Video

‘ಏಳುಮಲೆ’ ಚಿತ್ರದಿಂದ ಹೊರಬಂತು ‘ಕಾಪಾಡೋ ದ್ಯಾವ್ರೇ…’ ಹಾಡು

‘ಏಳುಮಲೆ’ ಸಿನೆಮಾದ ‘ಕಾಪಾಡೋ ದ್ಯಾವ್ರೇ…’ ಸಾಂಗ್ ರಿಲೀಸ್

ಡಿ. ಇಮ್ಮಾನ್‌ ಸಂಗೀತ ಸಂಯೋಜನೆಯ ಗೀತೆಗೆ ಧ್ವನಿಯಾದ ಮಂಗ್ಲಿ…

ಮೆಲೋಡಿ ಗೀತೆಯಲ್ಲಿ ರಾಣಾ – ಪ್ರಿಯಾಂಕಾ ಆಚಾರ್‌ ಜೋಡಿ

ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನೆಮಾದ ಟೈಟಲ್ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಮೊದಲ ನೋಟದಲ್ಲೇ ಒಂದಷ್ಟು ಸಿನಿಪ್ರಿಯರ ಗಮನ ಸೆಳೆದಿದ್ದ ‘ಏಳುಮಲೆ’ ಸಿನೆಮಾದ ಮತ್ತೊಂದು ಹಾಡು ಇದೀಗ ಬಿಡುಗಡೆಯಾಗಿದೆ.

ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಮೂಡಿಬಂದಿರುವ ಈ ಗೀತೆ ‘ಆನಂದ್ ಆಡಿಯೋ’ ಯೂ-ಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಲಾಗಿದೆ. ಕನ್ನಡದಲ್ಲಿ ‘ಕಾಪಾಡೋ ದ್ಯಾವ್ರೇ…’ ಎಂಬ ಸಾಲಿನಿಂದ ಶುರುವಾಗುವ ಈ ಮೆಲೋಡಿ ಗೀತೆಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಗಾಯಕಿ ಮಂಗ್ಲಿ ಈ ಹಾಡಿಗೆ ಧ್ವನಿಯಾಗಿದ್ದಾರೆ. ಡಿ. ಇಮ್ಮಾನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಗೀತೆಯಲ್ಲಿ ಪ್ರೀತಿಗಾಗಿ ಪರಿತಪಿಸುವ ಪ್ರೇಮಿಗಳ‌ ನಡುವಿನ ಮಧುರ ಭಾವನೆಯನ್ನು ತೋರಿಸಲಾಗಿದ್ದು, ಈ ಹಾಡಿನಲ್ಲಿ ನಾಯಕ ನಟ ರಾಣಾ ಹಾಗೂ ನಾಯಕಿ ಪ್ರಿಯಾಂಕಾ ಆಚಾರ್‌ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

‘ಏಳುಮಲೆ’ ಚಿತ್ರದ ‘ಕಾಪಾಡೋ ದ್ಯಾವ್ರೇ…’ ಹಾಡಿನ ಲಿರಿಕಲ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಗಡಿ ಭಾಗದ ನಡುವಿನ ಪ್ರೇಮಕಥೆ!

ಕರ್ನಾಟಕ-ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯಾಗಿರುವ ‘ಏಳುಮಲೆ’ ಸಿನೆಮಾದಲ್ಲಿ ನಟಿ ರಕ್ಷಿತಾ ಸೋದರ ರಾಣಾ ಕನ್ನಡದ ಹುಡ್ಗ ಹರೀಶ್ ಆಗಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ಮೈಸೂರಿನ ಹುಡುಗಿ ಪ್ರಿಯಾ ಆಚಾರ್ ತಮಿಳು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ರಾಣಾ, ಪ್ರಿಯಾಂಕಾ ಆಚಾರ್ ಜೊತೆಗೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಇದ್ದಾರೆ. ‘ಚೌಕ’ ಮತ್ತು ‘ಕಾಟೇರ’ ಚಿತ್ರಗಳ ನಿರ್ದೇಶಕ ತರುಣ್ ಸುಧೀರ್ ಈ ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ. ಭಾವನಾತ್ಮಕವಾದ ಕಥೆಯನ್ನು ಒಳಗೊಂಡಿರಲಿದೆ. ಚಾಮರಾಜನಗರ, ಸೇಲಂ, ಈರೋಡ್ ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

Related Posts

error: Content is protected !!