Video

‘ದೇವರು ರುಜು ಮಾಡಿದನು’ ಚಿತ್ರದ ‘ಹ್ಯಾಪಿ ಬರ್ತಡೇ…’ ರಿಲೀಸ್

‘ದೇವರು ರುಜು ಮಾಡಿದನು’ ಚಿತ್ರದ ಮೊದಲ ಹಾಡು ಬಿಡುಗಡೆ

‘ಹ್ಯಾಪಿ ಬರ್ತಡೇ…’ ಹಾಡಿಗೆ ಯುವ‌ನಟ ವಿರಾಜ್ ಭರ್ಜರಿ ಸ್ಟೆಪ್ಸ್

ಸಿಂಪಲ್‌ ಸುನಿ ನಿರ್ದೇಶನದ ‘ದೇವರು ರುಜು ಮಾಡಿದನು’ ಚಿತ್ರದ ಗೀತೆ

ಕೆಲ ತಿಂಗಳ ಹಿಂದಷ್ಟೇ ‘ಗತ ವೈಭವ’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತಂದಿದ್ದ ನಿರ್ದೇಶಕ ಸಿಂಪಲ್‌ ಸುನಿ, ಈಗ ‘ದೇವರು ರುಜು ಮಾಡಿದನು’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದ್ದಾರೆ. ಸುನಿ ನಿರ್ದೇಶನದ ಹೊಸಚಿತ್ರಕ್ಕೆ ‘ದೇವರು ರುಜು ಮಾಡಿದನು’ ಎಂದು ಹೆಸರಿಡಲಾಗಿದ್ದು, ಈ ಚಿತ್ರದ ಮೂಲಕ ರಂಗಭೂಮಿ ಕಲಾವಿದ ವಿರಾಜ್ ಹೀರೋ ಆಗಿ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಶೀರ್ಷಿಕೆ ಮೂಲಕ ಕುತೂಹಲ ಹೆಚ್ಚಿಸಿರುವ ‘ದೇವರು ರುಜು ಮಾಡಿದನು’ ಸಿನೆಮಾದ ಪ್ರಮೋಷನಲ್ ಸಾಂಗ್ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

ಅಂಥೋನಿ ದಾಸನ್‌ ಧ್ವನಿಯಲ್ಲಿ ‘ಹ್ಯಾಪಿ ಬರ್ತಡೇ…’ ಹಾಡು

‘ದೇವರು ರುಜು ಮಾಡಿದನು’ ಸಿನೆಮಾದ ‘ಹ್ಯಾಪಿ ಬರ್ತಡೇ…’ ಹಾಡು ಬಿಡುಗಡೆಯಾಗಿದ್ದು,ತಮಿಳಿನ ಖ್ಯಾತ ಗಾಯಕಅಂಥೋನಿ ದಾಸನ್‌ ಈ ಗೀತೆಗೆ ಧ್ವನಿಯಾಗಿದ್ದಾರೆ. ಇನ್ನು ‘ದೇವರು ರುಜು ಮಾಡಿದನು’ ಒಂದು ಮ್ಯೂಸಿಕಲ್ ಜರ್ನಿ ಸಿನೆಮಾ. ಈ ಸಿನೆಮಾದಲ್ಲಿ ಒಟ್ಟು 12 ಸಾಂಗ್ ಇದೆ. ನಾಯಕ ನಟ ವಿರಾಜ್ ಈ ಹಾಡಿನಲ್ಲಿ ಭರ್ಜರಿಯಾದ ಡ್ಯಾನ್ಸ್‌ ಮಾಡಿದ್ದಾರೆ. ಸಿನೆಮಾದ ಈ ಪ್ರಮೋಷನ್‌ ಹಾಡನ್ನು ಗಾಯಕ ಅಂಥೋನಿ ದಾಸನ್‌ ಬೆಂಗಳೂರಿಗೇ ಬಂದು ಹಾಡಿದ್ದಾರೆ. ಜೊತೆಗೆ ಹಾಡಿಗೆ ಹೆಜ್ಜೆ ಕೂಡ ಹಾಕಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಗೀತೆಗೆ ನಾಗಾರ್ಜುನ್ ಶರ್ಮ ಸಾಹಿತ್ಯ ರಚಿಸಿದ್ದಾರೆ.

‘ದೇವರು ರುಜು ಮಾಡಿದನು’ ಸಿನೆಮಾದ ‘ಹ್ಯಾಪಿ ಬರ್ತಡೇ…’ ಹಾಡಿನ ಲಿರಿಕಲ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಶೀಘ್ರದಲ್ಲಿಯೇ ‘ದೇವರು ರುಜು ಮಾಡಿದನು’ ತೆರೆಗೆ

‘ದೇವರು ರುಜು ಮಾಡಿದನು’ ಚಿತ್ರದಲ್ಲಿ ನಾಯಕ ವಿರಾಜ್ ಗೆ ಜೋಡಿಯಾಗಿ ಯುವ ನಟಿಯರಾದ
ಕೀರ್ತಿ ಕೃಷ್ಣ ಹಾಗೂ ದ್ವಿತಾ ರೈ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಸಿಂಪಲ್ ಸುನಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಜುಡಾ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ‘ಗ್ರೀನ್ ಹೌಸ್ ಮೂವೀಸ್’ ಬ್ಯಾನರ್ ನಡಿ ಗೋವಿಂದ್ ರಾಜ್ ಸಿ. ಟಿ ‘ದೇವರು ರುಜು ಮಾಡಿದನು’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ.

Related Posts

error: Content is protected !!