣೆಯ ಮೂಲಕ ‘ದಿ ಡೆವಿಲ್‌’ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

ಬಿಗ್‌ ಬಜೆಟ್‌, ಬಹುತಾರಾಗಣದಲ್ಲಿ ಬಂದ ‘ದಿ ಡೆವಿಲ್‌’

ಕನ್ನಡದಲ್ಲಿ ಈ ಹಿಂದೆ ‘ಮಿಲನ’ ಹಾಗೂ ‘ತಾರಕ್’ ಸಿನೆಮಾಗಳನ್ನು ನಿರ್ದೇಶಿಸಿದ್ದ ಪ್ರಕಾಶ್ ವೀರ್, ‘ದಿ ಡೆವಿಲ್‌’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ದಿ ಡೆವಿಲ್‌’ ಚಿತ್ರದಲ್ಲಿ ನಾಯಕ ನಟ ದರ್ಶನ್‌ – ಧನುಷ್ ಹಾಗೂ ಕೃಷ್ಣ ಎಂಬ ಎರಡು ವಿಭಿನ್ನ ರೋಲ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್ ಅನ್ನುವ ಪಾತ್ರದಲ್ಲಿ ದರ್ಶನ್ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ‘ದಿ ಡೆವಿಲ್‌’ ಚಿತ್ರದಲ್ಲಿ ದರ್ಶನ್ ಗೆ ಜೋಡಿಯಾಗಿ ಯುವ ನಟಿ ರಚನಾ ರೈ ಅಭಿನಯಿಸಿದ್ದಾರೆ. ಉಳಿದಂತೆ ಮಹೇಶ್ ಮಾಂಜ್ರೇಕರ್, ವಿನಯ್ ಗೌಡ, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ಹುಲಿ ಕಾರ್ತಿಕ್ ಮೊದಲಾದ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರದಲ್ಲಿದ್ದಾರೆ.

‘ದಿ ಡೆವಿಲ್‌’ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಸುಧಾಕರ್ ಎಸ್. ರಾಜ್ ಕ್ಯಾಮರಾವರ್ಕ್ ಮಾಡಿದ್ದಾರೆ. ಬಿಗ್‌ ಬಜೆಟ್‌ನಲ್ಲಿ ಬಹಳ ಅದ್ದೂರಿಯಾಗಿ ‘ದಿ ಡೆವಿಲ್‌’ ಚಿತ್ರ ಮೂಡಿಬಂದಿದೆ. ‘ದಿ ಡೆವಿಲ್‌’ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ದರ್ಶನ್‌ ಅಭಿಮಾನಿಗಳಂತೂ ಯಾವುದೇ ತಕರಾರೂ ಇಲ್ಲದೆ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಥಿಯೇಟರಿನಲ್ಲಿ ‘ದಿ ಡೆವಿಲ್‌’ ದರ್ಶನ ಸಿಗದಿದ್ದವರು, ಇನ್ನು ಮುಂದೆ ಓಟಿಟಿಯಲ್ಲಿ ‘ದಿ ಡೆವಿಲ್‌’ ದರ್ಶನ ಪಡೆದುಕೊಳ್ಳಬಹುದು.

Related Posts

error: Content is protected !!