ಆ್ಯಕ್ಷನ್ ಪ್ಯಾಕ್ಡ್ ‘ವೃಷಭ’ ಸಿನೆಮಾ ಟ್ರೇಲರ್ ಔಟ್…
ಹೊರಬಂತು ‘ವೃಷಭ’ ಚಿತ್ರದ ಟ್ರೇಲರ್
‘ವೃಷಭ’ ಚಿತ್ರದ ಟ್ರೇಲರಿನಲ್ಲಿ ತಂದೆ-ಮಗನ ಅಪರೂಪದ ಸಾಹಸಗಾಥೆ…
ಮೋಹನ್ ಲಾಲ್ ಹೊಸಚಿತ್ರ ‘ವೃಷಭ’ ಬಿಡುಗಡೆಗೆ ರೆಡಿ
ಕನ್ನಡ ಚಿತ್ರರಂಗದ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್-ಕಟ್ ಹೇಳಿರುವ ‘ವೃಷಭ’ ಸಿನೆಮಾ ತೆರೆಗೆ ಬರಲು ತಯಾರಾಗಿದೆ. ಸದ್ಯ ‘ವೃಷಭ’ ಚಿತ್ರದ ಪ್ರಚಾರ ಕಾರ್ಯಗಳನ್ನು ಭರ್ಜರಿಯಾಗಿ ನಡೆಸುತ್ತಿರುವ ಚಿತ್ರತಂಡ, ಇದೀಗ ‘ವೃಷಭ’ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಕೇರಳದ ಕೊಚ್ಚಿಯಲ್ಲಿ ಅದ್ದೂರಿಯಾಗಿ ‘ವೃಷಭ’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಲೆಯಾಳಂ, ತಮಿಳು, ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ‘ವೃಷಭ’ ಚಿತ್ರದ ಟ್ರೇಲರ್ ಅನ್ನು ಹೊರತರಲಾಯಿತು.
ಹೇಗಿದೆ ‘ವೃಷಭ’ ಚಿತ್ರದ ಟ್ರೇಲರ್..?
ಇನ್ನು ಬಿಡುಗಡೆಯಾಗಿರುವ ‘ವೃಷಭ’ ಚಿತ್ರವು ತಂಗೆ ಮತ್ತು ಮಗನನ ಭಾಂದವ್ಯದ ಕಥೆಯನ್ನು ಹೊತ್ತಿದೆ. ಪ್ರೀತಿ, ವಿಧಿ ಮತ್ತು ತ್ಯಾಗದ ಸುತ್ತ ‘ವೃಷಭ’ ಚಿತ್ರದ ಕಥೆ ಸಾಗುತ್ತದೆ. ‘ವೃಷಭ’ ಚಿತ್ರದಲ್ಲಿ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಡಬ್ಬಲ್ ರೋಲ್ ನಲ್ಲಿ ಅಭಿನಯಿಸಿದ್ದಾರೆ. ಫ್ಲ್ಯಾಷ್‌ಬ್ಯಾಕ್‌ನಲ್ಲಿ, ಅವರು ರಾಜ ವಿಜಯೇಂದ್ರ ‘ವೃಷಭ’ನಾಗಿ ಮತ್ತು ಪ್ರಸ್ತುತ ಯಶಸ್ವಿ ಉದ್ಯಮಿಯಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ನಟ ಸಮರ್ಜಿತ್ ಲಂಕೇಶ್ ‘ವೃಷಭ’ ಚಿತ್ರದಲ್ಲಿ ಮೋಹನ್ ಲಾಲ್ ಅವರ ಮಗನಾಗಿ ನಟಿಸಿದ್ದಾರೆ. ತನ್ನ ತಂದೆಯನ್ನು ರಕ್ಷಿಸಲು ವಿಧಿ ಮತ್ತು ಭಯದೊಂದಿಗೆ ಹೇಗೆ ಸಮರ್ಜಿತ್ ಹೋರಾಡುತ್ತಾರೆ ಎಂಬುದನ್ನು ಟ್ರೇಲರಿನಲ್ಲಿ ಹೇಳಲಾಗಿದೆ. ‘ವೃಷಭ’ ಟ್ರೇಲರ್ ಹೈ- ಆಕ್ಷನ್ ಅಂಶಗಳಿಂದ ಕೂಡಿದ್ದು, ನಟಿ ರಾಗಿಣಿ ದ್ವಿವೇದಿ, ನಯನ್ ಸಾರಿಕಾ, ಅಜಯ್, ಗರುಡ ರಾಮ್ ಮೊದಲಾದ ಕಲಾವಿದರು ‘ವೃಷಭ’ ಟ್ರೇಲರ್ ನಲ್ಲಿ ಅಬ್ಬರಿಸಿದ್ದಾರೆ.
‘ವೃಷಭ’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಇದೇ 2025ರ ಡಿ. 25ಕ್ಕೆ ‘ವೃಷಭ’ ತೆರೆಗೆ
ಸದ್ಯ ಭರದಿಂದ ‘ವೃಷಭ’ ಚಿತ್ರದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿರುವ ಚಿತ್ರತಂಡ ಇದೇ 2025ರ ಡಿಸೆಂಬರ್ 25ರಂದು ‘ವೃಷಭ’ ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ‘ಕನೆಕ್ಟ್ ಮೀಡಿಯಾ’ ಮತ್ತು ‘ಬಾಲಾಜಿ ಟೆಲಿಫಿಲ್ಮ್ಸ್’, ‘ಅಭಿಷೇಕ್ ಎಸ್. ವ್ಯಾಸ್ ಸ್ಟುಡಿಯೋಸ್’ ಜೊತೆಗೂಡಿ ಪ್ರಸ್ತುತಪಡಿಸುತ್ತಿರುವ ‘ವೃಷಭ’ ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಕಪೂರ್, ಸಿ. ಕೆ. ಪದ್ಮ ಕುಮಾರ್, ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್. ವ್ಯಾಸ್, ಪ್ರವೀರ್ ಸಿಂಗ್, ವಿಶಾಲ್ ಗುರ್ನಾನಿ ಮತ್ತು ಜೂಹಿ ಪರೇಖ್ ಮೆಹ್ತಾ ಸೇರಿ ನಿರ್ಮಿಸಿದ್ದಾರೆ. ಡಿಸೆಂಬರ್ 25ಕ್ಕೆ ವಿಶ್ವದಾದ್ಯಂತ ‘ವೃಷಭ’ ಚಿತ್ರ ಮಲೆಯಾಳಂ, ತಮಿಳು, ಹಿಂದಿ, ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ.















