Video

‘X&Y’ ಚಿತ್ರ ಹಾಡಿನಲ್ಲಿ ‘ಹನಿಗಳೆಲ್ಲ… ರೈನಾದಂತಿದೆ…’

ಹೊರಬಂತು ‘X&Y’ ಚಿತ್ರದ ಮೊದಲ ಹಾಡು

‘ಎಲ್ಲೋ ಇದ್ದ ಹನಿಗಳೆಲ್ಲ… ರೈನಾದಂತಿದೆ…’ ಎಂಬ ಟ್ರಾವೆಲರ್‌ ಸಾಂಗ್‌!

ನಿಧಾನವಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ‘X&Y’ ಚಿತ್ರಗೀತೆ

‘ರಾಮ ರಾಮ ರೇ’ ಖ್ಯಾತಿಯ ಡಿ. ಸತ್ಯ ಪ್ರಕಾಶ್‌ ನಿರ್ದೇಶನದ ಹೊಸಚಿತ್ರ ‘X&Y’ ತೆರೆಗೆ ಬರಲು ತಯಾರಾಗಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘X&Y’ ಚಿತ್ರದ ‘ಎಲ್ಲೋ ಇದ್ದ ಹನಿಗಳೆಲ್ಲ… ರೈನಾದಂತಿದೆ…’ ಎಂಬ ಟ್ರಾವೆಲರ್‌ ಸಾಂಗ್‌ ಅನ್ನು ಬಿಡುಗಡೆ ಮಾಡಿದೆ. ‘ಸತ್ಯ ಪಿಕ್ಚರ್ಸ್‌’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡು ಹೊರಬಂದಿದೆ. ಕೌಶಿಕ್‌ ಹರ್ಷ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಗೀತೆಗೆ ‘ಪ್ರೇಮಕವಿ’ ಕೆ. ಕಲ್ಯಾಣ್‌ ಸಾಹಿತ್ಯವಿದ್ದು, ಅದ್ವೈತ್‌ ಪಟ್ನಾಯಕ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ.

ಇನ್ನು ಬಿಡುಗಡೆಯಾಗಿರುವ ‘X&Y’ ಚಿತ್ರದ ‘ಎಲ್ಲೋ ಇದ್ದ ಹನಿಗಳೆಲ್ಲ… ರೈನಾದಂತಿದೆ…’ ಟ್ರಾವೆಲರ್‌ ಸಾಂಗ್‌ನಲ್ಲಿ ನಟ ಕಂ ನಿರ್ದೇಶಕ ಡಿ. ಸತ್ಯಪ್ರಕಾಶ್‌, ಅಥರ್ವ ಪ್ರಕಾಶ್‌, ನಟಿಯರಾದ ಬೃಂದಾ ಆಚಾರ್ಯ, ಅಯಾನ ಕಾಣಿಸಿಕೊಂಡಿದ್ದಾರೆ. ಒಂದಷ್ಟು ತರಲೆ, ತುಂಟಾಟಗಳನ್ನು ಚಿತ್ರದ ಹಾಡಿನಲ್ಲಿ ತೆರೆಮೇಲೆ ತರಲಾಗಿದ್ದು, ಜಾಲಿ ಮೂಡ್‌ನಲ್ಲಿರುವ ಈ ಹಾಡು ಸೋಶಿಯಲ್‌ ಮೀಡಿಯಾಗಳಲ್ಲಿ ನಿಧಾನವಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

‘X&Y’ ಚಿತ್ರದ ‘ಎಲ್ಲೋ ಇದ್ದ ಹನಿಗಳೆಲ್ಲ… ರೈನಾದಂತಿದೆ…’ ಟ್ರಾವೆಲರ್‌ ಸಾಂಗ್‌ನ ಲಿರಿಕಲ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಇದೇ ಜೂನ್‌ 26ಕ್ಕೆ ‘X&Y’ ಚಿತ್ರ ತೆರೆಗೆ

‘ಸತ್ಯ ಪಿಕ್ಚರ್ಸ್‌’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ‘X&Y’ ಚಿತ್ರಕ್ಕೆ ನಿರ್ದೇಶಕ ಡಿ. ಸತ್ಯ ಪ್ರಕಾಶ್‌ ಆಕ್ಷನ್‌-ಕಟ್‌ ಹೇಳಿದ್ದಾರೆ. ಚಿತ್ರಕ್ಕೆ ಲವಿತ್‌ ಛಾಯಾಗ್ರಹಣ, ಬಿ. ಎಸ್‌. ಕೆಂಪರಾಜು ಸಂಕಲನವಿದೆ. ಅಂದಹಾಗೆ, ಸದ್ಯ ಪ್ರಚಾರ ಕಾರ್ಯಗಳಲ್ಲಿ ಚಿತ್ರತಂಡ ಬಿಝಿಯಾಗಿದ್ದು, ಇದೇ ಜೂನ್‌ 26ರಂದು ‘X&Y’ ಚಿತ್ರ ಬಿಡುಗಡೆಯಾಗಿ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!