Video

ಹೊರಬಂತು ‘ಪೀಟರ್’ ಚಿತ್ರದ ಮೊದಲ ‘ಸುಂದರಿ…’ ಗೀತೆ!

‘ಪೀಟರ್’ ಚಿತ್ರದ ಮೊದಲ ಮೆಲೋಡಿ ಲವ್‌ ಟ್ರ್ಯಾಕ್‌ ರಿಲೀಸ್‌

ರಿತ್ವಿಕ್ ಮುರುಳೀಧರ್ ಸಂಯೋಜನೆಯ ಗೀತೆಗೆ ಕಪಿಲನ್-ಸುನಿಧಿ ಗಣೇಶ್ ಧ್ವನಿ

ಏಕಕಾಲಕ್ಕೆ ನಾಲ್ಕು ಭಾಷೆಗಳಲ್ಲಿ ‘ಪೀಟರ್’ ಚಿತ್ರದ ಮೊದಲ ಹಾಡು

ಕಳೆದ ಬಾರಿ ‘ದೂರದರ್ಶನ’ ಸಿನೆಮಾವನ್ನು ನಿರ್ದೇಶಿಸಿ ಪ್ರೇಕ್ಷಕರ ಮುಂದೆ ತಂದಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಈ ಬಾರಿ ‘ಪೀಟರ್’ ಎಂಬ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಶೀಘ್ರದಲ್ಲಿಯೇ ‘ಪೀಟರ್’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರಲು ತಯಾರಿ ಮಾಡಿಕೊಳ್ಳುತ್ತಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಮೊದಲ ಮೆಲೋಡಿ ಪ್ರೇಮಗೀತೆಯನ್ನು ಬಿಡುಗಡೆ ಮಾಡಿದೆ.

ಹೇಗಿದೆ ‘ಪೀಟರ್’ ಚಿತ್ರದ ಮೊದಲ ಗೀತೆ..? 

‘ಥಿಂಕ್ ಮ್ಯೂಸಿಕ್’ ‌ಕನ್ನಡ ಯೂ-ಟ್ಯೂಬ್ ನಲ್ಲಿ ‘ಪೀಟರ್’ ಚಿತ್ರದ ‘ಸುಂದರಿ… ಸುಂದರಿ…’ ಎಂಬ ಗೀತೆಯನ್ನು ಅನಾವರಣ ಮಾಡಲಾಗಿದೆ. ಖ್ಯಾತ ಚಿತ್ರ ಸಾಹಿತಿ ನಾಗಾರ್ಜುನ್ ಶರ್ಮಾ ಬರೆದ ಹಾಡು ಇದಾಗಿದ್ದು, ಕಪಿಲ್ ಕಪಿಲನ್ ಹಾಗೂ ಸುನಿಧಿ ಗಣೇಶ್ ಈ ಗೀತೆಗೆ ಧ್ವನಿಯಾಗಿದ್ದಾರೆ. ರಿತ್ವಿಕ್ ಮುರುಳೀಧರ್ ಸಂಗೀತ ಸಂಯೋಜನೆಯಲ್ಲಿ ಈ ಗೀತೆ ಮೂಡಿ ಬಂದಿದೆ. ಇನ್ನು ‘ಪೀಟರ್’ ಚಿತ್ರದ ‘ಸುಂದರಿ… ಸುಂದರಿ…’ ಎಂಬ ಪ್ರೇಮಗೀತೆಯಲ್ಲಿ ನಾಯಕ ರಾಜೇಶ್ ಧ್ರುವ ಹಾಗೂ ನಾಯಕಿ ರವೀಕ್ಷಾ ಜೋಡಿಯಾಗಿ ಮಿಂಚಿದ್ದಾರೆ. ನವ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿರುವ ಹಾಡನ್ನು ಮಲೆನಾಡಿನ ಹಿನ್ನೆಲೆಯ ಸುಂದರ ಜಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ‘ಪೀಟರ್’ ಚಿತ್ರದ ಈ ಹಾಡು ಏಕಕಾಲದಲ್ಲಿ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಕೇಳೋದಕ್ಕೆ ಮೆಲೋಡಿಯಾಗಿ ಈ ಲವ್‌ ಟ್ರ್ಯಾಕ್‌ ನಿಧಾನವಾಗಿ ಯು-ಟ್ಯೂಬ್‌ನಲ್ಲಿ ಕೇಳುಗರ ಗಮನ ಸೆಳೆಯುತ್ತಿದೆ.

‘ಪೀಟರ್’ ಸಿನೆಮಾದ ‘ಸುಂದರಿ… ಸುಂದರಿ…’ ಎಂಬ ಮೆಲೋಡಿ ಲವ್‌ ಟ್ರ್ಯಾಕ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಏನು ಈ ‘ಪೀಟರ್’ ಕಥೆ..? 

ಚಿತ್ರತಂಡ ಹೇಳುವಂತೆ, ‘ಪೀಟರ್’ ಸೆನ್ಸಿಟಿವ್ ಕ್ರೈಮ್ ಡ್ರಾಮಾ ಕಂಟೆಂಟ್ ಹೊಂದಿರುವ ಸಿನೆಮಾವಾಗಿದ್ದು,  ಮುಖ್ಯವಾಗಿ ಈ ಚಿತ್ರ ಚೆಂಡೆ ಮೇಳದ ಕಥಾವಸ್ತುವನ್ನು ಒಳಗೊಂಡಿದೆಯಂತೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ‘ಪೀಟರ್’ ಸಿನೆಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಯಕ್ಷಗಾನ, ಭೂತಕೋಲ, ದೇವರ ನರ್ತನದಲ್ಲಿ ಬಳಸುವ ಜಾನಪದೀಯ ವಾದ್ಯವಾಗಿರುವ ಚೆಂಡೆ ಮೇಳನ್ನು ಥಿಯೇಟರ್ ನಲ್ಲಿ ಎಕ್ಸ್ ಪಿರಿಯನ್ಸ್ ಮಾಡುವುದೇ ಚೆಂದ ಎಂಬುದು ‘ಪೀಟರ್’ ಚಿತ್ರತಂಡದ ಮಾತು.

ಇನ್ನು ‘ಪೀಟರ್’ ಸಿನೆಮಾದಲ್ಲಿ ರಾಜೇಶ್ ಧ್ರುವ, ಜಾಹ್ನವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಡಿಕೇರಿಯ ಭಾಗಮಂಡಲದ ಸುಂದರ ಜಾಗಗಳಲ್ಲಿ ‘ಪೀಟರ್’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಅದ್ಧೂರಿ ಸೆಟ್ ಹಾಕಿ‌ ಮಳೆಗಾಲದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ‘ವೃದ್ಧಿ ಸ್ಟುಡಿಯೊಸ್’ ಬ್ಯಾನರ್ ನಡಿ ‘ಪೀಟರ್’ ಸಿನೆಮಾ ನಿರ್ಮಿಸುತ್ತಿದ್ದಾರೆ. ‘ಪೀಟರ್‌’ ಚಿತ್ರಕ್ಕೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕ್ಕೆ ದೇವರಾಜ್ ಕಲಾ ನಿರ್ದೇಶನ ಮಾಶಡಿದ್ದಾರೆ. ಲವ್, ಆಕ್ಷನ್, ಎಮೋಷನ್, ಸೆಂಟಿಮೆಂಟ್ ಎಲ್ಲರದ‌ ಮಿಶ್ರಣ ‘ಪೀಟರ್’ ಸಿನೆಮಾದಲ್ಲಿದ್ದು, ಎಲ್ಲಾ ಥರದ ಆಡಿಯನ್ಸ್‌ಗೂ ಇಷ್ಟವಾಗುವಂಥ ಸಿನೆಮಾ ಮಾಡಿದ್ದೇವೆ ಎಂಬುದು ‘ಪೀಟರ್‌’ ಚಿತ್ರತಂಡದ ಭರವಸೆಯ ಮಾತು.

Related Posts

error: Content is protected !!