ನಿಖಿಲ್ ಸಿದ್ದಾರ್ಥ್ ನಟನೆಯ ‘ಸ್ವಯಂಭು’ ಟೀಸರ್ ರಿಲೀಸ್
ನಿಖಿಲ್ ಸಿದ್ದಾರ್ಥ್ ನಟನೆಯ ‘ಸ್ವಯಂಭು’ ಟೀಸರ್ ಅನಾವರಣ
ಅಭಿಮಾನಿಗಳಿಗೆ ಮಹಾಶಿವರಾತ್ರಿ ಹಬ್ಬದಂದು ‘ಸ್ವಯಂಭು’ ಟೀಸರ್ ಗಿಫ್ಟ್
ಶೀಘ್ರದಲ್ಲಿಯೇ ‘ಸ್ವಯಂಭು’ ತೆರೆಗೆ 
ತೆಲುಗು ಚಿತ್ರರಂಗದ ಉದಯೋನ್ಮುಖ ನಟ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಮತ್ತೊಂದು ಬಿಗ್ ಬಜೆಟ್‌ನ ಬಹು ನಿರೀಕ್ಷಿತ ಸಿನೆಮಾ ‘ಸ್ವಯಂಭು’ ತೆರೆಗೆ ಬರಲು ತಯಾರಾಗಿದೆ. ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ‘ಸ್ವಯಂಭು’ ಸಿನೆಮಾದ ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ಶಿವನು ಶ್ರೀರಾಮನಿಗೆ ನೀಡುವ ರಾಜದಂಡ ಸೆಂಗೋಲ್ ನಿಂದ ಶುರುವಾಗುವ ‘ಸ್ವಯಂಭು’ ಸಿನೆಮಾದ ಟೀಸರ್ ಪ್ರೇಕ್ಷಕರಿಗೆ ಸಖತ್ ವಿಷ್ಯುವಲ್ ಟ್ರೀಟ್ ಕೊಡುತ್ತದೆ. ಕ್ರಿ. ಶ. 985 ಹಿನ್ನೆಲೆಯಲ್ಲಿ ಸಾಗುವ ಕಥೆಯಲ್ಲಿ ಯೋಧನಾಗಿ ನಿಖಿಲ್ ಅಬ್ಬರಿಸಿದ್ದು, ಭಾರತೀಯ ಇತಿಹಾಸ ಹಾಗೂ ಪುರಾಣದ ಸುತ್ತ ಸಿನೆಮಾ ಸಾಗುತ್ತದೆ. ‘ಸ್ವಯಂಭು’ ಸಿನೆಮಾದ ಟೀಸರ್ ತುಂಬ ಅದ್ಧೂರಿಯಾಗಿ ಮೂಡಿಬಂದಿದ್ದು, ಚಿತ್ರ ಕೂಡ ಅಷ್ಟೇ ಅದ್ಧೂರಿಯಾಗಿ ಮೂಡಿಬಂದಿರಬಹುದು ಎಂಬ ಅಭಿಪ್ರಾಯ ತೆಲುಗು ಪ್ರೇಕ್ಷಕರಿಂದ ವ್ಯಕ್ತವಾಗುತ್ತಿದೆ.
‘ಪಿಕ್ಸೆಲ್ ಸ್ಟುಡಿಯೋ’ ಮೂಲಕ ಭುವನ್ ಹಾಗೂ ಶ್ರೀಕರ್ ‘ಸ್ವಯಂಭು’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಟ್ಯಾಗೋರೆ ಮಧು ಪ್ರಸ್ತುತಪಡಿಸುತ್ತಿದ್ದಾರೆ. ‘ಸ್ವಯಂಭು’ ಎಂದರೆ ಸ್ವಯಂ ಹುಟ್ಟು ಎಂದರ್ಥ. ಸಹಸ್ರಮಾನಗಳ ಹಿಂದಿನ ಕಥೆ ಒಳಗೊಂಡಿರುವ ‘ಸ್ವಯಂಭು’ ಸಿನೆಮಾ ನಿಖಿಲ್ ಸಿದ್ದಾರ್ಥ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರವಾಗಿದೆ. ‘ಸ್ವಯಂಭು’ ಚಿತ್ರಕ್ಕೆ ಕೆ. ಕೆ. ಸೆಂಥಿಲ್ ಕುಮಾರ್ ಛಾಯಾಗ್ರಹಣವಿದ್ದು, ಕನ್ನಡಿಗ ರವಿ ಬಸ್ರೂರ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ವಿಜಯ್ ಕಾಮಿಸೆಟ್ಟಿ ಸಂಭಾಷಣೆಯನ್ನು ಬರೆದಿದ್ದಾರೆ. ತಮ್ಮಿರಾಜು ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಭರತ್ ಕೃಷ್ಣಮಾಚಾರಿ ಆಕ್ಷನ್-ಕಟ್ ಹೇಳಿದ್ದಾರೆ.
‘ಸ್ವಯಂಭು’ ಚಿತ್ರದ ಟೀಸರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ಸ್ವಯಂಭು’ ಅಬ್ಬರಕ್ಕೆ ಟಾಲಿವುಡ್ ಅಂಗಳ ರೆಡಿ..!
‘ಸ್ವಯಂಭು’ ಸಿನೆಮಾದಲ್ಲಿ ನಾಯಕ ನಟ ನಿಖಿಲ್ ಸಿದ್ಧಾರ್ಥ್ ಅವರಿಗೆ ಸಂಯುಕ್ತಾ ನಾಯಕ ನಟಿಯಾಗಿ ನಟಿಸುತ್ತಿದ್ದು, ನಭಾ ನಟೇಶ್ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ದೊಡ್ಡ ಕಲಾವಿದರು ಮತ್ತು ಕಲಾವಿದರ ತಾರಾಗಣಣವೇ ‘ಸ್ವಯಂಭು’ ಸಿನೆಮಾದಲ್ಲಿದೆ. ಅಂದಹಾಗೆ, ‘ಸ್ವಯಂಭು’ ಚಿತ್ರವು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಚೈನೀಸ್, ಸ್ಪಾನಿಷ್ ಹಾಗೂ ಅರೇಬಿಕ್ ಭಾಷೆಯಲ್ಲಿ ತೆರೆಗೆ ತರಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ‘ಸ್ವಯಂಭು’ ಸಿನೆಮಾ ನಾಯಕ ನಟ ನಿಖಿಲ್ ಸಿದ್ದಾರ್ಥ್ ಅವರ ಸಿನಿ ಕೆರಿಯರ್‌ನಲ್ಲಿಯೇ ಸದ್ಯದ ಮಟ್ಟಿಗೆ ಬಹು ದೊಡ್ಡ ಬಜೆಟ್ ಸಿನೆಮಾ ಎನ್ನಲಾಗುತ್ತಿದ್ದು, ಹಾಗಾಗಿ ‘ಸ್ವಯಂಭು’ ಸಿನೆಮಾದ ಗೆಲುವು ನಾಯಕ ನಟ ನಿಖಿಲ್ ಸಿದ್ಧಾರ್ಥ್ ಪಾಲಿಗೆ ಬಹಳ ಮುಖ್ಯ ಎನ್ನಲಾಗುತ್ತಿದೆ. ಸದ್ಯದ ಮಟ್ಟಿಗೆ ಬಿಡುಗಡೆಯಾಗಿರುವ ‘ಸ್ವಯಂಭು’ ಸಿನೆಮಾದ ಟೀಸರ್ ಟಾಲಿವುಡ್ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಟೀಸರ್ ನೋಡಿದವರು ಸಿನಿಮಾದ ಮೇಕಿಂಗ್ ಮತ್ತು ನಾಯಕ ನಟ ನಿಖಿಲ್ ಸಿದ್ದಾರ್ಥ್ ಅಭಿನಯದ ಬಗ್ಗೆ ನಿರೀಕ್ಷೆಯ ಮಾತುಗಳನ್ನನಾಡುತ್ತಿದ್ದಾರೆ. ಸದ್ಯ ‘ಸ್ವಯಂಭು’ ಸಿನೆಮಾದ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೇ ಬೇಸಿಗೆಯಲ್ಲಿ ‘ಸ್ವಯಂಭು’ ಸಿನೆಮಾವನ್ನು ಬಹುಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ತರುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ‘ಸ್ವಯಂಭು’ ಸಿನೆಮಾದ ಮೂಲಕ ನಾಯಕ ನಟ ನಿಖಿಲ್ ಸಿದ್ದಾರ್ಥ್ ತೆಲುಗು ಚಿತ್ರರಂಗದಲ್ಲಿ ಮತ್ತೊಂದು ಸೂಪರ್ ಹಿಟ್ ಸಿನೆಮಾ ಈ ವರ್ಷ ದಾಖಲಿಸುತ್ತಾರಾ? ನಿಖಿಲ್ ಓಟಕ್ಕೆ ‘ಸ್ವಯಂಭು’ ಸಿನೆಮಾದ ಮೂಲಕ ಮತ್ತಷ್ಟು ವೇಗ ಸಿಗಲಿದೆಯಾ? ಎಂಬುದು ಶೀಘ್ರದಲ್ಲಿಯೇ ಗೊತ್ತಾಗಲಿದೆ.















