Video

‘ರಾಕ್ಷಸ’ ವೆಬ್ ಸರಣಿಯ ಟ್ರೇಲರ್ ಔಟ್‌

ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಝಲಕ್‌ ಹೊತ್ತ ‘ರಾಕ್ಷಸ’ ಟ್ರೇಲರ್‌

‘Zee5’ನಲ್ಲಿ ಹೊಸ ವೆಬ್‌ ಸರಣಿಯ ಬಿಡುಗಡೆಗೆ ದಿನಗಣನೆ… 

ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾದ ‘ರಾಕ್ಷಸ’ 

ಈಗಾಗಲೇ ಕನ್ನಡದಲ್ಲಿ ಒಂದಷ್ಟು ವೆಬ್‌ ಸರಣಿಯ ಮೂಲಕ ಕನ್ನಡ ಓಟಿಟಿ ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಜೀ5’ (Zee5) ಈಗ ‘ರಾಕ್ಷಸ’ ಎಂಬ ಮತ್ತೊಂದು ವೆಬ್ ಸರಣಿಯನ್ನು ಪ್ರೇಕ್ಷಕರ ಮುಂದೆ ತರಲು ತಯಾರಾಗಿದೆ. ಇದೇ 2026ರ ಫೆಬ್ರವರಿ 20ರಿಂದ ‘ಜೀ5’ನಲ್ಲಿ ‘ರಾಕ್ಷಸ’ ವೆಬ್‌ ಸರಣಿ ಪ್ರಸಾರವಾಗಲಿದ್ದು, ಈ ವೆಬ್ ಸರಣಿಯು ಒಂದು ಕ್ರೈಂ-ಥ್ರಿಲ್ಲರ್ ಕಥೆಯಾಗಿದ್ದು ಒಂದು ಘಟನೆಯ ಸುತ್ತ ನಡೆಯುವ ವಿವಿಧ ರೋಚಕ ಘಟನೆಗಳನ್ನು ಆಧರಿಸಿರುತ್ತದೆ. ಮಲಪ್ರಭಾ ನದಿಯ ದಂಡೆಯ ಸುತ್ತ ನಡೆಯುವ ಆಶ್ಚರ್ಯಕರ ಘಟನೆಗಳನ್ನು 7 ಸಂಚಿಕೆಗಳಲ್ಲಿ ಈ‌ ವೆಬ್ ಸರಣಿಯು ಹೇಳುತ್ತದೆ.

‘ರಾಕ್ಷಸ’ನ ಸಸ್ಪೆನ್ಸ್‌ ಕ ಕ್ರೈಂ-ಥ್ರಿಲ್ಲರ್‌ ಸ್ಟೋರಿ! 

ಈ ಟ್ರೇಲರ್‌ ಸಬ್ ಇನ್ಸ್ಪೆಕ್ಟರ್ ಹನುಮಪ್ಪ ಎಂಬ ಪಾತ್ರವನ್ನು ಪರಿಚಯಿಸುತ್ತದೆ. ಸವದತ್ತಿಯ ಎಲ್ಲಮ್ಮನ ಗುಡಿಯ ಬಳಿ‌ ಮೊಸಳೆ ದಾಳಿಗೆ ಒಳಗಾಗುವ ಸರಣಿ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಹನುಮಪ್ಪ ಬರುತ್ತಾನೆ. ಈ ಗೋಜಲಾದ ಪ್ರಕರಣಗಳ ಚಕ್ರವ್ಯೂಹವನ್ನು ಭೇದಿಸಲು ಬರುವ‌ ಹನುಮಪ್ಪನಿಗೆ ಆಗುವ ತಳಮಳ,‌ ಎದುರಾಗುವ ಸಮಸ್ಯೆಗಳು, ಇದು ಕೇವಲ ಒಂದು ಅಪರಾಧವೇ ಅಥವಾ ಬೇರೆ ಯಾವುದಾದರೂ ಮರ್ಮ ಅಡಗಿದೆಯೇ,‌ ಇವೆಲ್ಲವನ್ನೂ ಕಾದು ನೋಡಬೇಕಿದೆ.

ಸುಹಾನ್ ಪ್ರಸಾದ್ ಮತ್ತು ಅಪೂರ್ವ ಅವರ ಬರವಣಿಗೆಯಲ್ಲಿ ಮೂಡಿ ಬರುತ್ತಿರುವ ಈ ವೆಬ್ ಸರಣಿಯಲ್ಲಿ ವಿಜಯ್ ರಾಘವೇಂದ್ರ,‌ ಮಯೂರಿ, ಅವಿನಾಶ್,‌ ಮಾಳವಿಕಾ, ಅಪ್ಪಣ್ಣ,‌ಅಭಿಜೀತ್ ಮುಂತಾದವರು ನಟಿಸಿರುತ್ತಾರೆ. ಇದಕ್ಕೆ ಸುಹಾನ್ ಪ್ರಸಾದ್ ಆಕ್ಷನ್-ಕಟ್ ಹೇಳಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಅವರ ‘ತರುಣ್ ಸುಧೀರ್ ಕ್ರಿಯೇಟಿವ್ಸ್’ ಲಾಂಛನದಲ್ಲಿ ಈ ವೆಬ್ ಸರಣಿಯು ನಿರ್ಮಾಣಗೊಂಡಿದೆ. ಇದು ತರುಣ್ ಸುಧೀರ್ ಅವರ ಮೊದಲ ವೆಬ್ ಸರಣಿಯಾಗಿದೆ.

‘ರಾಕ್ಷಸ’ ವೆಬ್ ಸರಣಿಯ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

‘ರಾಕ್ಷಸ’ನ ಮೇಲೆ ‘ಚಿನ್ನಾರಿ ಮುತ್ತ’ನಿಗೆ ನಿರೀಕ್ಷೆ…

ಇನ್ನು ‘ರಾಕ್ಷಸ’ ವೆಬ್‌ ಸರಣಿಯ ಟ್ರೇಲರ್‌ ಕುರಿತು ಮಾತನಾಡಿದ ನಟ ವಿಜಯ್ ರಾಘವೇಂದ್ರ, “ರಾಕ್ಷಸ ಒಂದು ವಿಶೇಷವಾದ ಕಥೆಯಾಗಿದೆ. ಅಷ್ಟು ಸುಲಭವಾಗಿ ಇದು ತನ್ನ ಸಸ್ಪೆನ್ಸ್ ಅಂಶಗಳನ್ನು ಬಿಟ್ಟುಕೊಡುವುದಿಲ್ಲ. ನನಗೆ ಈ ಕಥೆಯಲ್ಲಿರುವ ಮೌನ, ಆಡದ ಮಾತುಗಳು, ಗೋಜಲಾದ ರಹಸ್ಯಗಳು ಇಷ್ಟವಅಯಿತು. ಇವೆಲ್ಲವೂ ಹೇಗೆ ಹನುಮಪ್ಪ ಎಂಬ ಪಾತ್ರದ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಎಂಬುದೇ ಈ ಸರಣಿಯ ಕೇಂದ್ರ ಬಿಂದು. ಈಗಾಗಲೇ ಈ ರೋಚಕ ಕಥೆಯ ತುಣುಕು ಟ್ರೇಲರ್ ನಲ್ಲಿ ಬಿಡುಗಡೆ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ’ ಎಂದಿದ್ದಾರೆ.

‘ರಾಕ್ಷಸ’ನ ಕುರಿತು ಮಾತನಾಡಿದ ನಿರ್ಮಾಪಕ ತರುಣ್ ಸುಧೀರ್, ‘ವಿಭಿನ್ನ ಕಥೆಗಳನ್ನು ನಿರ್ಮಾಣ ಮಾಡಬೇಕೆಂಬುದು ನನ್ನ ಆಸೆ. ಅದೇ ನಿಟ್ಟಿನಲ್ಲಿ ‘ರಾಕ್ಷಸ’ ನನ್ನ ಗಮನಕ್ಕೆ ಬಂತು. ಈ ಕಥೆಯು ಉತ್ತರ ಕರ್ನಾಟಕದ ಛಾಯೆಯನ್ನು ಹೊಂದಿರುತ್ತದೆ. ಇದು ಎಲ್ಲರ ಗಮನ ಸೆಳೆಯುವುದರಲ್ಲಿ‌ ಯಾವುದೇ ಸಂಶಯವಿಲ್ಲ. ಮಲಪ್ರಭಾ ನದಿಯ ರಹಸ್ಯವನ್ನು ರೋಚಕವಾಗಿ ಕಥೆ ಬಿಡಿಸಲಿದೆ’ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಈಗಾಗಲೇ ‘ಅಯ್ಯನ ಮನೆ’, ‘ಮಾರಿಗಲ್ಲು’ ವೆಬ್‌ ಸರಣಿಯ ಮೂಲಕ ಕಿರುತೆರೆ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಜೀ5’ ಇದೀಗ ‘ರಾಕ್ಷಸ’ ವೆಬ್‌ ಸರಣಿಯಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನ ಮುಟ್ಟುತ್ತದೆ ಎಂಬುದು ಇದೇ ಫೆಬ್ರವರಿ ಅಂತ್ಯಕ್ಕೆ ಗೊತ್ತಾಗಲಿದೆ.

Related Posts

error: Content is protected !!