ಯುವರಾಜಕುಮಾರ್ ‘ಎಕ್ಕ’ ಟ್ರೇಲರ್ ರಿಲೀಸ್
ಯುವರಾಜಕುಮಾರ್ ಎರಡನೇ ಚಿತ್ರದ ಟ್ರೇಲರ್ ಹೊರಗೆ
ಹಳ್ಳಿ ಟು ಸಿಟಿ… ಚಿಕ್ಕ ಕೆರೆಯಿಂದ ದೊಡ್ಡ ಕೆರೆಗೆ ಬಿದ್ದ ‘ಎಕ್ಕ’ ಟ್ರೇಲರ್
ಕಂಪ್ಲೀಟ್ ರಾ.. ಸ್ಟೋರಿ ಜೊತೆಗೆ ‘ಎಕ್ಕ’ ಹಿಡಿದುಕೊಂಡ ಬಂದ ಯುವರಾಜಕುಮಾರ್
ವರನಟ ಡಾ. ರಾಜುಕುಮಾರ್ ಮೊಮ್ಮಗ ಯುವರಾಜಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಎರಡನೇ ಚಿತ್ರ ‘ಎಕ್ಕ’ ಬಿಡುಗಡೆ ಹೊಸ್ತಿಲಲ್ಲಿದ್ದು, ಸದ್ಯ ಭರದ ಪ್ರಚಾರ ಸಾಗಿದೆ. ಸ್ಯಾಂಡಲ್ ವುಡ್ ಮೂರು ದೊಡ್ಡ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ನಿರ್ಮಿಸಿರೋ ಬಹುನಿರೀಕ್ಷಿತ ‘ಎಕ್ಕ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಹೇಗಿದೆ ‘ಎಕ್ಕ’ ಸಿನೆಮಾದ ಟ್ರೇಲರ್..?
‘ಎಕ್ಕ’ ಸಿನೆಮಾದ ಹೆಸರೇ ಹೇಳುವಂತೆ ಇದೊಂದು ಔಟ್ ಅಂಡ್ ಔಟ್ ಮಾಸ್ ಕಂಟೆಂಟ್ ಸಿನೆಮಾ. ಕೆಳ ಮಧ್ಯಮ ವರ್ಗದ ಹುಡುಗನೊಬ್ಬನ ಜೀವನದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ ಎಂಬುದನ್ನು ‘ಎಕ್ಕ’ ಟ್ರೇಲರಿನಲ್ಲಿ ಹೇಳಲಾಗಿದೆ. ಹಳ್ಳಿ ಬಿಟ್ಟು ಸಿಟಿಗೆ ಬಂದ ಹುಡ್ಗ ಕೆರೆಯಿಂದ ಸಮುದ್ರಕ್ಕೆ ಬಂದಿದ್ದ ಕಥೆಯನ್ನು ರೋಹಿತ್ ಪದಕಿ ಹೇಳೋದಿಕ್ಕೆ ಹೊರಟಿದ್ದಾರೆ. ಒಬ್ಬ ಸಾಮಾನ್ಯ ಹುಡ್ಗ ಅಂಡರ್ ವರ್ಲ್ಡ್ ಆಗಿ ಬೆಳೆದ ಕಥೆ ‘ಎಕ್ಕ’ ಸಿನೆಮಾದ ಹೈಲೆಟ್ ಎಂಬುದು ಟ್ರೇಲರಿನಲ್ಲಿ ಮೇಲ್ನೋಟಕ್ಕೆ ಕಾಣುತ್ತಿದೆ. ಇನ್ನು ‘ಎಕ್ಕ’ ಸಿನೆಮಾದ ಟ್ರೇಲರಿನಲ್ಲಿ ಯುವರಾಜಕುಮಾರ್ ಮಾಸ್ ಆಗಿ ಅಬ್ಬರಿಸಿದ್ದು, ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯಾಗಿ ಯುವನಿಗೆ ಸಾಥ್ ಕೊಟ್ಟಿದ್ದಾರೆ.
‘ಎಕ್ಕ’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ಎಕ್ಕ’ ಚಿತ್ರದಲ್ಲಿ ನಾಯಕ ನಟ ಯುವರಾಜಕುಮಾರ್ ಅವರೊಂದಿಗೆ ‘ಡೆಡ್ಲಿಸೋಮ’ ಖ್ಯಾತಿಯ ನಟ ಆದಿತ್ಯ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ, ಶ್ರುತಿ, ಸಾಧುಕೋಕಿಲ, ಪೂರ್ಣಚಂದ್ರ ಮೊದಲಾದವರು ‘ಎಕ್ಕ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದೇ ಜುಲೈ 18ಕ್ಕೆ ‘ಎಕ್ಕ’ ತೆರೆಗೆ
ಇನ್ನು ಯುವರಾಜಕುಮಾರ್ ನಾಯಕನಾಗಿ ಅಭಿನಯಿಸಿರುವ ‘ಎಕ್ಕ’ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ‘ಎಕ್ಕ’ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಎಕ್ಕ’ ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಒಟ್ಟಿಗೆ ಸೇರಿ ‘ಎಕ್ಕ’ ಚಿತ್ರವನ್ನ ನಿರ್ಮಿಸಿದ್ದಾರೆ. ಇದೇ 2025ರ ಜುಲೈ 18 ರಂದು ‘ಎಕ್ಕ’ ಸಿನಿಮಾ ಬಿಡುಗಡೆಯಾಗುತ್ತಿದ್ದು, ಯುವರಾಜಕುಮಾರ್ ಅಭಿನಯದ ಎರಡನೇ ಸಿನೆಮಾ ‘ಎಕ್ಕ’ ಪಕ್ಕಾ ರಾ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನೆಮಾ. ಅಪ್ಪಟ ಮಾಸ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಈ ಸಿನೆಮಾವನ್ನು ತೆರೆಗೆ ತರಲಾಗುತ್ತಿದೆ.















