Video

‘ಚೌಕಿದಾರ್’ ಚಿತ್ರದ ‘ಇಷ್ಟ ಆದೆ‌ ನೀನು…’ ಬಿಡುಗಡೆ

‘ಚೌಕಿದಾರ್’ ಚಿತ್ರದ ಮೂರನೇ ಹಾಡು ‘ಇಷ್ಟ ಆದೆ‌ ನೀನು…’ ರಿಲೀಸ್‌

ಪೃಥ್ವಿ ಅಂಬಾರ್-ಧನ್ಯಾ ರಾಮ್ ಕುಮಾರ್ ನಟನೆಯ ‘ಚೌಕಿದಾರ್’ ಚಿತ್ರ ತೆರೆಗೆ ಬರಲು ತಯಾರಿ…

ಸಚಿನ್‌ ಬಸ್ರೂರು ಸಂಗೀತ ಸಂಯೋಜನೆಯ ಗೀತೆ 

‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ‘ದೊಡ್ಮನೆ ಹುಡ್ಗಿ‌’ ಧನ್ಯ ರಾಮ್ ಕುಮಾರ್ ನಟನೆಯ ‘ಚೌಕಿದಾರ್’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಚೌಕಿದಾರ್‌’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ನಿಧಾನವಾಗಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಸಿನಿಪ್ರಿಯರ ಗಮನ ಸೆಳೆಯುವ ಕಸರತ್ತು ನಡೆಸುತ್ತಿದೆ. ಈಗಾಗಲೇ ‘ಚೌಕಿದಾರ್‌’ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿ, ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಇದೀಗ ಚಿತ್ರತಂಡ ‘ಚೌಕಿದಾರ್‌’ ಚಿತ್ರದ ಮೂರನೇ ಹಾಡನ್ನು ಬಿಡುಗಡೆ ಮಾಡಿದೆ.

‘ಚೌಕಿದಾರ’ನ ಮೆಲೋಡಿ ಲವ್‌ ಟ್ರ್ಯಾಕ್‌

ಇನ್ನು ಬಿಡುಗಡೆಯಾಗಿರುವ ‘ಚೌಕಿದಾರ್‌’ ಚಿತ್ರದ ಮೂರನೇ ಹಾಡು ಮೆಲೋಡಿ ಲವ್‌ ಟ್ರ್ಯಾಕ್‌ ಆಗಿದೆ. ‘ಇಷ್ಟವಾದೆ ಇಷ್ಟ ಆದೆ ನೀನು… ನನಗೆ ಯಾಕೆ ಇಷ್ಟು ಬೇಗ’ ಎಂಬ ಸಾಲುಗಳಿಂದ ಶುರುವಾಗುವ ಈ ಗೀತೆಗೆ ಪ್ರಮೋದ್‌ ಮರವಂತೆ ಸಾಹಿತ್ಯ ರಚಿಸಿದ್ದಾರೆ. ಸಂಗೀತ ನಿರ್ದೇಶಕ ಸಚಿನ್‌ ಬಸ್ರೂರು ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಗೀತೆಗೆ ಸಚಿನ್‌ ಬಸ್ರೂರು ಮತ್ತು ಪೃಥ್ವಿ ಭಟ್‌ ಧ್ವನಿಯಾಗಿದ್ದಾರೆ. ಯುವ ಪ್ರೇಮಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಹಾಡನ್ನು ಚಿತ್ರಿಸಲಾಗಿದೆ.

ಕೇಳೋದಕ್ಕೆ ಮೆಲೋಡಿಯಾಗಿರುವ ‘ಚೌಕಿದಾರ್‌’ನ ಮೂರನೇ ಗೀತೆ ನಿಧಾನವಾಗಿ ಮೆಲೋಡಿ ಕೇಳುಗರ ಮನ ಸೆಳೆಯುವಂತಿದೆ. ‘ಎಂ.ಆರ್.ಟಿ ಮ್ಯೂಸಿಕ್‌’ ಯು-ಟ್ಯೂಬ್‌ ಚಾನೆಲ್‌ನಲ್ಲಿ ‘ಚೌಕಿದಾರ್‌’ ಚಿತ್ರದ ಈ ಗೀತೆ ಬಿಡುಗಡೆಯಾಗಿ ಹೊರಬಂದಿದೆ. ಕೇಳೋದಕ್ಕೆ ಇಂಪಾಗಿರುವ ಈ ಗೀತೆ, ಇದೀಗ ನಿಧಾನವಾಗಿ ಶೋಶಿಯಲ್‌ ಮೀಡಿಯಾಗಳಲ್ಲಿ ಕೇಳುಗರನ್ನು ಗುನುಗುಡುವಂತೆ ಮಾಡುತ್ತಿದೆ.

‘ಚೌಕಿದಾರ್’ ಸಿನೆಮಾದ ‘ಇಷ್ಟ ಆದೆ‌ ನೀನು…’ ಹಾಡಿನ ಲಿರಿಕಲ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಶೀಘ್ರದಲ್ಲಿಯೇ ತೆರೆಗೆ ಬರುವ ತವಕದಲ್ಲಿ ‘ಚೌಕಿದಾರ್’

ಈ ಹಿಂದೆ ಶ್ರೀಮುರಳಿ ಅಭಿನಯದ ‘ರಥಾವರ’ ಸಿನೆಮಾವನನ್ನು ನಿರ್ದೇಶಿಸಿದ್ದ ಚಂದ್ರಶೇಖರ ಬಂಡಿಯಪ್ಪ ಕಥೆ ಬರೆದು ‘ಚೌಕಿದಾರ್’ ಸಿನೆಮಾವನ್ನು ನಿರ್ದೇಶನ‌ ಮಾಡಿದ್ದಾರೆ. ಹಿರಿಯ ನಟ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಿರಿಯ ನಟಿ ಶ್ವೇತಾ, ಸುಧಾರಾಣಿ, ಧರ್ಮ, ‘ಬಿಗ್ ಬಾಸ್’ ಖ್ಯಾತಿಯ ಗಿಲ್ಲಿ ನಟ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

‘ವಿ. ಎಸ್. ಎಂಟರ್ಟೈನ್ಮೆಂಟ್’ ಬ್ಯಾನರ್‌ನಡಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ನಿಂದಲೂ ‘ಯು/ಎ’ ಸರ್ಟಿಫಿಕೇಟ್ ಸಿಕ್ಕಿದೆ. ಸದ್ಯ ಭರದಿಂದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿರುವ ಚಿತ್ರತಂಡ, ಶೀಘ್ರದಲ್ಲಿಯೇ ‘ಚೌಕಿದಾರ್‌’ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವ ತಯಾರಿಯಲ್ಲಿದೆ.

Related Posts

error: Content is protected !!