ನಾನಿ ನಟನೆಯ ‘ದಿ ಪ್ಯಾರಡೈಸ್’ ರಿಲೀಸ್ ಡೇಟ್ ಫಿಕ್ಸ್
ಆಗಸ್ಟ್ 21ಕ್ಕೆ ನಾನಿ ನಟನೆಯ ‘ದಿ ಪ್ಯಾರಡೈಸ್’ ತೆರೆಗೆ
ಆರು ತಿಂಗಳ ಮುಂಚೆಯೇ ‘ದಸರಾ’ ಜೋಡಿಯ ‘ದಿ ಪ್ಯಾರಡೈಸ್’ ರಿಲೀಸ್ ಡೇಟ್ ಅನೌನ್ಸ್
ಬಹುಭಾಷೆಗಳಲ್ಲಿ ತೆರೆಗೆ ಬರುತ್ತಿದೆ ‘ದಿ ಪ್ಯಾರಡೈಸ್’
ಸೌಥ್ ಸಿನಿ ದುನಿಯಾದ ‘ನ್ಯಾಚುರಲ್ ಸ್ಟಾರ್’ ಖ್ಯಾತಿಯ ನಾನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ ‘ದಿ ಪ್ಯಾರಡೈಸ್’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಸದ್ಯ ‘ದಿ ಪ್ಯಾರಡೈಸ್’ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಇದರ ನಡುವೆಯೇ ಚಿತ್ರತಂಡ
‘ದಿ ಪ್ಯಾರಡೈಸ್’ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಇದೇ 2026ರ ಆಗಸ್ಟ್ 21 ರಂದು ‘ದಿ ಪ್ಯಾರಡೈಸ್’ ಚಿತ್ರ ವಿಶ್ವಾದ್ಯಂತ ಏಕಕಾಲಕ್ಕೆ ಅದ್ಧೂರಿಯಾಗಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.
‘ದಿ ಪ್ಯಾರಡೈಸ್’ನಲ್ಲಿ ಕೊನೆಯ ಹಂತದ ಶೂಟಿಂಗ್…
ಚಿತ್ರತಂಡದ ಮೂಲಗಳ ಪ್ರಕಾರ, ‘ದಿ ಪ್ಯಾರಡೈಸ್’ ಸಿನೆಮಾದ ಅಂತಿಮ ಹಂತದ ಶೂಟಿಂಗ್ ಸದ್ಯ ಭರದಿಂದ ಸಾಗುತ್ತಿದೆ. ನಾನಿಯವರ ಇಂಟ್ರೂಡಕ್ಷನ್ ಸಾಂಗ್ ಚಿತ್ರೀಕರಣ ನಡೆಯುತ್ತಿದೆ. ನೂರಾರು ಡ್ಯಾನ್ಸರ್ ಬೃಹತ್ ಸೆಟ್‌ನಲ್ಲಿ ಈ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ, ಸುಧನ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ‘ದಿ ಪ್ಯಾರಡೈಸ್’ ಸಿನೆಮಾದ ಈ ಹಾಡು ಅದ್ಧೂರಿಯಾಗಿ ಮೂಡಿಬರುತ್ತಿದೆ. ಇದೇ ಮಾರ್ಚ್ ವೇಳೆಗೆ ‘ದಿ ಪ್ಯಾರಡೈಸ್’ ಸಿನೆಮಾದ ಚಿತ್ರೀಕರಣ ಪೂರ್ಣವಾಗಲಿದೆ. ಜೂನ್ ವೇಳೆಗೆ ‘ದಿ ಪ್ಯಾರಡೈಸ್’ ಚಿತ್ರದ ಆಡಿಯೋ ಬಿಡುಗಡೆಯನ್ನು ಅದ್ಧೂರಿಯಾಗಿ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
‘ದಿ ಪ್ಯಾರಡೈಸ್’ ರಿಲೀಸ್ ಡೇಟ್ ಹಿಂದಿನ ಲೆಕ್ಕಾಚಾರ!
ಇನ್ನು ‘ದಿ ಪ್ಯಾರಡೈಸ್’ ಚಿತ್ರ ಸೆಟ್ಟೇರುವ ಮುನ್ನವೇ ಸಾಕಷ್ಟು ಗಮನ ಸೆಳೆದಿತ್ತು. 2026ರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾಗಳ ಸಾಲಿನಲ್ಲಿ ‘ದಿ ಪ್ಯಾರಡೈಸ್’ ಕೂಡ ಒಂದಾಗಿ ಸ್ಥಾನ ಪಡೆದುಕೊಂಡಿರುವುದರಿಂದ, ‘ದಿ ಪ್ಯಾರಡೈಸ್’ ಚಿತ್ರದ ಚಿತ್ರೀಕರಣ ಮುಗಿಯುವ ಮುನ್ನವೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಸಹಜವಾಗಿಯೇ ಗರಿಗೆದರಿದೆ. 
ಹೀಗಾಗಿ, ಚಿತ್ರತಂಡ ಸುಮಾರು ಆರು ತಿಂಗಳ ಮುಂಚೆಯೇ ‘ದಿ ಪ್ಯಾರಡೈಸ್’ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದು, ಬಿಡುಗಡೆ ಮುಂಚಿನ ವ್ಯವಹಾರಕ್ಕೆ ತಯಾರಾಗಿದೆ ಎಂದು ಹೇಳಲಾಗುತ್ತಿದೆ.
‘ದಿ ಪ್ಯಾರಡೈಸ್’ನಲ್ಲಿ ಮತ್ತೊಮ್ಮೆ ‘ದಸರಾ’ ಜೋಡಿಯ ಜುಗಲ್ಬಂದಿ
ಈ ಹಿಂದೆ ‘ದಸರಾ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ನಿರ್ದೇಶಕ ಶ್ರೀಕಾಂತ್ ಒಡೆಲಾ ಸಾರಥ್ಯದಲ್ಲಿ ‘ದಿ ಪ್ಯಾರಡೈಸ್’ ಸಿನೆಮಾ ತಯಾರಾಗುತ್ತಿದೆ. ‘ದಿ ಪ್ಯಾರಡೈಸ್’ ಚಿತ್ರದಲ್ಲಿ ನಾನಿ ಅವರೊಂದಿಗೆ ಮೋಹನ್ ಬಾಬು, ರಾಘವ್ ಜುಯಾಲ್, ಸಂಪೂರ್ಣೇಶ್ ಬಾಬು ಹೀಗೆ ದೊಡ್ಡ ಕಲಾವಿದರ ತಾರಾಗಣವೇ ಇದೆ.
ಈ ಹಿಂದೆ ‘ದಸರಾ’ ಸಿನೆಮಾ ನಿರ್ಮಿಸಿದ್ದ ಸುಧಾಕರ್ ಚೆರುಕುರಿ ಮತ್ತೊಮ್ಮೆ ನಾನಿ ಹಾಗೂ ಶ್ರೀಕಾಂತ್ ಒಡೆಲಾಗೆ ‘ದಿ ಪ್ಯಾರಡೈಸ್’ ಸಿನೆಮಾದಲ್ಲಿ ಸಾಥ್ ಕೊಡುತ್ತಿದ್ದಾರೆ. ‘ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್’ ಬ್ಯಾನರ್ ನಡಿ ಬಹಳ ಅದ್ಧೂರಿಯಾಗಿ ‘ದಿ ಪ್ಯಾರಡೈಸ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ರಾಕ್ ಸ್ಟಾರ್’ ಅನಿರುದ್ಧ್ ರವಿಚಂದ್ರರ್ ಸಂಗೀತ ನಿರ್ದೇಶನ, ಜಿ. ಕೆ. ವಿಷ್ಣು ಛಾಯಾಗ್ರಹಣ, ನವೀನ್ ನೂಲಿ ಸಂಕಲನ ‘ದಿ ಪ್ಯಾರಡೈಸ್’ ಸಿನೆಮಾಕ್ಕಿದೆ.















