Video

‘ಜೂನಿಯರ್’ ಟ್ರೇಲರ್‌ ರಿಲೀಸ್‌

ಟ್ರೇಲರ್‌ನಲ್ಲಿ ‘ಜೂನಿಯರ್’ ಕಿರೀಟಿ ಅಬ್ಬರ

ಮನಸ್ಸು ತಟ್ಟುವ ಕಥೆಯೊಂದಿಗೆ ಬಂದ ‘ಜೂನಿಯರ್’

ಜುಲೈ 18ಕ್ಕೆ ಕಿರೀಟಿ ‘ಜೂನಿಯರ್’ ಚಿತ್ರ ಬಿಡುಗಡೆ

ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ನಾಯಕ ನಟನಾಗಿ ಅಭಿನನಯಿಸುತ್ತಿರುವ ಚೊಚ್ಚಲ ಸಿನೆಮಾ ‘ಜೂನಿಯರ್‌’ ಇದೀಗ ಬಿಡುಗಡೆ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಇದೇ ಜುಲೈ ತಿಂಗಳ 18ಕ್ಕೆ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ‘ಜೂನಿಯರ್‌’ ಚಿತ್ರ ಅದ್ಧೂರಿಯಾಗಿ ತೆರೆಗೆ ಬರ್ತಿದೆ. ಈಗಾಗಲೇ ತನ್ನ ಟೈಟಲ್‌, ಫಸ್ಟ್‌ಲುಕ್‌, ಟೀಸರ್‌ ಮತ್ತು ಹಾಡುಗಳ ಮೂಲಕ ಒಂದಷ್ಟು ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿರುವ ‘ಜೂನಿಯರ್‌’ ಚಿತ್ರತಂಡವೀಗ ‘ಜೂನಿಯರ್‌’ ಸಿನೆಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಮನಸ್ಸು ಮುಟ್ಟುವ ಕಥೆ ಟ್ರೇಲರ್‌ನಲ್ಲಿದೆ. ಆಕ್ಷನ್, ಎಮೋಷನ್‌, ಲವ್‌, ಫ್ಯಾಮಿಲಿ, ಸ್ಟುಡೆಂಟ್‌ ಲೈಫ್‌ ಎಲ್ಲವೂ ‘ಜೂನಿಯರ್‌’ ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ.

ಆಲ್ ರೌಂಡರ್ ಆಗಿ ಕಾಣಿಸಿಕೊಂಡಿರುವ ಕಿರೀಟಿ…

ಕಿರೀಟಿಗೆ ಇದು ಚೊಚ್ಚಲ ಸಿನಿಮಾ ಅನಿಸುವುದಿಲ್ಲ. ‘ಜೂನಿಯರ್‌’ನಲ್ಲಿ ಕಿರೀಟಿ ಆಲ್ ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತಮ್ಮ ನೃತ್ಯ, ಫೈಟಿಂಗ್ ಮತ್ತು ತಮ್ಮ ಪಾತ್ರಕ್ಕೆ ಅಗತ್ಯವಾದ ಮನೋಭಾವವನ್ನು ಕಿರೀಟಿ ಅದ್ಭುತವಾಗಿ ನಿಭಾಯಿಸುತ್ತಾರೆ. ತಮ್ಮ ಅದ್ಭುತ ಹಾಸ್ಯ ದಿಂದಲೂ ಮನರಂಜಿಸುತ್ತಾರೆ ಎಂಬುದು ಚಿತ್ರತಂಡದ ಭರವಸೆಯ ಮಾತು.

ಬೃಹತ್‌ ಕಲಾವಿದರ ಅದ್ಧೂರಿ ತಾರಾಗಣ 

ಇನ್ನು ‘ಜೂನಿಯರ್‌’ ಚಿತ್ರದಲ್ಲಿ ನಾಯಕ ಕಿರೀಟಿ ಅವರಿಗೆ ನಾಯಕಿಯಾಗಿ ಶ್ರೀಲೀಲಾ ಅದ್ಭುತವಾಗಿ ಜೋಡಿಯಾಗಿದ್ದಾರೆ. ಕಿರೀಟಿ ತಂದೆಯಾಗಿ ರವಿಚಂದ್ರನ್‌ ಹಾಗೂ ಸುಧಾರಾಣಿ ಸಾಥ್‌ ಕೊಟ್ಟಿದ್ದಾರೆ. ಉಳಿದಂತೆ ಜೆನಿಲಿಯಾ ಡಿʼಸೋಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾವ್‌ ರಮೇಶ್‌, ಅಚ್ಯುತ್‌ ಕುಮಾರ್‌, ಸತ್ಯ ಸೇರಿದಂತೆ ಬಹುಭಾಷೆಗಳ ಹಲವು ಕಲಾವಿದರು ‘ಜೂನಿಯರ್‌’ ಚಿತ್ರದ ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ರಾಧಾಕೃಷ್ಣ ಒಂದು ಸಂಪೂರ್ಣ ‘ಜೂನಿಯರ್‌’ ಮೂಲಕ ಒಂದೊಳ್ಳೆ ಯುವ ಮನರಂಜನೆಯನ್ನು ನೀಡಿದ್ದಾರೆ. ಕೆ. ಕೆ. ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣ ಅದ್ಭುತವಾಗಿದೆ, ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ಚಿತ್ರದ ಹೈಲೆಂಟ್‌ಗಳಲ್ಲೊಂದು. ‘ಜೂನಿಯರ್‌’ ಸಿನೆಮಾಗೆ ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ಸಾಹಸ ಸಂಯೋಜಿಸಿದ್ದಾರೆ.

‘ಜೂನಿಯರ್‌’ ಸಿನೆಮಾದ ಟ್ರೇಲರ್‌ ವಿಡಿಯೋವನ್ನು ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಸದ್ಯ ‘ಜೂನಿಯರ್‌’ ಸಿನೆಮಾದ ಪ್ರಚಾರ ಕಾರ್ಯವನ್ನು ಭರದಿಂದ ನಡೆಸುತ್ತಿರುವ ‘ಜೂನಿಯರ್‌’ ಚಿತ್ರತಂಡ ಇದೇ ಜುಲೈ 18ರಂದು ‘ಜೂನಿಯರ್‌’ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರಲು ಬೇಕಾದ ಸಿದ್ಧತೆ ಮಾಡಿಕೊಂಡಿದೆ.   ‘ವಾರಾಹಿ ಚಲನಚಿತ್ರ ಬ್ಯಾನರ್‌’ನಡಿ ರಜನಿ ಕೊರ್ರಪಾಟಿ ‘ಜೂನಿಯರ್‌’ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಾಯಿಶಿವಾನಿ ಪ್ರಸೆಂಟ್‌ ಮಾಡುತ್ತಿದ್ದಾರೆ. ಒಟ್ಟಾರೆ ಬಿಡುಗಡೆಗೂ ಮೊದಲೇ ಒಂದಷ್ಟು ಸೌಂಡ್‌ ಮಾಡುತ್ತಿರುವ ‘ಜೂನಿಯರ್‌’ ತೆರೆಮೇಲೆ ಹೇಗಿರಲಿದೆ ಎಂಬುದು ಇದೇ ಜುಲೈ 18 ರಂದು ಗೊತ್ತಾಗಲಿದೆ.

Related Posts

error: Content is protected !!