ಹೊರಬಂತು ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ‘ಜೈ’ ಟ್ರೇಲರ್
ರೂಪೇಶ್ ಶೆಟ್ಟಿ ನಟನೆ, ನಿರ್ದೇಶನದ ‘ಜೈ’ ಟ್ರೇಲರ್ ರಿಲೀಸ್
‘ಜೈ’ ಸಿನೆಮಾ ಟ್ರೇಲರಿಗೆ ಸಾಥ್ ನೀಡಿದ ಸುನೀಲ್ ಶೆಟ್ಟಿ ಮತ್ತು ಗಣ್ಯರು
ಮಾಸ್ ಕಂಟೆಂಟ್ ಜೊತೆಗೆ ಮಸ್ತ್ ಎಂಟರ್‌ಟೈನ್ಮೆಂಟ್‌ಗೆ ‘ಜೈ’
ಕಿರತುತೆರೆ ‘ಬಿಗ್ ಬಾಸ್’ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಜೈ’ ಸಿನೆಮಾ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಈಗಾಗಲೇ ‘ಜೈ’ ಸಿನೆಮಾದ ಬಹುತೇಕ ಕೆಲಸಗಳನ್ನುಪೂರ್ಣಗೊಳಿಸಿರುವ ಚಿತ್ರತಂಡ, ಇದೇ ತಿಂಗಳು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದೆ.
ಸದ್ಯ ‘ಜೈ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ‘ಜೈ’ ಸಿನೆಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್, ಸಂಗೀತ ನಿರ್ದೇಶಕ ಗುರುಕಿರಣ್, ಉಪೇಂದ್ರ ಶೆಟ್ಟಿ, ಮಧು ರಾವ್, ರಾಜ್ ದೀಪಕ್ ಶೆಟ್ಟಿ, ಉದ್ಯಮಿ ಪ್ರಕಾಶ್ ಕುಮ್ಕಳ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ‘ಜೈ’ ಸಿನೆಮಾದ ಟ್ರೇಲರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಇನ್ನು ಕನ್ನಡ, ತುಳು, ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ‘ಜೈ’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ.
ಹೇಗಿದೆ ‘ಜೈ’ ಸಿನೆಮಾದ ಟ್ರೇಲರ್..?
ಇನ್ನು ‘ಜೈ’ ಸಿನೆಮಾದ ಟ್ರೇಲರ್ ಔಟ್ ಅಂಡ್ ಔಟ್ ಮಾಸ್ ಶೈಲಿಯಲ್ಲಿ ಬಿಡುಗಡೆಯಾಗಿ ಹೊರಬಂದಿದೆ. ‘ಜೈ’ ಸಿನೆಮಾದ ಟ್ರೇಲರಿನಲ್ಲಿ ಹಳ್ಳಿ ಹುಡುಗನೊಬ್ಬನ ಹೋರಾಟ, ರಾಜಕೀಯ ಸಂಘರ್ಷ ಜೊತೆಗೊಂದು ಲವ್ ಸ್ಟೋರಿಯನ್ನು ತೆರೆಮೇಲೆ ತರುವ ಸುಳಿವನ್ನನು ನಟ ಕಂ ನಿರ್ದೇಶಕ ರೂಪೇಶ್ ಶೆಟ್ಟಿ ‘ಜೈ’ ಸಿನೆಮಾದ ಟ್ರೇಲರಿನಲ್ಲಿ ಬಿಟ್ಟುಕೊಟ್ಟಿದ್ದಾರೆ. ಸದ್ಯ ಬಿಡುಗಡೆಯಾಗಿರುವ ‘ಜೈ’ ಸಿನೆಮಾದ ಟ್ರೇಲರಿಗೆ ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ‘ಜೈ’ ತೆರೆಮೇಲೆ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.
‘ಜೈ’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಇದೇ ನವೆಂಬರ್ 14ಕ್ಕೆ ‘ಜೈ’ ತೆರೆಗೆ…
ಸದ್ಯ ಟ್ರೇಲರ್ ಮೂಲಕ ಹೊರಬಂದಿರುವ ‘ಜೈ’ ಸಿನೆಮಾವನ್ನು ಇದೇ 2025ರ ನವೆಂಬರ್ 14ರಂದು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ‘ಜೈ’ ಸಿನೆಮಾ ನಿರ್ಮಾಣ ವಾಗಿದ್ದು, ಭಾರತದಾದ್ಯಂತ ‘ಜೈ’ ಸಿನೆಮಾ ತೆರೆಗೆ ಬರುತ್ತಿದೆ. ‘ಜೈ’ ಸಿನೆಮಾದಲ್ಲಿ ನಾಯಕ ನಟ ರೂಪೇಶ್ ಶೆಟ್ಟಿ ಅವರಿಗೆ ಅದ್ವಿತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ಸುನೀಲ್ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಅರವಿಂದ ಬೋಳಾರ್ ಸೇರಿದಂತೆ ಅನೇಕ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.















