Video

ಸಿಂಪಲ್ ಸುನಿ ‘ಗತವೈಭವ’ ಟ್ರೇಲರ್ ರಿಲೀಸ್

ಹೊರಬಂತು ‘ಗತವೈಭವ’ ಚಿತ್ರದ ಟ್ರೇಲರ್‌

ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಟ್ರೇಲರ್‌ ಬಿಡುಗಡೆಗೊಳಿಸಿದ ಕಿಚ್ಚ ಸುದೀಪ್

ಯುವನಟ ದುಷ್ಯಂತ್‌, ಆಶಿಕಾ ಜೋಡಿಯ ಹೊಸಚಿತ್ರ ರಿಲೀಸ್‌ಗೆ ರೆಡಿ

ಯುವನಟ ದುಷ್ಯಂತ್‌ ನಾಯಕ ನಟನಾಗಿ ಮತ್ತು ಆಶಿಕಾ ರಂಗನಾಥ್‌ ನಾಯಕ ನಟಿಯಾಗಿ ಅಭಿನಯಿಸುತ್ತಿರುವ, ಸಿಂಪಲ್‌ ಸುನಿ ನಿರ್ದೇಶನದ ಹೊಸಚಿತ್ರ ‘ಗತವೈಭವ’ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘ಗತವೈಭವ’ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಖಾಸಗಿ ಮಾಲ್‌ ಒಂದರಲ್ಲಿ ನಡೆದ ಸಮಾರಂಭದಲ್ಲಿ ನಟ ಕಿಚ್ಚ ಸುದೀಪ್‌ ‘ಗತವೈಭವ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಹೇಗಿದೆ ‘ಗತವೈಭವ’ ಚಿತ್ರದ ಟ್ರೇಲರ್‌..?

ಇನ್ನು ಬಿಡುಗಡೆಯಾಗಿರುವ ‘ಗತವೈಭವ’ ಚಿತ್ರದ ಟ್ರೇಲರ್‌ ಹೆಸರಿಗೆ ತಕ್ಕಂತೆ ವೈಭವದಿಂದಲೇ ಮೂಡಿಬಂದಿದೆ. ‘ಗತವೈಭವ’ ಚಿತ್ರದ ಟ್ರೇಲರಿನಲ್ಲಿ ನಿರ್ದೇಶಕ ಸಿಂಪಲ್‌ ಸುನಿ ಮೂರು-ನಾಲ್ಕು ಕಥೆಗಳ ಎಳೆಯನ್ನು ಇಟ್ಟುಕೊಂಡು ಸಿನೆಮಾ ಮಾಡಿರುವ ಸಣ್ಣ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಟ್ರೇಲರಿನಲ್ಲಿ ‘ಗತವೈಭವ’ ಚಿತ್ರದ ಮೇಕಿಂಗ್‌, ಛಾಯಾಗ್ರಹಣ, ಸಂಗೀತ, ಕಂಟೆಂಟ್‌ ಎಲ್ಲವೂ ಗಮನ ಸೆಳೆಯುವಂತಿದೆ. ಆರಂಭದಲ್ಲಿಯೇ ಚಿತ್ರತಂಡ ಹೇಳಿರುವಂತೆ, ‘ಗತವೈಭವ’ ಸಂಪೂರ್ಣ ಪ್ರೇಮಕಥೆಯಾಗಿದ್ದು, ಜೊತೆಗೆ ಒಂದಷ್ಟು ಪ್ಯಾಂಟಸಿ ಹಾಗು ರೆಟ್ರೋ ಹಿನ್ನೆಲೆಯಲ್ಲಿ ಚಿತ್ರ ಸಾಗಲಿದೆ ಎಂಬದು ಟ್ರೇಲರಿನಲ್ಲಿ ಕಾಣುತ್ತದೆ.

‘ಗತವೈಭವ’ ಚಿತ್ರದ ಟ್ರೇಲರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಇದೇ ನ. 14ಕ್ಕೆ ‘ಗತವೈಭವ’ ತೆರೆಗೆ

ಅಂದಹಾಗೆ, ಇದೇ 2025ರ ನವೆಂಬರ್ 14ರಂದು ‘ಗತವೈಭವ’ ಚಿತ್ರ ಅದ್ಧೂರಿಯಾಗಿ ತೆರೆಗೆ ಬರಲಿದೆ. ‘ಗತವೈಭವ’ ಚಿತ್ರದಲ್ಲಿ ಹೊಸ ಹೀರೋ ದುಷ್ಯಂತ್ ಜೊತೆಗೆ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ, ಕೃಷ್ಣ ಜೋರಾಪುರ್ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು,  ವಿಲೀಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ‘ಸೇರ್ವೇಗಾರ ಸಿಲ್ವರ್ ಸ್ಕ್ರೀನ್ಸ್’ ಮತ್ತು ‘ಸುನಿ ಸಿನಿಮಾಸ್’ ಬ್ಯಾನರಿನಲ್ಲಿ ದೀಪಕ್ ಹಾಗೂ ಸಿಂಪಲ್ ಸುನಿ ‘ಗತವೈಭವ’ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ.

Related Posts

error: Content is protected !!