Video

‘ಆಂಧ್ರ ಕಿಂಗ್ ತಾಲೂಕ’ ಟ್ರೇಲರ್ ರಿಲೀಸ್…

ಉಪ್ಪಿ ಮತ್ತೊಂದು ತೆಲುಗು ಚಿತ್ರ‌ ‘ಆಂಧ್ರ ಕಿಂಗ್ ತಾಲೂಕ’ ಟ್ರೇಲರ್

ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಟ್ರೇಲರ್‌ ರಿಲೀಸ್‌

ಬೆಂಗಳೂರಿನಲ್ಲಿ ‘ಆಂಧ್ರ ಕಿಂಗ್ ತಾಲೂಕ’ ಟ್ರೇಲರ್ ಬಿಡುಗಡೆ

ಕನ್ನಡದ ನಟ ಮತ್ತು ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ತೆಲುಗು ಸಿನೆಮಾ ‘ಆಂಧ್ರ ಕಿಂಗ್ ತಾಲೂಕ’ ಇದೇ ನವೆಂಬರ್‌ ನಲ್ಲಿ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿರುವ ಚಿತ್ರತಂಡ, ಇದೀಗ ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ಹೊರಬಂದಿದೆ. ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ನಾಯಕ ನಟರಾದ ಉಪೇಂದ್ರ, ರಾಮ್‌ ಪೋತಿನೇನಿ, ನಾಯಕಿ ಭಾಗ್ಯಶ್ರೀ ಬೋರ್ಸೇ ಸೇರಿದಂತೆ ಚಿತ್ರದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದು ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆಗೊಳಿಸಿದರು. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲೂ ಏಕಕಾಲಕ್ಕೆ ‘ಆಂಧ್ರ ಕಿಂಗ್ ತಾಲೂಕ’ ಚಿತ್ರ ತೆರೆಗೆ ಬರುತ್ತಿದ್ದು, ಎರಡೂ ಭಾಷೆಗಳಲ್ಲೂ ಏಕಕಾಲಕ್ಕೆ ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಗಿದೆ. ಕನ್ನಡ ಮತ್ತು ತೆಲುಗು ಎರಡೂ ನೇಟಿವಿಟಿಗೆ ತಕ್ಕಂತೆ ‘ಆಂಧ್ರ ಕಿಂಗ್ ತಾಲೂಕ’ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡಿದೆ ಚಿತ್ರತಂಡ.

ಹೇಗಿದೆ ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಟ್ರೇಲರ್‌..?

ಇನ್ನು ಬಿಡುಗಡೆಯಾಗಿರುವ ‘ಆಂಧ್ರ ಕಿಂಗ್ ತಾಲೂಕ’ ಸಿನೆಮಾದ ಟ್ರೇಲರ್‌ ನೋಡಿದವರಿಗೆ ಇದು ಒಬ್ಬ ಅಪ್ಪಟ ಅಭಿಮಾನಿ ಮತ್ತು ಸೂಪರ್‌ ಸ್ಟಾರ್ ಹೀರೋ ನಡುವಿನ ಅಭಿಮಾನದ ಕಥೆ ಎಂಬುದು ತಿಳಿಯುತ್ತದೆ. ‘ಆಂಧ್ರ ಕಿಂಗ್ ತಾಲೂಕ’ ಸಿನೆಮಾನಲ್ಲಿ ಇಬ್ಬರು ಹೀರೋಗಳ ಜುಗಲ್‌ಬಂದಿಯನ್ನು ನೋಡಬಹುದು. ‘ಆಂಧ್ರ ಕಿಂಗ್ ತಾಲೂಕ’ ಚಿತ್ರದಲ್ಲಿ ನಟ ಉಪೇಂದ್ರ ಸೂಪರ್‌ ಸ್ಟಾರ್ ಹೀರೋ ಸೂರ್ಯ ಕುಮಾರ್‌ ಪಾತ್ರದಲ್ಲಿ ಕಾಣಿಸಿಕೊಂಡರೆ, ಮತ್ತೊಬ್ಬ ಯುವನಟ ರಾಮ್‌ ಪೋತಿನೇನಿ ಸೂಪರ್‌ ಸ್ಟಾರ್‌ ಸೂರ್ಯ ಕುಮಾರ್‌ ಅವರ ಅಪ್ಪಟ ಅಭಿಮಾನಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹೀರೋ ಮತ್ತು ಅಭಿಮಾನಿಯ ಕಥೆಯಲ್ಲಿ ನಿರ್ದೇಶಕರು ಪ್ರೀತಿ, ಸ್ನೇಹ ಮತ್ತು ಆಕ್ಷನ್‌ನ ಎಳೆಯೊಂದನ್ನೂ ತೆರೆಮೇಲೆ ಹೇಳಿರುವುದು ಟ್ರೇಲರಿನಲ್ಲಿ ಕಾಣುತ್ತದೆ.

‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಇದೇ ನ. 27ಕ್ಕೆ ‘ಆಂಧ್ರ ಕಿಂಗ್ ತಾಲೂಕ’ ತೆರೆಗೆ

‘ಆಂಧ್ರ ಕಿಂಗ್ ತಾಲೂಕ’ ಚಿತ್ರವನ್ನ ಮಹೇಶ್ ಬಾಬು ಪಿ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಆಂಧ್ರ ಕಿಂಗ್ ತಾಲೂಕ’ ಚಿತ್ರದಲ್ಲಿ ಉಪೇಂದ್ರ, ರಾಮ್‌ ಪೋತಿನೇನಿ ಜೊತೆಗೆ ಭಾಗ್ಯಶ್ರೀ ಬೋರ್ಸೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಾಹುಲ್ ರಾಮಕೃಷ್ಣ, ಮುರಳಿ ಶರ್ಮಾ, ರಾಜೀವ್ ಕನಕಾಲ, ರಾವ್ ರಮೇಶ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಹಾಡುಗಳಿಗೆ ವಿವೇಕ್ ಮತ್ತು ಮೆರ್ವೀನ್ ಸಂಗೀತ ಸಂಯೋಜಿಸಿದ್ದಾರೆ. ‘ಮೈತ್ರಿ ಮೂವಿ ಮೇಕರ್ಸ್’ ಬ್ಯಾನರ್‌  ಅಡಿಯಲ್ಲಿ ನವೀನ್ ಯೆರ್ನೇನಿ, ವೈ. ರವಿಶಂಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದೇ ತಿಂಗಳ‌ 27ಕ್ಕೆ ‘ಆಂದ್ರ ಕಿಂಗ್‌ ತಾಲೂಕ’ ಚಿತ್ರ ಬಿಡುಗಡೆಯಾಗಲಿದೆ.

Related Posts

error: Content is protected !!