Video

‘ಟಾಕ್ಸಿಕ್’ ಸೆಕೆಂಡ್ ಟೀಸರ್ ಔಟ್‌

ಹೊರಬಂತು ‘ಟಾಕ್ಸಿಕ್’ ಚಿತ್ರದ ಮತ್ತೊಂದು ಟೀಸರ್‌

‘ರಾಕಿಂಗ್‌ ಸ್ಟಾರ್’ ಅಭಿನಯದ ‘ಟಾಕ್ಸಿಕ್’ ಚಿತ್ರದ ಎರಡನೇ ಟೀಸರ್‌ ರಿಲೀಸ್‌

ರೆಟ್ರೋ ಲುಕ್‌ನಲ್ಲಿ ಯಶ್‌ ಡಿಫರೆಂಟ್‌ ಎಂಟ್ರಿ

ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ‌ ನಟ ‘ರಾಕಿಂಗ್‌ ಸ್ಟಾರ್’ ಯಶ್‌ ಅಭಿನಯದ ‘ಟಾಕ್ಸಿಕ್’ ಚಿತ್ರದ ಮೊದಲ ಟೀಸರ್‌ ಸಾಕಷ್ಟು ಸೌಂಡ್‌ ಮಾಡಿದ್ದು, ನಿಮಗೆ ಗೊತ್ತಿರಬಹುದು. ಇದರ ಬೆನ್ನಲ್ಲೇ ‘ಟಾಕ್ಸಿಕ್’ ಸಿನೆಮಾದ ಟ್ರೇಲರ್ ಬಗ್ಗೆಯೂ ಜೋರಾಗಿ ಚರ್ಚೆ ನಡೆಯುವಾಗಲೇ, 2026ರ ಫೆ. 20ರಂದು ‘ಟಾಕ್ಸಿಕ್’ ಸಿನೆಮಾದ ಎರಡನೇ ಟೀಸರ್  ಬಿಡುಗಡೆ ಆಗಿದೆ.

ಈ ಮೊದಲು ರಿಲೀಸ್ ಆಗಿದ್ದ ‘ಟಾಕ್ಸಿಕ್’ ಸಿನೆಮಾದ ಟೀಸರ್ ಸೋಶಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು  ಹಲ್​ಚಲ್​ ಎಬ್ಬಿಸಿತ್ತು. ಲೈಂಗಿಕ ಕ್ರಿಯೆ ನಡೆಸೋ ದೃಶ್ಯವನ್ನು ಟೀಸರ್​​ನಲ್ಲಿ ತೋರಿಸಿದ್ದು ಅನೇಕರ ಕೋಪಕ್ಕೆ ಕಾರಣ ಆಯಿತು. ಈ ಸಂಬಂಧ ದೂರು ಕೂಡ ದಾಖಲಾಗಿತ್ತು. ಆದರೆ, ಅವ್ಯಾವುದು ‘ಟಾಕ್ಸಿಕ್’ ಟ್ರೇಲರ್​​ನ ತಡೆಯಲಿಲ್ಲ. ಮೊದಲು ಬಿಡುಗಡೆಯಾದ ‘ಟಾಕ್ಸಿಕ್’ ಚಿತ್ರದ ಟೀಸರ್ ಯು-ಟ್ಯೂಬ್ ಒಂದರಲ್ಲೇ 100 ಮಿಲಿಯನ್ ವೀಕ್ಷಣೆ ಕಂಡಿತು. ಈಗ ‘ಟಾಕ್ಸಿಕ್’ ಚಿತ್ರದ ಹೊಸ ಟೀಸರ್ ಮತ್ತಷ್ಟು ಗಮನ ಸೆಳೆಯುತ್ತಿದೆ. ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ಹೇಗಿರಬಹುದು ಎಂಬ ಕುತೂಹಲಕ್ಕೆ ‘ಟಾಕ್ಸಿಕ್’ ಚಿತ್ರದ ಎರಡನೇ ಟೀಸರ್‌ನಲ್ಲಿ ಇನ್ನಷ್ಟು ಸ್ಪಷ್ಟ ಚಿತ್ರಣ ಸಿಕ್ಕಿದೆ ಎನ್ನಲಾಗುತ್ತಿದೆ.

ಹೇಗಿದೆ ‘ಟಾಕ್ಸಿಕ್’ ಟೀಸರ್‌…?

ಯಶ್ ಅವರ ಎದುರು ಬಂದವರು ಉಡೀಸ್ ಆಗುವ ಸೂಚನೆ ‘ಟಾಕ್ಸಿಕ್’ ಸಿನೆಮಾದ ಟೀಸರ್ ನೋಡಿದವರಿಗೆ ಸಿಕ್ಕಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಟೀಸರ್​ಗಿಂತ ಈ ಟೀಸರ್ ತುಂಬಾನೇ ಭಿನ್ನವಾಗಿದೆ. ಯಶ್ ಅವರ ರಾ ಲುಕ್ ಮಾಸ್‌ ಆಡಿಯನ್ಸ್‌ ಗಮನ ಸೆಳೆಯುವಂತಿದೆ. ‘ಟಾಕ್ಸಿಕ್’ ಸಿನೆಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಟೀಸರ್​​ನಲ್ಲಿ ಯಶ್ ಯಂಗ್ ಲುಕ್​​ನಲ್ಲಿಯೂ ಕಾಣಿಸಿಕೊಂಡಿದ್ದು, ರಾಯನ (ಯಶ್) ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಯಶ್ ಅವರು ಸಖತ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್​​ನಲ್ಲಿ ಸಾಕಷ್ಟು ರಕ್ತ ಕೂಡ ಹರಿದಿದೆ.

‘ಟಾಕ್ಸಿಕ್’ ಸಿನೆಮಾದ ಎರಡನೇ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

‘ಈ ಸಲ ಯುದ್ಧನೇ ಬೇರೆ’ ಎಂಬ ಡೈಲಾಗ್ ಗಮನ ಸೆಳೆದಿದೆ. ‘ಟಾಕ್ಸಿಕ್’ ಟೀಸರ್ ನೋಡಿದವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಹಠ ಬಿಡೋ ಮಾತೇ ಇಲ್ಲ’ ಎಂಬುದನ್ನು ಯಶ್ ಸ್ಪಷ್ಟವಾಗಿ ಹೇಳಿದ್ದಾರೆ. ಇದು ‘ಧುರಂದರ್ 2’ ಚಿತ್ರಕ್ಕೆ ಕೊಟ್ಟ ಕೌಂಟರ್ ಎಂದು ಮಾತನಾಡಿಕೊಳ್ಳಲಾಗುತ್ತಿದೆ.

ವಿಂಟೆಂಟ್ ಲುಕ್‌ನಲ್ಲಿ ಯಶ್‌ ಮಿಂಚಿಂಗ್!

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಈ ಟೀಸರ್ ಲಕ್ಷ ಲಕ್ಷ ವೀಕ್ಷಣೆ ಕಾಣುತ್ತಿದೆ. ಯಶ್ ಅಭಿಮಾನಿಗಳಂತೂ ಹಬ್ಬ ಮಾಡುತ್ತಿದ್ದಾರೆ. ‘ಟಾಕ್ಸಿಕ್’ ಟೀಸರ್ ನೋಡಿ ರಾಕಿಂಗ್ ಸ್ಟಾರ್‌ ಫ್ಯಾನ್ಸ್ ಅಂತೂಫುಲ್‌ ಖುಷ್ ಆಗಿದ್ದಾರೆ. ‘ವಿಂಟೇಜ್ ಯಶ್ ಮರಳಿದ’ ಎಂದು ಸಂಭ್ರಮಿಸುತ್ತಿದ್ದಾರೆ. ‘ಟಾಕ್ಸಿಕ್’ ಟೀಸರ್​​ನಲ್ಲಿ ರಕ್ತವನ್ನು ಹೆಚ್ಚೇ ತೋರಿಸಲಾಗಿದೆ. ಇದು ಕೆಲವರಿಗೆ ಇಷ್ಟ ಆಗಿಲ್ಲ. ಈ ಬಗ್ಗೆ ಕೊಂಕು ತೆಗೆದಿದ್ದಾರೆ. ಈ ರೀತಿ ಕೊಂಕು ತೆಗೆಯೋ ಎಲ್ಲರಿಗೂ ಯಶ್ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ.‌

ಇನ್ನು ‘ಟಾಕ್ಸಿಕ್’ ಚಿತ್ರವನ್ನು ಮಲೆಯಾಳಂ ಮೂಲದ ನಿರ್ದೇಶಕಿ ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ‘ಕೆವಿಎನ್ ಪ್ರೊಡಕ್ಷನ್ಸ್‌’ ಸಂಸ್ಥೆ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ಯಶ್ ಕೂಡ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ‘ಟಾಕ್ಸಿಕ್’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನಾ ತಾರಾ, ಹುಮಾ ಖುರೇಶಿ ಮೊದಲಾದ ಕಲಾವಿದರ ಬೃಹತ್‌ ತಾರಾಗಣವೇ ಇದೆ. ಸದ್ಯ ‘ಟಾಕ್ಸಿಕ್’ ಚಿತ್ರದ ಪ್ರಚಾರ ಕಾರ್ಯಗಳನ್ನು ಜೋರಾಗಿ ನಡೆಸುತ್ತಿರುವ ಚಿತ್ರತಂಡ ಇದೇ 2026ರ ಮಾರ್ಚ್ 19ಕ್ಕೆ ‘ಟಾಕ್ಸಿಕ್’ ಸಿನೆಮಾವನ್ನು ಬಹುಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Related Posts

error: Content is protected !!