Video

ರಾಕಿಂಗ್‌ ಸ್ಟಾರ್‌ ಬರ್ತ್‌ಡೇ ಸ್ಪೆಷಲ್‌; ‘ಟಾಕ್ಸಿಕ್​’ ಟೀಸರ್ ಔಟ್‌

ಹಾಲಿವುಡ್​ ರೇಂಜ್​​​ನಲ್ಲಿ ಹೊರಬಂತು ‘ಟಾಕ್ಸಿಕ್​’ ಟೀಸರ್

ಟೀಸರಿನಲ್ಲಿ ‘ರಾಯ’ನಾಗಿ ಮಾಸ್‌ ರಾಕಿಂಗ್‌ ಸ್ಟಾರ್‌ ಮಾಸ್‌ ಎಂಟ್ರಿ…

ನಟ ಯಶ್‌ ಜನ್ಮದಿನಕ್ಕೆ ಟಾಕ್ಸಿಕ್‌ಚಿತ್ರತಂಡದಿಂದ ಟೀಸರ್‌ ಗಿಫ್ಟ್‌!

ನಟ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‘ ಸಿನೆಮಾದ ಮೊದಲ ಟೀಸರ್ 08 ಜನವರಿ 2026ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಜನವರಿ 8ರಂದು ನಟ ಯಶ್ ಜನ್ಮದಿನವಿದ್ದು, ಜನ್ಮದಿನದ ಪ್ರಯುಕ್ತ ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ಸರಿಯಾಗಿ ‘ಟಾಕ್ಸಿಕ್‘ ಚಿತ್ರತಂಡ ಚಿತ್ರದ ವಿಶೇಷ ಟೀಸರ್ ಅನ್ನು ಬಿಡುಗಡೆ ಮಾಡಿ, ನಟ ಯಶ್‌ ಅವರಿಗೆ ಜನ್ಮದಿನದ ಶುಭಾಶಯವನ್ನು ಕೋರಿದೆ.

ಹೇಗಿದೆ ‘ಟಾಕ್ಸಿಕ್’ ಟೀಸರ್… ವಿಶೇಷತೆಗಳೇನು..?

ಇನ್ನು ಬಿಡುಗಡೆಯಾಗಿರುವ ಟಾಕ್ಸಿಕ್ ಸಿನೆಮಾದ ಟೀಸರ್‌ ಅದ್ಧೂರಿಯಾಗಿ ತೆರೆಮೇಲೆ ಮೂಡಿಬಂದಿದೆ. ಹಾಲಿವುಡ್‌ ಶೈಲಿಯಲ್ಲಿ ‘ಟಾಕ್ಸಿಕ್‌’ ಸಿನೆಮಾದ ಟೀಸರ್‌ ಅನ್ನು ಕಟ್‌ ಮಾಡಲಾಗಿದೆ. ನಿರ್ದೇಶಕಿ ಗೀತು ಮೋಹನ್​​ದಾಸ್ ಟಾಕ್ಸಿಕ್‌  ಸಿನೆಮಾವನ್ನು ನಿರ್ದೇಶನ ಮಾಡುತ್ತಿದ್ದು, ಇಡೀ ಟೀಸರ್‌ನ ಮೇಕಿಂಗ್‌ ಶೈಲಿ, ಹಿನ್ನೆಲೆ ಸಂಗೀತ, ಪಾತ್ರ ಪರಿಚಯ, ಆಕ್ಷನ್‌ ಎಲ್ಲವೂ ಹಾಲಿವುಡ್‌ ಸಿನೆಮಾಗಳ ಶೈಲಿಯಲ್ಲೇ ಮೂಡಿಬಂದಿದೆ ಎನ್ನಬಹುದು. ಯಶ್‌ ಅವರ ಗೆಟಪ್‌, ಮ್ಯಾನರಿಸಂ ಎಲ್ಲವೂ ಮಾಸ್‌ ಸಿನಿಪ್ರಿಯರ, ಅಭಿಮಾನಿಗಳ ಗಮನ ಸೆಳೆಯುವಂತಿದೆ. ಟಾಕ್ಸಿಕ್ ಟೀಸರ್ ಸಖತ್ ಬೋಲ್ಡ್ ಆಗಿದ್ದು, ಆರಂಭದಲ್ಲೇ ಹಸಿ ಬಿಸಿ ದೃಶ್ಯಗಳಿಗೆ ನಿರ್ದೇಶಕರು ಜಾಗ ಕೊಟ್ಟಿದ್ದಾರೆ. ಕನ್ನಡಕ್ಕೆ ಈ ರೀತಿಯ ಮೇಕಿಂಗ್  ಹೊಸದರಂತಿದ್ದು, ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳಿರುವ ಸುಳಿವನ್ನು ಚಿತ್ರತಂಡ ಟೀಸರ್‌ನಲ್ಲಿ ಬಿಟ್ಟುಕೊಟ್ಟಿದೆ.

‘ಟಾಕ್ಸಿಕ್’ ಸಿನೆಮಾದ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಕೆಲದಿನಗಳ ಹಿಂದಷ್ಟೇ ಟಾಕ್ಸಿಕ್‘ ಚಿತ್ರತಂಡ, ಯಶ್ ಅವರ ಪೋಸ್ಟರ್ ರಿಲೀಸ್ ಮಾಡಿತ್ತು. ಆ ಬಳಿಕ ಸಿನೆಮಾದಲ್ಲಿ ಅಭಿನಯಿಸಿರುವ ನಟಿಯರಾದ ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲಾ ಹೀರೋಯಿನ್​​ಗಳ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಟಾಕ್ಸಿಕ್ ತಂಡ ಟೀಸರ್ ರಿಲೀಸ್ ಮಾಡಿ ಸಿನೆಮಾದ ಪ್ರಚಾರಕ್ಕೆ ಮುನ್ನುಡಿ ಬರೆದಿದೆ.

2026ರ ಮಾರ್ಚ್‌ 19ಕ್ಕೆ ‘ಟಾಕ್ಸಿಕ್’ ತೆರೆಗೆ

ಅಂದಹಾಗೆ, ಟಾಕ್ಸಿಕ್‘ ಸಿನೆಮಾ ಇದೇ 2026ರ ಮಾರ್ಚ್ 19ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಅದಕ್ಕೂ ಮೊದಲು ಟಾಕ್ಸಿಕ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸಿನೆಮಾ ಹೇಗಿರಬಹುದು? ಎಂಬು ಕುತೂಹಲಕ್ಕೆ ಕೊಂಚ ಕ್ಲ್ಯಾರಿಟಿ ಸಿಕ್ಕಂತೆ ಆಗಿದೆ. ಟಾಕ್ಸಿಕ್ ಸಿನೆಮಾವನ್ನು ಕೆವಿಎನ್ ಸಂಸ್ಥೆ ಬಂಡವಾಳ ಹೂಡಿ ನಿರ್ಮಿಸುತ್ತಿದೆ. ದೊಡ್ಡ ಬಜೆಟ್​​ ಅನ್ನು ‘ಟಾಕ್ಸಿಕ್‌’ ಚಿತ್ರಕ್ಕೆ ಖರ್ಚು ಮಾಡಲಾಗಿದೆ. ಟಾಕ್ಸಿಕ್‘ ಸಿನೆಮಾದ ಟೀಸರ್ ನೋಡಿದವರಿಗೆ ಅದ್ದೂರಿತನ ಎದ್ದು ಕಾಣಿಸುತ್ತಿದೆ.

ಮಲಯಾಳಂ ಚಿತ್ರರಂಗದಲ್ಲಿ ಈಗಾಗಲೇ ಭರವಸೆ ಮೂಡಿಸಿರುವ ನಿರ್ದೇಶಕಿ ಗೀತು ಮೋಹನ್​​ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ರೆಟ್ರೋ ಶೈಲಿಯಲ್ಲಿ ಟಾಕ್ಸಿಕ್ ಸಿನೆಮಾ ಮೂಡಿಬರುತ್ತಿದೆ. ಇನ್ನು ಗೀತು ಮೋಹನ್‌ ದಾಸ್‌ ಜೊತೆಗೆ ನಟ ಯಶ್ ಕೂಡ ಟಾಕ್ಸಿಕ್ ಸಿನೆಮಾಕ್ಕೆ ಕಥೆ ಬರೆದಿದ್ದಾರೆ.

Related Posts

error: Content is protected !!